newsfirstkannada.com

VIDEO: ಪದ್ಮನಾಭನಗರದಿಂದಲೇ ಪವರ್ ಪಾಲಿಟಿಕ್ಸ್ ಶುರುವಾಯ್ತಾ? ಆರ್‌.ಅಶೋಕ್‌ಗೆ ದೇವೇಗೌಡರ ಕಿವಿಮಾತು; ಏನದು?

Share :

18-11-2023

    ಆರು ತಿಂಗಳಲ್ಲಿ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದ ಸರ್ಕಾರ

    ಸಚಿವ ಕೃಷ್ಣ ಭೈರೇಗೌಡರ ಮೇಲೆ ಆರ್‌.ಅಶೋಕ್ ಬೇಸರ

    ವಿಪಕ್ಷ ನಾಯಕನಿಗೆ ಮಹತ್ವದ ಸಲಹೆ ಕೊಟ್ಟ ದೇವೇಗೌಡರು

ಬೆಂಗಳೂರು: ವಿರೋಧ ಪಕ್ಷ ನಾಯಕನಾಗಿ ಆಯ್ಕೆಯಾದ ಆರ್. ಅಶೋಕ್‌ ಅವರು ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರನ್ನ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಪದ್ಮನಾಭನಗರದ ತಮ್ಮ ನಿವಾಸಕ್ಕೆ ಆಗಮಿಸಿದ ಅಶೋಕ್ ಅವರಿಗೆ ಹೆಚ್.ಡಿ ದೇವೇಗೌಡರ ಶುಭಾಶಯ ಕೋರಿದರು. ಹಿರಿಯ ನಾಯಕರ ಆಶೀರ್ವಾದ ಪಡೆದ ವಿಪಕ್ಷ ನಾಯಕ ಅಶೋಕ್ ಅವರು ಕೆಲ ಕಾಲ ಮಹತ್ವದ ಚರ್ಚೆ ನಡೆಸಿದರು.

ನೂತನ ವಿಪಕ್ಷ ನಾಯಕರ ಜೊತೆ ಕಾಂಗ್ರೆಸ್‌ ಸರ್ಕಾರದ ಕುರಿತು ಮಾತನಾಡಿದ ದೇವೇಗೌಡರು, ರಾಜ್ಯ ಸರ್ಕಾರದಲ್ಲಿ‌ ಭ್ರಷ್ಟಾಚಾರ ನಡೆಯುತ್ತಿದೆ. ಸಚಿವರು, ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಹೆಚ್‌ಡಿಡಿ ತೀವ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಆರ್. ಅಶೋಕ್, ಹೆಚ್‌.ಡಿ ದೇವೇಗೌಡರ ಮಧ್ಯೆ ನಡೆದ ಮಾತುಕತೆ ಏನು ಅನ್ನೋದು ಇಲ್ಲಿದೆ ನೋಡಿ.

ಅಶೋಕ್ ಹಾಗೂ ಹೆಚ್‌ಡಿಡಿ ಸಂಭಾಷಣೆ ಏನು?

ಆರ್. ಅಶೋಕ್: ಒಬ್ಬರಿಗಿಂತ ಒಬ್ಬರು ಎಲ್ಲರೂ ಬೀದಿಗಿಳಿದ್ದಾರೆ
ಹೆಚ್‌ಡಿಡಿ: ಎಲ್ಲರೂ.. ಯಾರು ಹೆಚ್ಚು ಕಮ್ಮಿ ಏನು ಇಲ್ಲ
ಆರ್. ಅಶೋಕ್: ಕೃಷ್ಣ ಭೈರೇಗೌಡ ಅಂತು ಡಬಲ್ ಆಗಿಬಿಡವ್ನೆ.. ಬರೀ ದ್ವೇಷ.. ದ್ವೇಷ
ಹೆಚ್‌ಡಿಡಿ: ಇಷ್ಟೊಂದು ಕೆಟ್ಟ ಸರ್ಕಾರ ಆರು ತಿಂಗಳಲ್ಲಿ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿದೆ

ಹೀಗೆ ವಿಪಕ್ಷ ನಾಯಕ ಅಶೋಕ್ ಜೊತೆ ಚರ್ಚೆ ನಡೆಸಿದ ದೇವೇಗೌಡರು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡುವ ಸಿದ್ಧತೆಯಂತೂ ಪದ್ಮನಾಭನಗರದಿಂದಲೇ ಆರಂಭವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪದ್ಮನಾಭನಗರದಿಂದಲೇ ಪವರ್ ಪಾಲಿಟಿಕ್ಸ್ ಶುರುವಾಯ್ತಾ? ಆರ್‌.ಅಶೋಕ್‌ಗೆ ದೇವೇಗೌಡರ ಕಿವಿಮಾತು; ಏನದು?

https://newsfirstlive.com/wp-content/uploads/2023/11/r-ashok-1-1.jpg

Load More