/newsfirstlive-kannada/media/post_attachments/wp-content/uploads/2024/12/PV-SINDHU-1.jpg)
ಒಲಿಂಪಿಕ್ಸ್ ಪದಕಗಳ ಗೆದ್ದಿರುವ ಪಿವಿ ಸಿಂಧು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಡಿಸೆಂಬರ್ 22 ರಂದು ಸಂಪ್ರದಾಯದಂತೆ ರಾಜಸ್ಥಾನದ ‘ಲೇಕ್ ಸಿಟಿ’ಯಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 20 ರಿಂದ ವಿವಾಹ ಕಾರ್ಯಕ್ರಮಗಳು ನಡೆಯಲಿವೆ.
ಸಿಂಧು ಮದ್ವೆ ಆಗ್ತಿರುವ ಹುಡುಗ ಯಾರು?
ಸಿಂಧು ಮದುವೆ ಆಗ್ತಿರುವ ಹುಡುಗನ ಹೆಸರು ವೆಂಕಟ ದತ್ತ ಸಾಯಿ (Venkata Datta Sai). ಇವರು ಕೂಡ ಮೂಲತಃ ಹೈದರಾಬಾದ್​ನವರು. ಉದ್ಯಮಿಯಾಗಿರುವ ವೆಂಕಟ ದತ್ತ ಸಾಯಿ, ಸದ್ಯ Posidex Technologies ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಲಿಬರಲ್ ಸ್ಟಡೀಸ್​ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. Flame Universityಯಲ್ಲಿ ಬಿಬಿಎ ಅಕೌಂಟಿಂಗ್ ಮತ್ತು ಫಿನಾನ್ಸ್​​ ಪದವಿ ಮುಗಿಸಿದ್ದಾರೆ. ಬೆಂಗಳೂರಿನ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಷನ್ ಟೆಕ್ನೊಲಜಿ ಸಂಸ್ಥೆಯಲ್ಲಿ ಸೈನ್ಸ್ ಅಂಡ್ ಮಷಿನ್ ಲರ್ನಿಂಗ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಪಿವಿ ಸಿಂಧು ಮದುವೆ.. ಬದುಕಿನ ಹೊಸ ಪಯಣಕ್ಕೆ ಸಿದ್ಧರಾದ ಹೆಮ್ಮೆಯ ಕುವರಿ..!
/newsfirstlive-kannada/media/post_attachments/wp-content/uploads/2024/12/PV-SINDHU.jpg)
ವೆಂಕಟ್ ದತ್ತ ಸಾಯಿ ಅವರು, ಜೆಎಸ್​ಡಬ್ಲೂ ಕಂಪನಿಗೆ ಆಂತರಿಕ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. 2019ರಲ್ಲಿ ಆ್ಯಪಲ್ ಅಸೆಟ್​ ಮ್ಯಾನೇಜ್ಮೆಂಟ್​ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ Posidexನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್​ ಆಗಿದ್ದಾರೆ. ಐಪಿಎಲ್ ನಿರ್ವಹಣೆಗೆ ಹೋಲಿಸಿದರೆ ನನ್ನ ಫಿನಾನ್ಸ್ ಮತ್ತು ಎಕನಾಮಿಕ್ಸ್​ನಲ್ಲಿ ನನ್ನ ಬಿಬಿಎ ಮುಸುಕಾಗಿದೆ. ಈ ಎರಡು ಅನುಭವಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಲಿಂಕ್ಡ್​​ ಇನ್ ಪ್ರೊಫೈಲ್​​ನಲ್ಲಿ ಬರೆದುಕೊಂಡಿದ್ದಾರೆ. ಅವರ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರ ಬರಬೇಕಿದೆ.
ಪಿವಿ ಸಿಂಧು ಭಾರತದ ಜನಪ್ರಿಯ ಕ್ರೀಡಾಪಟು. ಬ್ಯಾಡ್ಮಿಂಟನ್‌ನಲ್ಲಿ ಅವರು ಮಾಡಿರುವ ಸಾಧನೆ ದೇಶಕ್ಕೆ ಹೆಮ್ಮೆ ಇದೆ. ಒಲಿಂಪಿಕ್ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಗೌರವ ಹೆಚ್ಚಿಸಿದ ಸಾಧಕಿ ಪಿವಿ ಸಿಂಧು.
ಇದನ್ನೂ ಓದಿ:ಬಾಲಿವುಡ್​ನ ಖ್ಯಾತ ನಟಿಯ ಸಹೋದರಿ ಅರೆಸ್ಟ್​.. ಅಲಿಯಾ ಮಾಡಿದ್ದಾದರೂ ಏನು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us