/newsfirstlive-kannada/media/post_attachments/wp-content/uploads/2024/10/puttakkana-makkalu.jpg)
ಈ ಸಮಯ ಅನ್ನೋದು ಪಕ್ಕಾ 420 ಕಣ್ರೀ.. ನಮಗುನೂ ಒಂದಿನ ಟೈಮ್​ ಬರುತ್ತೆ.. ನಾವೇಲ್ಲಾ ಸಮಯದ ಗೊಂಬೆಗಳು ಎಷ್ಟೊಂದು ಹಾಡಿನ ಸಾಲುಗಳು ಟೈಮ್​ನಿ​ಯಿಂದ ಶುರುವಾಗಿ ಟೈಮ್​ಯಿಂದಲೇ ಎಂಡ್​ ಆಗಿ ಬದುಕೇ ಬದಲಾಗಿದೆ. ಸೀರಿಯಲ್​ ಇಂಡಸ್ಟ್ರಿಯಲ್ಲೂ ಈ ಥೇರಿ ಬೇರೆ ರೀತಿಯಲ್ಲೇ ವರ್ಕ್​ ಆಗುತ್ತೆ. ಸಮಯ ಬದಲಾದ್ರೇ ವೀಕ್ಷಕರು ಬದಲಾಗಿ ಬಿಡುತ್ತಾರೆ. ಅಲ್ಲಿಗೆ ಆ ಸೀರಿಯಲ್​ ಕಥೆ ಮುಗಿದಂಗ ಲೆಕ್ಕ. ಆದರೆ ಪುಟ್ಟಕ್ಕನ ವಿಷಯದಲ್ಲಿ ಹಾಗೇ ಆಗಿಲ್ಲ. ಆ ಸಮಯ ಬಂದ್ರು ಈ ಸಮಯ ಬಂದ್ರು ಸುಸಮಯ ಪುಟ್ಟಕ್ಕನದ್ದೇ.
/newsfirstlive-kannada/media/post_attachments/wp-content/uploads/2024/09/puttakka2.jpg)
ಪುಟ್ಟಕ್ಕನ ಮಕ್ಕಳು ಬಹಳ ಮನ್ನಣೆ ಪಡೆದಿರೋ ಧಾರಾವಾಹಿ. ಲಾಂಚಿಂಗ್​ನಿಂದ ಇಂದಿಗೂ ಅಭಿಮಾನಿಗಳು ಕಮ್ಮಿ ಆಗಿಲ್ಲ. ಶುರುವಿನಿಂದಲೂ ನಂಬರ್​​ ಒನ್​ ಸ್ಥಾನದಲ್ಲೇ ರಾರಾಜಿಸಿರೋ ಸೀರಿಯಲ್ ಇದು​. ಧಾರಾವಾಹಿಗಳ ಉಳಿವು ನಿಂತಿರೋದು ಪ್ರೈಮ್​ ಸ್ಲಾಟ್​ನಲ್ಲಿ. 5 ಗಂಟೆಯಿಂದ 7 ಗಂಟೆಯವರೆಗೂ ಒಂದು ಲೆಕ್ಕಾ ಆದ್ರೇ 5 ಗಂಟೆ ಮೇಲೆ ಬೇರೆಯದ್ದೇ ಲೆಕ್ಕ. ಸಮಯ ಬದಲಾದ್ರೂ ಸೌಂಡ್​ ಮಾಡ್ತಿರೋ ಏಕೈಕ ಧಾರಾವಾಹಿ ಅಂದ್ರೆ ಅದು ಪುಟ್ಟಕ್ಕನ ಮಕ್ಕಳು. 7.30ಕ್ಕೆ ಬರ್ತಿದ್ದ ಪುಟ್ಟಕ್ಕ ಧಾರಾವಾಹಿ ಸದ್ಯ 6.30ಕ್ಕೆ ಬದಲಾಗಿದೆ. ಟಿಆರ್​ಪಿ ಲಿಸ್ಟ್​ನಲ್ಲಿ ನಂಬರ್​ ಒನ್​ ಸ್ಥಾನದದಲ್ಲಿದ್ದ ಧಾರಾವಾಹಿ ಟೈಮ್​ ಚೆಂಜ್​ ಆದ್ಮೇಲೆ ಮೊದಲ ವಾರ ಕೊಂಚ ಡಲ್​ ಹೊಡೆದಿತ್ತು. ಆದ್ರೇ ಈಗ ನಂಬರ್​ 2 ಸ್ಥಾನಕ್ಕೆ ಮರಳಿದೆ. ಅದು 6.30ರ ಸ್ಲಾಟ್​ನಲ್ಲಿ. ಇದು ನಿಜಕ್ಕೂ ಸ್ಪೆಷಲ್ ಅಂತಾನೇ ಹೇಳ್ಬಹುದು. ಮೊದಲನೆಯದ್ದಾಗಿ ಪುಟ್ಟಕ್ಕ ವೀಕ್ಷಕರಿಗೆ ಹತ್ತಿರವಾಗಿದ್ದೇ ಕಲಾವಿದರ ಆಯ್ಕೆಯಿಂದ. ಹಿರಿಯ ನಟಿ ಉಮಾಶ್ರೀ, ಮಂಜು ಭಾಷಿಣಿ, ಸಾರಿಕಾ, ರಮೇಶ್ ಪಂಡಿತ್​ ಸೇರಿದಂತೆ ಹಿರಿತಲೆಗಳ ಜೊತೆ ಹೊಸಬರನ್ನ ತುಂಬಾ ಚೆನ್ನಾಗಿ ಬ್ಲೆಂಡ್​ ಮಾಡಿರೋದು ದೊಡ್ಡ ಪ್ಲಸ್​ ಪಾಯಿಂಟ್​ ಆಗಿದೆ.
/newsfirstlive-kannada/media/post_attachments/wp-content/uploads/2024/07/puttakana1.jpg)
ಎರಡನೇಯದಾಗಿ ಸ್ಟೋರಿ. ಧಾರಾವಾಹಿಯೇ ಆಗಲಿ ಸಿನಿಮಾನೇ ಆಗಲಿ ಕಥೆ ಚೆನ್ನಾಗಿದ್ದರೆ ಅರ್ಧ ಗೆದ್ದಂಗೆ ಲೆಕ್ಕ. ಪುಟ್ಟಕ್ಕನ ಸ್ಟೋರಿ ಪ್ರತಿ ಮನೆಗೂ ಕನೆಕ್ಟ್​ ಆಗುವಂತಹದ್ದು. ಅವ್ವನನ್ನೇ ಸ್ಪೂರ್ತಿ ಆಗಿ ಪಡೆದು ಸಹನಾ ಸ್ವತಂತ್ರವಾಗಿ ದುಡಿತಿರೋದು. ಸ್ನೇಹಾ ಸಾಧನೆ ಹಾದಿಯಲ್ಲಿ ಯಶಸ್ವಿಯಾಗಿರೋದು. ಸುಮಾ ಆಟದಲ್ಲಿ ಟಾಪ್​ನಲ್ಲಿರೋದು. ಮೂರನೇ ಕಾರಣ ಸ್ಕ್ರೀನ್​ ಪ್ಲೇ. ಈಗೇನಿದ್ದರೂ ಫಾಸ್ಟ್ ದುನಿಯಾ. ಟ್ರೆಂಡಿಗೆ ತಕ್ಕಹಾಗೆ ಪ್ರೀತಿ, ಭಾವುಕತೆ, ದ್ವೇಷ, ಸಾಧನೆ ಎಲ್ಲವನ್ನೂ ಪರ್ಫೆಕ್ಟ್ ಆಗಿ ತೆರೆಮೇಲೆ ನೀಡ್ತಿದೆ ತಂಡ. ಸ್ಕ್ರೀನ್​ ಪ್ಲೇ ಫಾಸ್ಟ್​ ಆಗಿದೆ. ನಾಲ್ಕನೇಯದ್ದು ಕಂಠಿ ಸ್ನೇಹಾ ಕಾಂಬಿನೇಷನ್​. ಸ್ನೇಹಾ ಖಾರ ಆದ್ರೇ ಕಂಠಿ ಸ್ವೀಟ್​. ಇಬ್ಬರ ಗುರಿ ಒಂದೇ ಆದ್ರೂ ದಾರಿ ಬೇರೆ ಬೇರೆ. ಈ ಜೋಡಿಗೆ ಯಂಗ್​ ವೀಕ್ಷಕರ ದಂಡೇ ಇದೆ. ಐದನೇಯ ಕಾರಣ ಯಾವುದೇ ಪಾತ್ರ ಬದಲಾಗದಿರೋದು.
/newsfirstlive-kannada/media/post_attachments/wp-content/uploads/2024/07/puttakana2.jpg)
ಹೌದು, ಈಗ ಮಾಡ್ತಿದ್ದ ಕಲಾವಿದರು ಬಿಟ್ಟೋಗುದು. ಮತ್ತೆ ಆ ಪಾತ್ರಕ್ಕೆ ಬೇರೆಯವರು ಬರೋದು. ಇದು ದೊಡ್ಡ ಹೊಡೆತ ಕೊಡುತ್ತೆ. ಈ ವಿಷಯದಲ್ಲಿ ಪುಟ್ಟಕ್ಕನ ಮಕ್ಕುಳು ಲಕ್ಕಿ ಅಂತನೇ ಹೇಳ್ಬಹುದು. ಈಗ ರಾಜಿ ಪಾತ್ರ ಮಾಡ್ತಿದ್ದ ಹಂಸ ಅವ್ರು ಬಿಗ್​ಬಾಸ್​ನಲ್ಲಿದ್ದಾರೆ. ಆದ್ರೇ ಆ ಪಾತ್ರನ ತೆರೆಮೇಲೆ ತೋರಿಸಿಲ್ಲ. ಇದೆಲ್ಲವೂ 6.30ರ ಸ್ಲಾಟ್​ನಲ್ಲಿದ್ದರೂ ಪುಟ್ಟಕ್ಕನ ರೇಟಿಂಗ್​ ಚೆನ್ನಾಗಿ ಬರೋದಕ್ಕೆ ಕಾರಣ. ವೀಕ್ಷಕರನ್ನ ಹಿಡಿದುಟ್ಟುಕೊಳ್ಳುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಬ್ರ್ಯಾಂಡ್​ ಆಗಿ ಉಳಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us