ಸಚಿನ್ ತೆಂಡೂಲ್ಕರ್ ದಾಖಲೆ ಬ್ರೇಕ್ ಮಾಡಿದ್ರಾ ರಚಿನ್ ರವೀಂದ್ರ?
ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಪಾಕ್-ನ್ಯೂಜಿಲೆಂಡ್ ಮ್ಯಾಚ್
ವೀರ ಕನ್ನಡಿಗನ ಬ್ಯಾಟಿಂಗ್ ಅಬ್ಬರಕ್ಕೆ ಪಾಕಿಸ್ತಾನ ಬೌಲರ್ಗಳು ತತ್ತರ
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ನ ಆಲ್ ರೌಂಡರ್ ಹಾಗೂ ಕನ್ನಡಿಗ ರಚಿನ್ ರವೀಂದ್ರ ಅವರು ಆಕರ್ಷಕ ಶತಕ ಬಾರಿಸಿದ್ದಾರೆ. ಈ ಮೂಲಕ 2023ರ ವರ್ಲ್ಡ್ಕಪ್ನಲ್ಲಿ ಕೆಲ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಟಾಸ್ ಗೆದ್ದ ಪಾಕಿಸ್ತಾನದ ನಾಯಕ ಬಾಬರ್ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಈ ವೇಳೇ ಕ್ರೀಸ್ಗೆ ಬಂದ ಡಿವೋನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಉತ್ತಮ ಪ್ರದರ್ಶನ ನೀಡಿದರು. ಈ ವೇಳೆ ತಂಡದ ಮೊತ್ತ 68 ರನ್ ಇರುವಾಗಿ ಕಾನ್ವೆ ಕ್ಯಾಚ್ ನೀಡಿ ಔಟ್ ಆದರು. ಆದರೆ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಜೊತೆ ಬ್ಯಾಟಿಂಗ್ ಮುಂದುವರೆಸಿದ ವೀರ ಕನ್ನಡಿಗ ರಚಿನ್ ಅಬ್ಬರದ ಸೆಂಚುರಿ ಬಾರಿಸಿದ್ದಾರೆ.
ರಚಿನ್ ರವೀಂದ್ರ 94 ಎಸೆತಗಳನ್ನು ಎದುರಿಸಿ ಒಂದು ಬಿಗ್ ಸಿಕ್ಸರ್ ಹಾಗೂ 15 ಅಮೋಘವಾದ ಬೌಂಡರಿಗಳ ಮೂಲಕ 108 ರನ್ಗಳನ್ನು ಬಾರಿಸಿದರು. ಈ ಮೂಲಕ ಪಾಕ್ ಬೌಲರ್ಗಳನ್ನ ಮನಬಂದಂತೆ ದಂಡಿಸಿದರು. ಶತಕ ಸಿಡಿಸಿ ಆಡುವಾಗ ಮೊಹಮ್ಮದ್ ವಾಸಿಂ ಬೌಲಿಂಗ್ನಲ್ಲಿ ಸೌದ್ ಶಕೀಲ್ಗೆ ಕ್ಯಾಚ್ ನೀಡಿ ರಚಿನ್ ಔಟ್ ಆಗಿ ನಿರಾಸೆ ಅನುಭವಿಸಿದರು.
ಅಲ್ಲದೇ ವಿಶ್ವಕಪ್ಗೆ ಡೆಬ್ಯು ಮಾಡಿದ ಕಿವೀಸ್ ಆಟಗಾರರ ಪೈಕಿ 3 ಶತಕ ಸಿಡಿಸಿದ ಏಕೈಕ ಆಲ್ರೌಂಡರ್ ಎಂಬ ದಾಖಲೆ ಮಾಡಿದರು. ಅಲ್ಲದೇ 25 ವರ್ಷ ತುಂಬುವ ಮೊದಲು ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಶ್ವದ ಸಚಿನ್ ನಂತರದ 2ನೇ ಬ್ಯಾಟ್ಸ್ಮನ್ ಆಗಿದ್ದಾರೆ. ಸಚಿನ್ 22 ವರ್ಷಕ್ಕೆ ವರ್ಲ್ಡ್ಕಪ್ನಲ್ಲಿ 2 ಶತಕ ಸಿಡಿಸಿದ್ದರೇ, ರಚಿನ್ 23 ವರ್ಷಕ್ಕೆ 3 ಶತಕಗಳನ್ನು ಸಿಡಿಸಿ ದಾಖಲೆ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ