ಡೊಮಿನಿಕಾದಲ್ಲಿ ಕೆರಿಬಿಯನ್ಗಳನ್ನ ಕಾಡಿದ್ದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್
ಕುಂಬ್ಳೆಯನ್ನ ಹಿಂದಿಕ್ಕಲು ಇನ್ನೊಂದೇ ಹೆಜ್ಜೆ ಬಾಕಿಯಿದೆ ಚೆನ್ನೈ ಎಕ್ಸ್ಪ್ರೆಸ್ಗೆ
ಅಶ್ವಿನ್ ಸಾಮರ್ಥ್ಯ ಏನೆಂದು ಈಗಲಾದರೂ ತಿಳಿದುಕೊಳ್ಳುತ್ತಾ ಬಿಸಿಸಿಐ..!
ಆರ್ ಅಶ್ವಿನ್ ತಂಡದಲ್ಲಿದ್ರೆ ಭಾರತಕ್ಕೆ ಲಾಭ, ನಷ್ಟ ಏನು ಅನ್ನೋದಕ್ಕೆ ಒಂದೇ ತಿಂಗಳಲ್ಲಿ ಆನ್ಸರ್ ಸಿಕ್ಕಿದೆ. ಕೇರಂ ಸ್ಪೆಶಲಿಸ್ಟ್ರನ್ನ ಹೊರಗಿಟ್ಟು WTC ಫೈನಲ್ ಆಡಿದ ಭಾರತ ಮಂಗಳಾರತಿ ಎತ್ತಿಸಿಕೊಂಡಿತ್ತು. ಆದ್ರೀಗ ಇದೇ ಅಶ್ವಿನ್ ವಿಂಡೀಸ್ ವಿರುದ್ಧ ಆಡಿದ್ದೇ ಬಂತು ಭಾರತ ಗೆಲುವಿನ ನಗಾರಿ ಬಾರಿಸಿದೆ.
ಅಶ್ವಿನ್ ತಂಡದಲ್ಲಿ ಯಾಕೆ ಇರಬೇಕು?. ಟರ್ನಿಂಗ್ ಟ್ರ್ಯಾಕ್ನಲ್ಲಿ ಏಕೆ ಬೇಕೆ ಬೇಕು ಅನ್ನೋದು ಇದೇ ಕಾರಣಕ್ಕೆ. ಅಶ್ವಿನ್ ಅನ್ನೋದು ಬರೀ ಹೆಸರಲ್ಲ, ಅದೊಂದು ಶಕ್ತಿ. ಪ್ರತಿ ಪಂದ್ಯವನ್ನ ಗೆಲ್ಲಿಸಿಕೊಡಬೇಕು ಎಂದು ಆಡುವ ಛಲಗಾರ. ಕಂಡೀಷನ್ ಯಾವುದೇ ಆಗಿರಲಿ ಅಲ್ಲಿ ಕೇರಂ ಸ್ಪೆಶಲಿಸ್ಟ್ ವಿರಾಜಿಸೋದು ಪಕ್ಕಾ.
ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೇಗೆ ಮ್ಯಾಚ್ ವಿನ್ನರ್ಸ್, ಹೇಗೆ ಬೌಲಿಂಗ್ನಲ್ಲಿ ಅಶ್ವಿನ್ ಮ್ಯಾಚ್ ವಿನ್ನರ್. ಈ ಸ್ಪಿನ್ ಮಾಂತ್ರಿಕನ ಮೋಡಿಯಿಂದ ಟೀಮ್ ಇಂಡಿಯಾ ಲೆಕ್ಕವಿಲ್ಲದಷ್ಟು ಪಂದ್ಯಗಳನ್ನ ಗೆದ್ದಿದೆ. ಅದಕ್ಕೆ ಡೊಮಿನಿಕಾ ಟೆಸ್ಟ್ ಲೇಟೆಸ್ಟ್ ಸೇರ್ಪಡೆ. ಅಶ್ವಿನ್ ಸ್ಪಿನ್ ಕೈಚಳಕಕ್ಕೆ ಬೆಚ್ಚಿಬಿದ್ದ ವಿಂಡೀಸ್ ಮೊದಲ ಟೆಸ್ಟ್ನಲ್ಲಿ ಹೀನಾಯವಾಗಿ ಸೋತು ಹೋಗಿದೆ.
ಡೊಮಿನಿಕಾದಲ್ಲಿ ಅಶ್ವಿನ್ ಡಾಮಿನೇಟಿಂಗ್ ಪರ್ಫಾಮೆನ್ಸ್..!
ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಅವಕಾಶ ಸಿಗದೇ ಬೇಸತ್ತಿದ್ದ ಅಶ್ವಿನ್, ರಾಕಿಂಗ್ ಪರ್ಫಾಮೆನ್ಸ್ನಿಂದ ಆ ಕೋಪವನ್ನ ತೀರಿಸಿಕೊಂಡ್ರು. 2 ಇನ್ನಿಂಗ್ಸ್ ಸೇರಿ ಒಟ್ಟು 12 ವಿಕೆಟ್ ಕಬಳಿಸಿದ ಸ್ಪಿನ್ ದಿಗ್ಗಜರ ದಾಖಲೆಗಳನ್ನ ಪುಡಿಗಟ್ಟಿದ್ದಾರೆ.
ಅಶ್ವಿನ್ ಆರ್ಭಟ..ಕುಂಬ್ಳೆಗೆ ಶುರುವಾಯ್ತು ನಡುಕ..!
ಡೊಮಿನಿಕಾ ಟೆಸ್ಟ್ನಲ್ಲಿ ಅಶ್ವಿನ್ ತೋರಿದ ಸೂಪರ್ ಡೂಪರ್ ಪರ್ಫಾಮೆನ್ಸ್ನಿಂದ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆಗೆ ನಡುಕ ಶುರುವಾಗಿದೆ. ಯಾಕಂದ್ರೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 3 ಮಾದರಿಯಲ್ಲಿ ಭಾರತ ಪರ ಹೆಚ್ಚು ವಿಕೆಟ್ ಪಡೆದವರ ಲಿಸ್ಟ್ನಲ್ಲಿ ಕುಂಬ್ಳೆಗೆ ಟಾಂಹ್ ಕೊಡಲು ಅಶ್ವಿನ್ ಹೊರಟಿದ್ದಾರೆ.
ಭಾರತ ಪರ ಅತಿಹೆಚ್ಚು ವಿಕೆಟ್ ಬೇಟೆ..!
3 ಮಾದರಿ ಕ್ರಿಕೆಟ್ನಲ್ಲಿ ಒಟ್ಟು 953 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು 708 ವಿಕೆಟ್ಗಳೊಂದಿಗೆ ಅಶ್ವಿನ್ 2ನೇ ಸ್ಥಾನದಲ್ಲಿದ್ರೆ, ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ 707 ವಿಕೆಟ್ ಬೇಟೆಯಾಡಿ 3ನೇ ಸ್ಥಾನ ಸಂಪಾದಿಸಿದ್ದಾರೆ. ಇನ್ನು 5 ವಿಕೆಟ್ ಗೊಂಚಲು ಪಡೆಯುವಲ್ಲಿ ಅಶ್ವಿನ್, ಶೀಘ್ರದಲ್ಲೇ ದಿಗ್ಗಜ ಬೌಲರ್ಗಳನ್ನ ಓಟರ್ ಟೇಕ್ ಮಾಡಿದ್ರು ಆಶ್ಚರ್ಯವಿಲ್ಲ.
ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದವರು (ಹೆಡ್ಡರ್)
ಕಳೆದ 17 ವರ್ಷದಲ್ಲಿ 6 ಬಾರಿ 12 ಪ್ಲಸ್ ವಿಕೆಟ್..!
ಈ ದಾಖಲೆಯು ರೆಕಾರ್ಡ್ ಬ್ರೇಕರ್ ಅಶ್ವಿನ್ ಹೆಸರಿಗೆ ಸೇರಿಕೊಂಡಿದೆ. ಕಳೆದ 17 ವರ್ಷದಲ್ಲಿ 6 ಬಾರಿ 12ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 85ಕ್ಕೆ 12, ಆಸಿಸ್ ವಿರುದ್ಧ 198ಕ್ಕೆ 12, ಸೌತ್ ಆಫ್ರಿಕಾ ಎದುರು 98 ರನ್ಗೆ 12, ಇಂಗ್ಲೆಂಡ್ ವಿರುದ್ಧ 167ಕ್ಕೆ 12 ಹಾಗೂ ನಿನ್ನೆ ಮುಗಿದ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ 131 ರನ್ಗೆ 12 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
ಇದಿಷ್ಟೇ ಅಲ್ಲ, ಟೆಸ್ಟೊಂದರಲ್ಲಿ 10 ವಿಕೆಟ್ ಪಡೆಯುವಲ್ಲಿ ಅನಿಲ್ ಕುಂಬ್ಳೆ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ. ಇದನ್ನೆಲ್ಲ ನೋಡಿದ್ಮೇಲೆ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ರನ್ನ ರೆಕಾರ್ಡ್ ಬ್ರೇಕರ್ ಎಂದು ಕರೆಯದೇ ಇರೋಕಾಗುತ್ತಾ ಹೇಳಿ?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ