ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸಲು ಹೋಗಿದ್ವಿ
ನಾನು ಯಡಿಯೂರಪ್ಪರನ್ನ ಕರೆದುಕೊಂಡು ಹೋಗಿದ್ದೆ
ಅಂದು ಈದ್ಗಾ ಮೈದಾನದಲ್ಲಿ ಶೆಟ್ಟರ್ ಕಾಣಿಸಲಿಲ್ಲ -ಅಶೋಕ್
ಬೆಂಗಳೂರು: ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಬಗ್ಗೆ ಬಿಜೆಪಿಯ ಆರ್.ಅಶೋಕ್ ವಾಗ್ದಾಳಿ ನಡೆಸಿ.. ಶೆಟ್ಟರ್ ಅಧಿಕಾರ ಬಂದಾಗ ಮಾತ್ರ ಕಾಣಿಸುತ್ತಾರೆ. ಎಲೆ ಹಾಕಿ ಊಟ ಹಾಕುವ ಸಮಯದಲ್ಲಿ ಶೆಟ್ಟರ್ ಬರುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ನನಗೆ 19 ರಿಂದ 20 ವಯಸ್ಸು ಇರಬೇಕು. ಅಂದು ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸುವ ಸಂದರ್ಭ. ನಾನು ಯಡಿಯೂರಪ್ಪರನ್ನು ಕರೆದುಕೊಂಡು ಹೋಗಿದ್ದೆ. ಅಂದು ಈದ್ಗಾ ಮೈದಾನದಲ್ಲಿ ನನಗೆ ಜಗದೀಶ್ ಶೆಟ್ಟರ್ ಕಾಣಿಸಲಿಲ್ಲ. ಅವರು ಹೇಗೆ ಅಂದರೆ ಅಧಿಕಾರ ಬಂದಾಗ ಮಾತ್ರ ಕಾಣಿಸುತ್ತಾರೆ ಎಂದು ಟೀಕಿಸಿದ್ದಾರೆ.
ಅವರು ಸರಿಯಾದ ಸಮಯಕ್ಕೆ ಬರುತ್ತಾರೆ. ಅಂದು ಪಕ್ಷ ಅಧಿಕಾರಕ್ಕೆ ಬಂತು. ಬಂದರೂ ವಿಧಾನಸಭೆಯ ವಿಪಕ್ಷ ನಾಯಕರಾದರು. ಅಂದು ಬಿ.ಬಿ.ಶಿವಪ್ಪ ವಿಪಕ್ಷ ನಾಯಕರಾಗಬೇಕಾಗಿತ್ತು. ಅದನ್ನು ಮಾಡಲು ಬಿಡಲಿಲ್ಲ. ಬಳಿಕ ಮುಖ್ಯಮಂತ್ರಿ ಕೂಡ ಆಗಿಬಿಟ್ಟರು. ಎಲೆ ಹಾಕಿದಾಗ, ಊಟ ಬಡಿಸಿದಾಗ ಬಂದು ಊಟ ಮಾಡಿ ಹೋಗುವುದು ಅವರ ನಡುವಳಿಕೆ ಎಂದು ವ್ಯಂಗ್ಯವಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ