newsfirstkannada.com

×

ಬಾಂಗ್ಲಾ ಜೊತೆ ಬೆಸ್ಟ್ ಆಲ್​ರೌಂಡರ್ ಪ್ರದರ್ಶನ.. ಲೆಜೆಂಡರಿ ಪ್ಲೇಯರ್ ದಾಖಲೆ ಸರಿಗಟ್ಟಿದ R ಅಶ್ವಿನ್!

Share :

Published October 2, 2024 at 8:41am

Update October 2, 2024 at 8:43am

    ಮೊದಲ ಟೆಸ್ಟ್​ನಲ್ಲಿ ಭಾರತ ಗೆಲುವಿಗೆ ಕಾರಣವಾಗಿದ್ದ ಅಶ್ವಿನ್

    ಬಾಂಗ್ಲಾ ಜೊತೆಗಿನ 2 ಪಂದ್ಯಗಳಲ್ಲಿ ಅಶ್ವಿನ್ ಪಡೆದ ವಿಕೆಟ್?

    ರವಿಚಂದ್ರನ್ ಅಶ್ವಿನ್ ಸದ್ಯ ದಾಖಲೆ ಸರಿಗಟ್ಟಿರುವುದು ಏನು?

ತವರಿನಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳನ್ನು ಟೀಮ್ ಇಂಡಿಯಾ ಕ್ಲೀನ್ ಸ್ವಿಪ್ ಮಾಡಿದೆ. ಇದರಿಂದ ಬಾಂಗ್ಲಾದೇಶಕ್ಕೆ ಭಾರೀ ಮುಖಭಂಗವಾಗಿದೆ. ಎರಡು ಟೆಸ್ಟ್ ಪಂದ್ಯಗಳಲ್ಲೂ ರವಿಚಂದ್ರನ್ ಅಶ್ವಿನ್ ಅವರು ಅದ್ಭುತ ಪ್ರದರ್ಶನ ನೀಡಿದರು. ಮೊದಲ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ತಂಡದ ಗೆಲುವಿಗೆ ಕಾರಣವಾದರೆ, 2ನೇ ಪಂದ್ಯದಲ್ಲಿ 5 ವಿಕೆಟ್​ಗಳನ್ನ ಕಬಳಿಸಿದರು. ಇದರ ಜೊತೆ ಶ್ರೀಲಂಕಾದ ಲೆಜೆಂಡರಿ ಮಾಜಿ ಕ್ರಿಕೆಟ್ ಪ್ಲೇಯರ್ ಮುತ್ತಯ್ಯ ಮುರಳೀಧರ್ ರೆಕಾರ್ಡ್ ಸರಿಗಟ್ಟಿದ್ದಾರೆ.

ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್​ ರಿಟೈನ್​.. ಫ್ರಾಂಚೈಸಿಯಿಂದ ಕ್ಯಾಪ್ಟನ್​ಗೆ ಬಿಗ್ ಶಾಕ್?

ಎರಡು ಪಂದ್ಯಗಳಲ್ಲೂ ಆರ್ ಅಶ್ವಿನ್ ಸ್ಟಾರ್ ಪ್ರದರ್ಶನ ತೋರಿದ್ದಾರೆ. ಇದರಿಂದ ಭಾರತ ಸರಣಿಯಲ್ಲಿ 2-0 ದಿಂದ ವಶಪಡಿಸಿಕೊಳ್ಳಲು ನೆರವಾಯಿತು. ಮೊದಲ ಪಂದ್ಯದಲ್ಲಿ ಅಮೋಘ ಸೆಂಚುರಿ ಬಾರಿಸಿದ್ದ ಅಶ್ವಿನ್ ಇದರ ಜೊತೆಗೆ 6 ವಿಕೆಟ್​ಗಳನ್ನು ಪಡೆದು ಅಂಭ್ರಮಿಸಿದ್ದರು. ಅಲ್ಲದೇ 2ನೇ ಪಂದ್ಯದ ಕ್ರೂಷಿಯಲ್ ಸಂದರ್ಭದಲ್ಲಿ ಅತ್ಯದ್ಭುತ ಬೌಲಿಂಗ್ ಮಾಡಿದ ಅಶ್ವಿನ್ 5 ವಿಕೆಟ್ ಪಡೆದರು. ಒಟ್ಟಾರೆ ಈ ಸರಣಿಯಲ್ಲಿ ಆರ್ ಅಶ್ವಿನ್ ಒನ್​ ಮ್ಯಾನ್ ಶೋ ಎನ್ನುವಂತೆ 1 ಶತಕ, 11 ವಿಕೆಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಮ್ಯಾನ್​ ಆಫ್​ ದಿ ಸೀರೀಸ್ ಪ್ರಶಸ್ತಿ ನೀಡಲಾಗಿದೆ.

ಇದನ್ನೂ ಓದಿ: Ind vs Ban; ಅಶ್ವಿನ್​ ಮತ್ತೊಂದು ದಾಖಲೆ.. ಟೀಮ್ ಇಂಡಿಯಾ ಗೆಲ್ಲಲು ಏನ್ ಮಾಡಬೇಕು?

ಬಾಂಗ್ಲಾ ವಿರುದ್ಧ ಅತ್ಯುತ್ತಮವಾಗಿ ಆಡಿದ ಆರ್.ಅಶ್ವಿನ್ ಮ್ಯಾನ್​ ಆಫ್​ ದಿ ಸೀರೀಸ್ ಪಡೆಯುವ ಮೂಲಕ ಮುತ್ತಯ್ಯ ಮುರಳೀಧರ್ ರೆಕಾರ್ಡ್ ಅನ್ನು ಸರಿಗಟ್ಟಿದ್ದಾರೆ. ಶ್ರೀಲಂಕಾದ ಮಾಜಿ ಕ್ರಿಕೆಟ್ ಪ್ಲೇಯರ್ ಆಗಿರುವ ಮುರಳೀಧರ್ ಅವರು ಒಟ್ಟು 11 ಮ್ಯಾನ್​ ಆಫ್​ ದಿ ಸೀರೀಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸದ್ಯ ಅಶ್ವಿನ್ ಕೂಡ 11 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು ಈ ದಾಖಲೆ ಅಳಿಸಲು ಇನ್ನೊಂದು ಹೆಜ್ಜೆ ಬಾಕಿ ಇದೆ.

ಹೆಚ್ಚು ಮ್ಯಾನ್​ ಆಫ್​ ದಿ ಸೀರೀಸ್ ಪಡೆದ ಆಟಗಾರರು

  • ಮುತ್ತಯ್ಯ ಮುರಳೀಧರನ್- 11
  • ರವಿಚಂದ್ರನ್ ಅಶ್ವಿನ್- 11
  • ಜಾಕ್ ಕಾಲಿಸ್- 9
  • ಸರ್ ರಿಚರ್ಡ್ ಹ್ಯಾಡ್ಲಿ- 8
  • ಇಮ್ರಾನ್ ಖಾನ್- 8
  • ಶೇನ್ ವಾರ್ನ್- 8

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬಾಂಗ್ಲಾ ಜೊತೆ ಬೆಸ್ಟ್ ಆಲ್​ರೌಂಡರ್ ಪ್ರದರ್ಶನ.. ಲೆಜೆಂಡರಿ ಪ್ಲೇಯರ್ ದಾಖಲೆ ಸರಿಗಟ್ಟಿದ R ಅಶ್ವಿನ್!

https://newsfirstlive.com/wp-content/uploads/2024/02/R-Ashwin-500-Wicket.jpg

Load More