newsfirstkannada.com

ದ್ರಾವಿಡ್​​, ರೋಹಿತ್​​ ವಿರುದ್ಧ ಭಾರೀ ಅಸಮಾಧಾನ; ತೀವ್ರ ಆಕ್ರೋಶ ಹೊರಹಾಕಿದ ಆರ್​​. ಅಶ್ವಿನ್​​!

Share :

16-06-2023

    ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸೋಲು

    ಫೈನಲ್​​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲು ಅಶ್ವಿನ್​​ಗೆ ಸಿಗಲಿಲ್ಲ ಅವಕಾಶ

    ತೀವ್ರ ಅಸಮಾಧಾನ ಹೊರಹಾಕಿದ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್​​ ಅಶ್ವಿನ್​​

ಚೆನ್ನೈ: ಇತ್ತೀಚೆಗೆ ಲಂಡನ್​​​ನ ಓವಲ್​ ಇಂಟರ್ ​ನ್ಯಾಷನಲ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಬ್ಯಾಟಿಂಗ್​​ ಮತ್ತು ಬೌಲಿಂಗ್​​​ ಎರಡು ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ 209 ರನ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ 2ನೇ ಬಾರಿಗೆ WTC ಟ್ರೋಫಿ ಗೆಲ್ಲುವಲ್ಲಿ ವಿಫಲವಾಯ್ತು.

ಇನ್ನು, ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್​​ ಎಲೆವೆನ್​​ನಲ್ಲಿ ಅವಕಾಶ ಸಿಗದ ಬಗ್ಗೆ ಅನುಭವಿ ಸ್ಪಿನ್ನರ್ ರವಿಚಂದ್ರನ್​ ಅಶ್ವಿನ್ ಮೌನಮುರಿದಿದ್ದಾರೆ. ನನಗೆ ಅವಕಾಶ ಸಿಗಲ್ಲ ಎಂದು 48 ಗಂಟೆಗಳ ಮೊದಲೇ ಗೊತ್ತಿತ್ತು ಎಂದಿದ್ದಾರೆ.

ಮೊದಲೇ ಗೊತ್ತಿತ್ತು ಎಂದ ಅಶ್ವಿನ್​!

ನನಗೆ 36 ವರ್ಷ. ಈ ವಯಸ್ಸಿನಲ್ಲಿ ನಾನು ನನಗೆ ಸಂತೋಷ ನೀಡೋ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸುವೆ. ನನಗೂ ಫೈನಲ್​ ಪಂದ್ಯದಲ್ಲಿ ಆಡಬೇಕೆಂಬ ಆಸೆ ಇತ್ತು. ಟೀಮ್​ ಇಂಡಿಯಾ ಫೈನಲ್​ ಪ್ರವೇಶಿಸಲು ನನ್ನ ಕೊಡುಗೆ ಕೂಡ ಇದೆ. ಕಳೆದ ಬಾರಿ ಆಡಿದ್ದ ಡಬ್ಲ್ಯುಟಿಸಿ ಫೈನಲ್​ ಪಂದ್ಯದಲ್ಲೂ ನಾನು 4 ವಿಕೆಟ್​ ಪಡೆದಿದ್ದೆ ಎಂದರು.

ವಿದೇಶಿ ಪಿಚ್​​ಗಳಲ್ಲಿ ನನ್ನ ಬೌಲಿಂಗ್​ ಚೆನ್ನಾಗಿದೆ. ಕೇವಲ ಬೌಲಿಂಗ್​ ಮಾತ್ರವಲ್ಲ ಬ್ಯಾಟಿಂಗ್​​ ಕೂಡ ಉತ್ತಮವಾಗಿ ಮಾಡುತ್ತೇನೆ. ನನ್ನಿಂದಲೂ ಟೀಂ ಇಂಡಿಯಾ ಹಲವು ಪಂದ್ಯಗಳನ್ನು ಗೆದ್ದಿದೆ. ನನ್ನ ಹೊರಗೆ ಇಡುತ್ತಾರೆ ಎಂದರೆ ನಾನೇನು ಹೇಳಲು ಸಾಧ್ಯವಿಲ್ಲ ಎಂದರು. ಈ ಮೂಲಕ ಕೋಚ್​ ದ್ರಾವಿಡ್​​, ಕ್ಯಾಪ್ಟನ್​ ರೋಹಿತ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬೌಲಿಂಗ್‌ ಪ್ರದರ್ಶನದ ದಾಖಲೆ ಹೊಂದಿರೋ ಆರ್‌ ಅಶ್ವಿನ್‌ ಅವರನ್ನು ತಂಡದಿಂದ ಹೊರಗಿಟ್ಟಿದ್ದರ ವಿರುದ್ಧ ಮಾಜಿ ಆಟಗಾರರು ಆಕ್ರೋಶ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ದ್ರಾವಿಡ್​​, ರೋಹಿತ್​​ ವಿರುದ್ಧ ಭಾರೀ ಅಸಮಾಧಾನ; ತೀವ್ರ ಆಕ್ರೋಶ ಹೊರಹಾಕಿದ ಆರ್​​. ಅಶ್ವಿನ್​​!

https://newsfirstlive.com/wp-content/uploads/2023/06/R-Ashwin.jpg

Load More