newsfirstkannada.com

×

ಟೆಸ್ಟ್​​ನಲ್ಲಿ ಸ್ಟಾರ್​ ಆಲ್​ರೌಂಡರ್​​ ಕಮಾಲ್​​; ಅನಿಲ್​ ಕುಂಬ್ಳೆ ದಾಖಲೆಯನ್ನೇ ಮುರಿದ R ಅಶ್ವಿನ್​​!

Share :

Published September 22, 2024 at 7:12pm

    ಮೊದಲ ಟೆಸ್ಟ್​​ನಲ್ಲಿ ಬಾಂಗ್ಲಾ ವಿರುದ್ಧ ಟೀಮ್​​ ಇಂಡಿಯಾಗೆ ಐತಿಹಾಸಿಕ ಗೆಲುವು!

    ಪಂದ್ಯ ಗೆಲ್ಲಲು ಟೀಮ್​ ಇಂಡಿಯಾದ ಅನುಭವಿ ಆಟಗಾರ ಆರ್​​.​ ಅಶ್ವಿನ್ ಕಾರಣ

    ಟೀಮ್​ ಇಂಡಿಯಾ ಪರ ಅದ್ಭುತ ದಾಖಲೆ ನಿರ್ಮಿಸಿದ ಆಲ್​ರೌಂಡರ್​​​ ಆರ್​​.​ ಅಶ್ವಿನ್

ಇತ್ತೀಚೆಗೆ ಚೆನ್ನೈನ ಎಂ.ಎ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್​​ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಪಂದ್ಯ ಗೆಲ್ಲಲು ಟೀಮ್​ ಇಂಡಿಯಾದ ಅನುಭವಿ ಆಟಗಾರ ರವಿಚಂದ್ರನ್​ ಅಶ್ವಿನ್​​. ಇವರು ಈ ಟೆಸ್ಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಆರ್‌. ಅಶ್ವಿನ್ ತಮ್ಮ ತವರಿನ ಪಿಚ್‌ನಲ್ಲಿ ಅಮೋಘ ಬ್ಯಾಟಿಂಗ್​ ಮಾಡಿದ್ರು. ಭರ್ಜರಿ ಶತಕ ಸಿಡಿಸಿ ಟೀಮ್​​ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದ್ರು. ಬಳಿಕ 2ನೇ ಇನ್ನಿಂಗ್ಸ್​​ನಲ್ಲಿ ಬೌಲಿಂಗ್​​​ ಮೂಲಕ ತಂಡಕ್ಕೆ ಆಧಾರವಾಗಿದ್ದಾರೆ.

ಅಶ್ವಿನ್‌ಗೆ 6 ವಿಕೆಟ್‌

ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ 2ನೇ ಇನಿಂಗ್ಸ್‌ನಲ್ಲಿ ಬಾಂಗ್ಲಾ ಬ್ಯಾಟರ್‌ಗಳಿಗೆ ಕಾಟ ಕೊಟ್ಟರು. 515 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಬಾಂಗ್ಲಾ ಕೇವಲ 234 ರನ್​ಗಳಿಗೆ ಆಲೌಟ್​ ಆಗಿತ್ತು. ಅಶ್ವಿನ್​ ಬರೋಬ್ಬರಿ 6 ವಿಕೆಟ್​ ಅಬ್ಬರಿಸಿದ್ರು.

ಅನಿಲ್‌ ಕುಂಬ್ಳೆ ದಾಖಲೆ ಮುರಿದ ಅಶ್ವಿನ್‌

6 ವಿಕೆಟ್‌ಗಳ ಸಹಾಯದಿಂದ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಶ್ರೇಷ್ಠ ಬೌಲರ್ ಅನಿಲ್ ಕುಂಬ್ಳೆ ದೊಡ್ಡ ದಾಖಲೆಯನ್ನೇ ಮುರಿದ್ರು. ಅಶ್ವಿನ್ ಭಾರತದ ಪರ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಈ ಟೆಸ್ಟ್‌ಗೂ ಮುನ್ನ ಈ ದಾಖಲೆ ಅನಿಲ್‌ ಕುಂಬ್ಳೆ ಹೆಸರಲ್ಲಿತ್ತು. ಇವರು 4ನೇ ಇನಿಂಗ್ಸ್‌ನಲ್ಲಿ 94 ವಿಕೆಟ್‌ಗಳನ್ನು ಪಡೆದಿದ್ದರು. ಈ ದಾಖಲೆ ಮುರಿದ ಅಶ್ವಿನ್‌ 99 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ: ಬಾಂಗ್ಲಾಗೆ ಚಮಕ್ ಕೊಟ್ಟ R ಅಶ್ವಿನ್, ಜಡೇಜಾ.. ಟೀಮ್ ಇಂಡಿಯಾಗೆ ಭರ್ಜರಿ ಗೆಲುವು

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೆಸ್ಟ್​​ನಲ್ಲಿ ಸ್ಟಾರ್​ ಆಲ್​ರೌಂಡರ್​​ ಕಮಾಲ್​​; ಅನಿಲ್​ ಕುಂಬ್ಳೆ ದಾಖಲೆಯನ್ನೇ ಮುರಿದ R ಅಶ್ವಿನ್​​!

https://newsfirstlive.com/wp-content/uploads/2024/02/R-Ashwin.jpg

Load More