ನೌಕಾಪಡೆ 8 ಮಾಜಿ ಅಧಿಕಾರಿಗಳ ಜೀವಕ್ಕೆ ಆಪತ್ತು!
ಎಂಟು ಮಂದಿ ಮೇಲೆ ಕತಾರ್ ಸರ್ಕಾರ ಗಂಭೀರ ಆರೋಪ
ಕತಾರ್‌ನ ಜಲಾಂತರ್ಗಾಮಿ ಯೋಜನೆ ಸಂಬಂಧಿಸಿ ವರದಿ
ಕತಾರ್‌ನಲ್ಲಿ ಬಂಧಿತರಾಗಿದ್ದ ಎಂಟು ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಈ ಬಗ್ಗೆ ಭಾರತ ಸರ್ಕಾರ ತೀವ್ರ ಆಘಾತ ಮತ್ತು ಕಳವಳ ವ್ಯಕ್ತಪಡಿಸಿದೆ. ಭಾರತೀಯರ ಬಿಡುಗಡೆಗೆ ಕಾನೂನು ಆಯ್ಕೆಗಳನ್ನ ಅನ್ವೇಷಿಸಲಾಗ್ತಿದೆ ಅಂತ ಹೇಳಿದೆ. ಈ ಮಾಜಿ ಅಧಿಕಾರಿಗಳನ್ನು ಬಂಧಿಸಿದ್ದು ಯಾಕೆ? ಇಸ್ರೇಲ್‌ನೊಂದಿಗೆ ಸಂಪರ್ಕ ಬೆಸೆಯುತ್ತಿರೋದೇಕೆ? ಕತಾರ್ ಹೆಣೆದ ಜಾಲ ಎಂಥದ್ದು ನೋಡೋಣ.
ಮಧ್ಯಪ್ರಾಚ್ಯದ ಕತಾರ್ ಕನಿಷ್ಠ ನ್ಯಾಯಾದಾನ ನೀಡುವಲ್ಲಿ ಅನಿಷ್ಠತನ ತೋರಿ ಹುಚ್ಚಾಟ ಮೆರೆದಿದೆ. ಭಾರತ ಮೂಲದ 8 ಮಂದಿ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಸತತ ಒಂದು ವರ್ಷ ನಿಗೂಢವಾಗಿ ಜೈಲಿನಲ್ಲಿರಿಸಿದ್ದ ಕತಾರ್ ಸರ್ಕಾರ, ಮಾಡಿದ ಅಪರಾಧ ಬಗ್ಗೆ ಬಾಯಿ ಮುಚ್ಚಿತ್ತು. ಕತಾರ್‌ನ ಕೋರ್ಟ್, ವರ್ಷದ ಬಳಿಕ ಈಗ ಕಾರಣ ಕೊಟ್ಟು ಏಕಾಏಕಿ ಅಸಂಬದ್ಧ ತೀರ್ಪು ನೀಡಿದೆ. ಈ ಮೂಲಕ ಭಾರತದ ಆಕ್ರೋಶಕ್ಕೆ ಗುರಿ ಆಗಿದೆ.
ಖತರ್ನಾಕ್ ಕತಾರ್ನಿಂದ ಬೇಹುಗಾರಿಕೆ ಆರೋಪ!
ಒಂದು ಕಾಲದಲ್ಲಿ ಭಾರತೀಯ ಯುದ್ಧನೌಕೆಗಳಿಗೆ ಕಮಾಂಡರ್ಗಳಾಗಿದ್ದ ಅಧಿಕಾರಿಗಳು ಸೇರಿ 8 ಮಂದಿ ಜೀವಕ್ಕೆ ಆಪತ್ತು ಬಂದಿದೆ.. ಕಳೆದ ವರ್ಷ ಆಗಸ್ಟ್‌ನಲ್ಲಿ ಬಂಧಿಸಲಾಗಿದ್ದ ಭಾರತದ ನೌಕಾಪಡೆಯ 8 ನಿವೃತ್ತ ಅಧಿಕಾರಿಗಳಿಗೆ ಕತಾರ್ ಕೋರ್ಟ್ ಮರಣದಂಡನೆ ವಿಧಿಸಿದೆ. ಭಾರತ ಸರ್ಕಾರವು ಈ ವಿಚಾರವಾಗಿ ತೀವ್ರ ಆಘಾತ ವ್ಯಕ್ತಪಡಿಸಿದೆ.. ವರ್ಷದಿಂದ ಸೆರೆಯಲ್ಲಿದ್ದ 8 ಜನರ ವಿರುದ್ಧ ಮಾರ್ಚ್ನಲ್ಲಷ್ಟೇ ಬೇಹುಗಾರಿಕೆ ಆರೋಪ ರಚಿಸಿತ್ತು.
ಎಂಟು ಮಾಜಿ ಅಧಿಕಾರಿಗಳು ಯಾರು?
1. ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್
2. ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ
3. ಕ್ಯಾಪ್ಟನ್ ಸೌರಭ್ ವಶಿಷ್ಠ
4. ಕಮಾಂಡರ್ ಅಮಿತ್ ನಾಗ್ಪಾಲ್
5. ಕಮಾಂಡರ್ ಪೂರ್ಣೇಂದು ತಿವಾರಿ
6. ಕಮಾಂಡರ್ ಸುಗುಣಾಕರ್ ಪಾಕಲಾ
7. ಕಮಾಂಡರ್ ಸಂಜೀವ್ ಗುಪ್ತಾ
8. ರಾಗೇಶ್
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಠ, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ಸೈಲರ್ ರಾಗೇಶ್ ಗಲ್ಲು ಶಿಕ್ಷೆಗೆ ಗುರಿಯಾದ ಮಾಜಿ ಅಧಿಕಾರಿಗಳಾಗಿದ್ದಾರೆ.
ಕತಾರ್ ಆರೋಪ ಏನು?
ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಎಂಟು ಮಂದಿ ನೌಕಾಪಡೆಯ ಅಧಿಕಾರಿಗಳ ಮೇಲೆ ಕತಾರ್ ಸರ್ಕಾರ ಗಂಭೀರ ಆರೋಪಗಳನ್ನೇ ಮಾಡಿದೆ. ಈ ಅಧಿಕಾರಿಗಳು ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಹೇಳಿದೆ. ಕತಾರ್‌ನ ಜಲಾಂತರ್ಗಾಮಿ ಯೋಜನೆಗೆ ಸಂಬಂಧಿಸಿದ ಮಾಹಿತಿ ಪಡೆದು ಇಸ್ರೇಲ್‌ಗೆ ನೀಡಿದ್ದಾರೆ ಅಂತ ಹೇಳ್ತಿದೆ. ಕತಾರ್‌ನ ಈ ಜಲಾಂತರ್ಗಾಮಿ ನೌಕೆಗಳು U212 ನಿಯರ್ ಫ್ಯೂಚರ್ ಜಲಾಂತರ್ಗಾಮಿ ನೌಕೆಯ ಚಿಕ್ಕ ಆವೃತ್ತಿಯಾಗಿದೆ. ಜರ್ಮನಿಯ ನೆರವಿನೊಂದಿಗೆ ಇಟಲಿ ಈ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆ ನಿರ್ಮಿಸ್ತಿದೆ. ಇದೇ ಯೋಜನೆ ಸೋರಿಕೆ ಆಗಿದ್ದಕ್ಕೆ 8 ಭಾರತೀಯರನ್ನ ಗುರಿಯಾಗಿಸಿ ಶಿಕ್ಷೆ ನೀಡಿದೆ.
ಕತಾರ್ ಸರ್ಕಾರ ಹೇಳ್ತಿರೋದು ಸುಳ್ಳೇ ಸುಳ್ಳು
ಗಲ್ಲು ಶಿಕ್ಷೆಗೆ ಗುರಿಯಾದ 8 ಮಂದಿ ಭಾರತೀಯ ಯುದ್ಧ ನೌಕೆಗಳಿಗೆ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಕತಾರ್‌ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿ ಮತ್ತು ಸಂಬಂಧಿತ ಸೇವೆಗಳನ್ನ ಒದಗಿಸುವ ಖಾಸಗಿ ಸಂಸ್ಥೆ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸ್‌ಗಾಗಿ ಕೆಲಸ ಮಾಡ್ತಿದ್ರು. ಹಲವು ಬಾರಿ ಇವರ ಜಾಮೀನು ಅರ್ಜಿ ಬಾರಿ ತಿರಸ್ಕರಿಸಲಾಗಿತ್ತು. ಗೌಪ್ಯವಾಗಿ ವಿಚಾರಣೆ ನಡೆಸುತ್ತಿದ್ದ ಕತಾರ್ ಕೋರ್ಟ್, ಶಿಕ್ಷೆ ಅವಧಿಯನ್ನ ವಿಸ್ತರಿಸುತ್ತಾ ಬಂದಿತ್ತು. ಇತ್ತೀಚೆಗೆ ಭಾರತೀಯ ಪತ್ರಕರ್ತರು, ಮಾಜಿ ಅಧಿಕಾರಿಗಳ ಸಂಬಂಧಿಕರು ಈ ಬಗ್ಗೆ ಪ್ರಶ್ನಿಸಿದ್ದರು. ಮಾಹಿತಿ ನೀಡಲು ಕತಾರ್ ನಿರಾಕರಿಸಿದ್ದಲ್ಲದೆ, ದೇಶವನ್ನೇ ಬಿಟ್ಟು ಹೋಗುವಂತೆ ಆದೇಶಿಸಿತ್ತು.
ಎಂಟು ಭಾರತೀಯರ ಗಲ್ಲು ಶಿಕ್ಷಗೆ ಭಾರತ ಆಘಾತ!
8 ಮಂದಿ ಗಲ್ಲು ಶಿಕ್ಷೆ ನೀಡಿರುವ ಕತಾರ್ ನಿರ್ಧಾರಕ್ಕೆ ಭಾರತ ಸರ್ಕಾರ ತೀವ್ರ ಆಘಾತ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ವಿದೇಶಾಂಗ ಇಲಾಖೆ, ತನ್ನ ನಾಗರಿಕರ ಬಿಡುಗಡೆಗೆ ಸದ್ಯವಿರುವ ಎಲ್ಲಾ ಕಾನೂನು ಆಯ್ಕೆಗಳನ್ನ ಬಳಸುವುದಾಗಿ ಭರವಸೆ ನೀಡಿದೆ. ಭಾರತೀಯರನ್ನ ಗಲ್ಲು ಶಿಕ್ಷೆಯಿಂದ ತಪ್ಪಿಸಲು ಕಾನೂನು ಸಹಾಯ ನೀಡುತ್ತೇವೆ ಅಂತ ಹೇಳಿದೆ.
ಒಟ್ಟಾರೆ, ಬೇಹುಗಾರಿಕೆ ಬಗ್ಗೆ ತಮ್ಮ ಬಳಿ ಸಾಕಷ್ಟು ಸಾಕ್ಷ್ಯ ಇದೆ ಅಂತ ಕತಾರ್ ಹೇಳ್ತಿದೆ. ಆದರೆ, ಕಳೆದ ಒಂದು ವರ್ಷದಿಂದ ನಿಗೂಢವಾಗಿ ಬಂಧಿಸಿದ್ದೇಕೆ ಅನ್ನೋ ಪ್ರಶ್ನೆಗೆ ಕತಾರ್ ಬಳಿ ಉತ್ತರವಿಲ್ಲ. ಅಲ್ಲದೆ, ಭಾರತದ ಸರ್ಕಾರದ ಜೊತೆ ನಿರ್ದಿಷ್ಟ ಮಾಹಿತಿ ಹಂಚಿಕೊಂಡಿಲ್ಲ. ಈ ಎಲ್ಲಾ ಬೆಳವಣಿಗೆಗಳು ಭಾರತ ಮತ್ತು ಕತಾರ್ ನಡುವಿನ ರಾಜತಾಂತ್ರಿಕ ಸಂಬಂಧ ವಿಷಮಿಸುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ