ಆರ್.ಮಾಧವನ್ ವಿಡಿಯೋ ಶೇರ್ ಮಾಡಿದ ಮೋದಿ
ಕಳೆದ ವರ್ಷದ ಹೊಸ ಟರ್ಮಿನಲ್ ಉದ್ಘಾಟನೆ
ವಿಶ್ವದ ಅತಿ ದೊಡ್ಡ ಟರ್ಮಿನಲ್ಗಳ ಪೈಕಿ ಇದು ಒಂದು
ಬೆಂಗಳೂರು: ನಟ, ಬರಹಗಾರ, ನಿರ್ದೇಶಕ ಆರ್.ಮಾಧವನ್ ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವಿಡಿಯೋವನ್ನು ಹಾಕಿ ಮುಕ್ತಕಂಠದಿಂದ ಹಾಡಿ ಹೊಗಳಿದ್ದರು. ಆರ್.ಮಾಧವನ್ ವಿಮಾನ ನಿಲ್ದಾಣದ ವಿನ್ಯಾಸಕ್ಕೆ ಮಾರು ಹೋಗಿ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ಅಭಿವೃದ್ಧಿಗಾಗಿ ನೆಕ್ಸ್ಟ್ ಜನರೇಷನ್ ಮೂಲ ಸೌಕರ್ಯಗಳು ಎಂದು ಬರೆದು ಮೋದಿ ಶೇರ್ ಮಾಡಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಮೋದಿ ಟರ್ಮಿನಲ್-2 ಉದ್ಘಾಟನೆ ಮಾಡಿದ್ದರು.
ಮಾಧವನ್ ಪೋಸ್ಟ್ನಲ್ಲಿ ಏನಿದೆ..?
ಮಾಧವನ್ ಟರ್ಮಿನಲ್ 2 ನಿರ್ಮಾಣ ರೀತಿಯನ್ನು, ಇಂಟೀರಿಯರ್ಗಳನ್ನು ಹಾಡಿ ಹೊಗಳಿದ್ದಾರೆ. ಭಾರತದಲ್ಲಿ ಮೂಲಭೂತ ಸೌಕರ್ಯಗಳನ್ನು ಅದ್ಭುತವಾಗಿ ಮಾಡಲಾಗುತ್ತಿದೆ. ನಾನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದೇನೆ. ಇದೊಂದು ಎಕ್ಸಾಟಿಕ್ ಪ್ಲೇಸ್ ಅತ್ಯದ್ಭುತವಾಗಿದೆ. ಏರ್ಪೋರ್ಟ್ ಎಂದರೆ ಯಾರೂ ನಂಬಲಾರರು. ಇಲ್ಲಿನ ಸೀಲಿಂಗ್ನಲ್ಲಿ ತೂಗುತ್ತಿರುವ ಗಿಡಗಳೆಲ್ಲ ನಿಜವಾದ ಗಿಡಗಳು. ಇವುಗಳಿಗೆಲ್ಲ ಪ್ರತಿದಿನ ಬೆಳಗ್ಗೆ ಸೀಲಿಂಗ್ನಿಂದ ನೀರು ಹಾಕಲಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಟರ್ಮಿನಲ್ ವಿಶೇಷತೆ ಏನು..?
ಮೋದಿ ಕಳೆದ ವರ್ಷ ನವೆಂಬರ್ 11 ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ ಮಾಡಿದ್ದರು. ಏಷ್ಯಾದಲ್ಲೇ ಮೊದಲ ಹ್ಯಾಂಗಿಂಗ್ ಗಾರ್ಡನ್ ಇರುವ ಟರ್ಮಿನಲ್ ಇದಾಗಿದೆ. ವಿಶ್ವದ ಅತಿ ದೊಡ್ಡ ಟರ್ಮಿನಲ್ಗಳ ಪೈಕಿ ಇದು ಒಂದು. ಸ್ವದೇಶಿ ತಂತ್ರಜ್ಞಾನಗಳನ್ನು ಬಳಸಿ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಪ್ರಯಾಣಿಕರಿಗೆ ವಾಕ್ ಇನ್ ಗಾರ್ಡನ್ ಅನುಭವ ನೀಡುತ್ತದೆ. 10 ಸಾವಿರ ಚದರಡಿ ವಿಸ್ತೀರ್ಣದ ಹಸಿರು ಗೋಡೆಯ ಮಧ್ಯೆ, ನೇತಾಡುವ ಉದ್ಯಾನವನದ ಸೌಂದರ್ಯವನ್ನು ಪ್ರಯಾಣಿಕರು ಸವಿಯಲು ಅವಕಾಶ ಇದೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ