newsfirstkannada.com

ರೋಹಿತ್ ಶರ್ಮಾ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಅಶ್ವಿನ್.. ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ..!

Share :

15-09-2023

  ರೋಹಿತ್ ಬ್ಯಾಟಿಂಗ್​​ ಬಗ್ಗೆ ಅಶ್ವಿನ್​ ಬಿಚ್ಚಿಟ್ರು ಕಹಿಸತ್ಯ

  ನಾಯಕರಿಗೆ ರೋಹಿತ್ ಶರ್ಮಾ ಕಂಡ್ರೆ ಭಯವೇಕೆ..?

  ಏಕದಿನ ವಿಶ್ವಕಪ್​ನಲ್ಲಿ ನಡೆಯಲಿದ್ಯಾ ಫುಲ್ ಧಮಾಕಾ..?

ರೋಹಿತ್ ಶರ್ಮಾ.. ವಿಶ್ವ ಕ್ರಿಕೆಟ್​ನ ಹಿಟ್​ಮ್ಯಾನ್.. ಈತನ ಸಿಡಿಲಬ್ಬರಕ್ಕೆ ಸಿಲುಕಿದ್ರೆ ಎದುರಾಳಿಗೆ ನರಕ ದರ್ಶನ ಗ್ಯಾರಂಟಿ.. ಇಂಥಹ ರೋಹಿತ್ ಬಗ್ಗೆ ಅಶ್ವಿನ್​​ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ.. ರೋಹಿತ್ ಬಗ್ಗೆ ಭವಿಷ್ಯವೊಂದನ್ನ ನುಡಿದಿದ್ದಾರೆ.

ಹಿಟ್​ಮ್ಯಾನ್ ರೋಹಿತ್ ಶರ್ಮಾ.. ವಿಶ್ವ ಕ್ರಿಕೆಟ್​ನ ಮೋಸ್ಟ್​ ಡೇಂಜರಸ್​.. ಒಮ್ಮೆ ಕ್ರೀಸ್​ನಲ್ಲಿ ನೆಲೆಯೂರಿದ್ರೆ, ಈತನ ಬ್ಯಾಟ್​ನಿಂದ ಸಿಡಿಸಿಯೋದು ಸಿಕ್ಸರ್​ಗಳ ಸುರಿಮಳೆ. ಸ್ಟೇಡಿಯಂ ಅಷ್ಟ ದಿಕ್ಕುಗಳಿಗೂ ಚೆಂಡನ್ನು ಬಡಿದಟ್ಟುವ ಈ ವೀರನ ಬ್ಯಾಟಿಂಗ್​​​ ನೋಡೋದೆ ಕಣ್ಣಿಗೆ ಹಬ್ಬ. ಅದ್ರಲ್ಲೂ ರೋಹಿತ್, ಎಷ್ಟು ಡೇಂಜರಸ್ ಅನ್ನೋದಕ್ಕೆ ಸಾಕ್ಷಿ.. ಏಕದಿನ ಫಾರ್ಮೆಟ್​ನಲ್ಲಿ ಸಿಡಿಸಿದ ಮೂರು ಶತಕಗಳು.
ಈ ದ್ವಿಶತಕಗಳ ಸರದಾರನ ಅಟ್ಟಹಾಸಕ್ಕೆ ಬಳಲಿ ಬೆಂಡಾದ ಬೌಲರ್​​ಗಳು ಲೆಕ್ಕಕ್ಕಿಲ್ಲ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಮುಂಬೈಕರ್​​ ಅಬ್ಬರದಾಟ ಬೌಲರ್​ಗಳಿಗೆ ಮಾತ್ರವೇ ತಲೆನೋವಲ್ಲ. ಎದುರಾಳಿ ತಂಡದ ನಾಯಕರಿಗೂ ದುಸ್ವಪ್ನವೇ ಆಗಿದೆ. ಅದ್ಯಾಕೆ ಅನ್ನೋದನ್ನು ಸ್ವತಃ ಟೀಮ್ ಇಂಡಿಯಾ ಕ್ರಿಕೆಟಿಗರೇ ಬಿಚ್ಚಿಟ್ಟಿದ್ದಾರೆ.

ಹಿಟ್​ಮ್ಯಾನ್ ಬಗ್ಗೆ ಕೊಹ್ಲಿ ಅಂದು ಹೇಳಿದ್ದೇನು..?

ಟೀಮ್ ಇಂಡಿಯಾ ನಾಯಕ ರೋಹಿತ್ ಬ್ಯಾಟಿಂಗ್ ಬಗ್ಗೆ ಸ್ವತಃ ಆಫ್ ಸ್ಪಿನ್ನರ್ ಅಶ್ವಿನ್​​​ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ.. ಕಿಂಗ್ ಕೊಹ್ಲಿ ಕೂಡ ರೋಹಿತ್ ಬಗ್ಗೆ ಗುಣಗಾನ ಮಾಡಿದ್ದಾರೆ. ಜೊತೆಗೆ ಪರೋಕ್ಷ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

5-6 ವರ್ಷದ ಹಿಂದೆ ನಾನು-ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಬ್ಯಾಟಿಂಗ್ ಬಗ್ಗೆ ಚರ್ಚೆ ನಡೆಸಿದ್ವಿ. ಅದು ಯಾವ ಮ್ಯಾಚ್ ಎಂಬ ಬಗ್ಗೆ ಸರಿಯಾಗಿ ನೆನಪಿಲ್ಲ. ರೋಹಿತ್ ಬ್ಯಾಟಿಂಗ್ ನೋಡುತ್ತಾ ನಾನು ಯೋಚಿಸುತ್ತಿದ್ದೆ. ರೋಹಿತ್​ ಸೆಟಲ್​ ಆದ 15 ರಿಂದ 20 ಓವರ್​ ನಂತರ ಎಲ್ಲಿ ಬೌಲ್​ ಮಾಡೋದು ಎಂದು. ವಿರಾಟ್​ ಕೇಳಿದ್ರು ನಿನಗೆ ಗೊತ್ತಾ ಡೆತ್​ನಲ್ಲಿ ಕ್ಯಾಪ್ಟನ್ಸ್​ಗೆ ದುಸ್ವಪ್ನಾವಾಗಿ ಕಾಡೋದು ಯಾರೆಂದು..? ನಾನು ಹೇಳಿದೆ, ಅದು ಧೋನಿನಾ..? ಕೊಹ್ಲಿ ನೋ ರೋಹಿತ್.. ನಾನು ಯಾಕೆ ಎಂದೆ. ವಿರಾಟ್ ಹೇಳಿದ್ರು, ನಿನಗೆ ಬೌಲ್ ಎಲ್ಲಿ ಮಾಡಬೇಕೆಂದು ಗೊತ್ತಿಲ್ವಲ್ಲ- ಆರ್​.ಅಶ್ವಿನ್, ಟೀಮ್ ಇಂಡಿಯಾ ಆಟಗಾರ

ಇದೇ ಕಾರಣಕ್ಕೆ ರೋಹಿತ್ ಶರ್ಮಾ ಅಂದ್ರೆ, ಎದುರಾಳಿ ನಾಯಕರಿಗೆ ಟೆನ್ಶನ್​. ಯಾಕಂದ್ರೆ ಡೆತ್​ ಓವರ್​ಗಳಲ್ಲಿ ರೋಹಿತ್, ಕ್ರೀಸ್​ನಲ್ಲಿ ಉಳಿದ್ರೆ, ಫೀಲ್ಡರ್ಸ್ ಬೇಕಾಗಿಲ್ಲ. ಇದಕ್ಕೆ ಕಾರಣ ಬೌಂಡರಿ ಗೆರೆಯಾಚೆ ಸಿಡಿಯೋ ಚೆಂಡನ್ನ ಗ್ಯಾಲರಿಯಲ್ಲಿ ಕುಳಿತಿರೋ ಪ್ರೇಕ್ಷಕರೆ ವಾಪಸ್ ನೀಡ್ತಾರೆ. ಹೀಗಾಗಿ ಎದುರಾಳಿ ತಂಡದ ನಾಯಕ ಎಂಥಹ ಚಾಣಾಕ್ಷನೇ ಆಗಲಿರಲಿ. ಢವಢವ ಶುರುವಾಗೋದು ಗ್ಯಾರಂಟಿ.

ದ್ವಿಶತಕ ವೀರನ ಬಗ್ಗೆ ಆರ್​.ಅಶ್ವಿನ್ ಭವಿಷ್ಯ..!

ಏಕದಿನ ವಿಶ್ವಕಪ್​ಗೆ ಸಜ್ಜಾಗ್ತಿರುವ ಈ ಹೊತ್ತಲ್ಲಿ ಆರ್​.ಅಶ್ವಿನ್, ಹಿಟ್​ಮ್ಯಾನ್ ರೋಹಿತ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ರೋಹಿತ್ ಬಗ್ಗೆ ನುಡಿದಿರುವ ಈ ಭವಿಷ್ಯ ನಿಜಕ್ಕೂ ಎದುರಾಳಿ ತಂಡಗಳಿಗೆ ನಿಜಕ್ಕೂ ಎಚ್ಚರಿಕೆ ಕರೆಗಂಟೆಯೇ ಆಗಿದೆ. 2019ರ ಏಕದಿನ ವಿಶ್ವಕಪ್​ನಲ್ಲಿ 5 ಸೆಂಚೂರಿ ಸಿಡಿಸಿ ಅರ್ಭಟಿಸಿದ್ದ ರೋಹಿತ್, ಈ ಬಾರಿಯ ವಿಶ್ವಕಪ್​ನಲ್ಲಿ 4ನೇ ಡಬಲ್​ ಸೆಂಚೂರಿ ಸಿಡಿಸ್ತಾರೆ ಅಂತೆ.

ನನಗೊಂದು ಡೌಟ್.. ನಾವು ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಡಬಲ್ ಹಂಡ್ರೆಡ್ ನೋಡುವುದು ಖಾಯಂ. ಲೆಫ್ಟ್​ ಕವರ್ಸ್ ಮೇಲೆ ಬೌಂಡರಿ ಹೋಯ್ತು. ವೆಲ್ಲಲ್ಲಾಗೆ ಮಿಸ್ ಫೀಲ್ಡ್​ ಫೋರ್ ಹೋಯ್ತು. ಅಂತಹ ಟೈಮಿಂಗ್​​​ ಶಾಟ್ ಹೊಡೆದ್ರೆ, ಆ ದಿನ ರೋಹಿತ್ ದಿನ ಎಂದು ಭಾವಿಸಬೇಕಷ್ಟೆ. ವಿಶೇಷವಾಗಿ ಏಕದಿನ ವಿಶ್ವಕಪ್, ನಮಗೆ ಕೊಲ್ಕತ್ತಾದಲ್ಲಿ ಪಂದ್ಯ ಇದೆ. ಅದು ಆತನ ಫೇವರಿಟ್ ಬೇಟೆಯ ಮೈದಾನ-ಆರ್​​.ಅಶ್ವಿನ್, ಟೀಮ್ ಇಂಡಿಯಾ ಆಟಗಾರ

ಅಶ್ವಿನ್​​ರ ಈ ಭವಿಷ್ಯ ನಿಜವಾದರೂ ಅಚ್ಚರಿ ಇಲ್ಲ. ಯಾಕಂದ್ರೆ ಸದ್ಯ ಸಾಲಿಡ್ ಟಚ್​ನಲ್ಲಿರುವ ರೋಹಿತ್ ಶರ್ಮಾ, ನಾಯಕನಾಗಿ ಅವಿಸ್ಮರಣೀಯ ಕ್ಷಣಗಳನ್ನ ಸೃಷ್ಟಿಸುವ ಇರಾದೆಯಲ್ಲಿದ್ದಾರೆ. ವಿಶ್ವಕಪ್​ ಗೆಲುವಿನ ಕನಸು ಕಾಣ್ತಿರುವ ರೋಹಿತ್, ರೌದ್ರವತಾರ ತಾಳಿದ್ರೆ, ನಿಜಕ್ಕೂ ನಡೆಯೋದು ಎದುರಾಳಿಗಳ ಮಾರಣಹೋಮ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್ ಶರ್ಮಾ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಅಶ್ವಿನ್.. ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ..!

https://newsfirstlive.com/wp-content/uploads/2023/09/ASHWIN.jpg

Load More