newsfirstkannada.com

ರೈತನ ಅಡಿಕೆ ತೋಟದಲ್ಲಿ ಭಯಹುಟ್ಟಿಸಿದ್ದ ಬೃಹತ್ ಗಾತ್ರದ ಹೆಬ್ಬಾವಿನ ರಕ್ಷಣೆ..!

Share :

14-09-2023

    ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿದ್ದ ಹೆಬ್ಬಾವು

    ಚಿತ್ರದುರ್ಗದ ಉರಗ ರಕ್ಷಕ ಶಿವು ಅವರಿಂದ ರಕ್ಷಣೆ

    ಹಾವಿನ ರಕ್ಷಣೆ ಬೆನ್ನಲ್ಲೇ ನಿಟ್ಟುಸಿರು ಬಿಟ್ಟ ರೈತ ಕುಟುಂಬ

ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿರುವ ಈರಣ್ಣ ಎಂಬ ರೈತನ ಅಡಿಕೆ ತೋಟದಲ್ಲಿ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಕಳೆದ ಮೂರು ದಿನಗಳಿಂದ ಹೆಬ್ಬಾವು ಒಂದೇ ಜಾಗದಲ್ಲಿ ಇತ್ತು.

ಇದು ತೋಟದಲ್ಲಿ ಕೆಲಸ ಮಾಡ್ತಿದ್ದ ಕೂಲಿ ಕಾರ್ಮಿಕರ ಆತಂಕಕ್ಕೆ ಕಾರಣವಾಗಿತ್ತು. ಸುರಕ್ಷತೆ ಮನಗಂಡ ರೈತ ಈರಣ್ಣ ಕೂಡಲೇ ಚಿತ್ರದುರ್ಗದ ಉರಗ ರಕ್ಷಕ ಶಿವುಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ಬಳಿಕ ಸ್ಥಳಕ್ಕೆ ಬಂದ ಶಿವು ತೋಟದಲ್ಲಿ ಅಡಗಿದ್ದ ಸುಮಾರು 12 ಅಡಿ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ನಗರದ ಹೊರವಲಯದ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಬೃಹತ್​ ಗಾತ್ರದ ಹಾವನ್ನ ಸೆರೆ ಹಿಡಿಯುವ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈತನ ಅಡಿಕೆ ತೋಟದಲ್ಲಿ ಭಯಹುಟ್ಟಿಸಿದ್ದ ಬೃಹತ್ ಗಾತ್ರದ ಹೆಬ್ಬಾವಿನ ರಕ್ಷಣೆ..!

https://newsfirstlive.com/wp-content/uploads/2023/09/SNAKE-1-1.jpg

Load More