newsfirstkannada.com

ಕೇಳಿದ್ರೆ ಶಾಕ್​ ಆಗ್ತೀರಾ! ರೋಹಿತ್​​​, ಕೊಹ್ಲಿ ಅಲ್ಲ: ವಿಂಡೀಸ್​​ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ್ದು ಈತ!

Share :

12-07-2023

    ಟೀಂ ಇಂಡಿಯಾ, ವೆಸ್ಟ್​ ಇಂಡೀಸ್​​ ಟೆಸ್ಟ್​ ಸರಣಿ ಶುರು

    ಇಂದಿನಿಂದಲೇ ಟೆಸ್ಟ್​ ಸರಣಿ ಮೊದಲ ಪಂದ್ಯ ಆರಂಭ

    ಕೊಹ್ಲಿ, ರೋಹಿತ್​​ ದಾಖಲೆಯನ್ನೇ ಮೀರಿಸಿದ್ದು ಪ್ಲೇಯರ್​​

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸೋತ ಟೀಂ ಇಂಡಿಯಾ ಈಗ ವೆಸ್ಟ್​​ ಇಂಡೀಸ್​​ ವಿರುದ್ಧ ಟೆಸ್ಟ್​ ಸರಣಿ ಆಡಲು ಮುಂದಾಗಿದೆ. ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ಶುರುವಾಗಲಿದೆ. ಆದರೀಗ, ವೆಸ್ಟ್​ ಇಂಡೀಸ್​​ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ಹಾಲಿ ಟೀಂ ಇಂಡಿಯಾ ಆಟಗಾರ ಯಾರು? ಅನ್ನೋ ಚರ್ಚೆ ನಡೆಯುತ್ತಿದೆ.

ಸುದೀರ್ಘ ಕಾಲದ ಬಳಿಕ ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡುತ್ತಿದೆ. ಆಶ್ಚರ್ಯ ಎಂದರೆ ವಿಂಡೀಸ್​ ವಿರುದ್ಧ ಅತೀ ಹೆಚ್ಚು ಶತಕ ಬಾರಿಸಿದ್ದು, ಕೊಹ್ಲಿ ಅಲ್ಲ, ರೋಹಿತ್​​ ಅಲ್ಲ, ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​.

ಯೆಸ್​​, ಈ ಸ್ಟಾರ್​ ಆಲ್​​ರೌಂಡರ್​ ಮತ್ಯಾರು ಅಲ್ಲ, ಭಾರತದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್. ಈ ಹಿರಿಯ ಆಟಗಾರ ವೆಸ್ಟ್ ಇಂಡೀಸ್ ವಿರುದ್ಧ ಬರೊಬ್ಬರಿ ನಾಲ್ಕು ಶತಕ ಸಿಡಿಸಿದ್ದಾರೆ. ಅದರಲ್ಲೂ ವೆಸ್ಟ್​ ಇಂಡೀಸ್​ನಲ್ಲೇ 2 ಶತಕ ಸಿಡಿಸಿ ಅಚ್ಚರಿ ಮೂಡಿಸಿದ್ದಾರೆ.

ಕೊಹ್ಲಿ, ರೋಹಿತ್​​ ದಾಖಲೆಯನ್ನೇ ಮೀರಿಸಿದ ಅಶ್ವಿನ್​​!

ಕೊಹ್ಲಿ ವೆಸ್ಟ್ ಇಂಡಿಸ್ ವಿರುದ್ಧ ಒಟ್ಟು 14 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ ಐದು ಅರ್ಧಶತಕ ದಾಖಲಿಸಿದ್ದಾರೆ. ರೋಹಿತ್ ಶರ್ಮಾ ನಾಲ್ಕು ಪಂದ್ಯ ಮಾತ್ರ ಆಡಿದ್ದು, ಇದರಲ್ಲಿ ಎರಡು ಶತಕ ಸಿಡಿಸಿದ್ದಾರೆ. ಆದರೆ ಅಶ್ವಿನ್ ಮಾತ್ರ ವೆಸ್ಟ್ ಇಂಡೀಸ್ ವಿರುದ್ಧ ಆಡಿದ 11 ಪಂದ್ಯಗಳಲ್ಲಿ ನಾಲ್ಕು ಶತಕ ಸಿಡಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕೇಳಿದ್ರೆ ಶಾಕ್​ ಆಗ್ತೀರಾ! ರೋಹಿತ್​​​, ಕೊಹ್ಲಿ ಅಲ್ಲ: ವಿಂಡೀಸ್​​ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ್ದು ಈತ!

https://newsfirstlive.com/wp-content/uploads/2023/07/Rohit_Kohli_Test.jpg

Load More