ಕೊನೆ ಹಂತ ತಲುಪಿದ 2023ರ ಐಸಿಸಿ ಏಕದಿನ ವಿಶ್ವಕಪ್
ಸದ್ಯದಲ್ಲೇ ನಡೆಯಲಿದೆ 2024ರ ಐಪಿಎಲ್ ಮಿನಿ ಹರಾಜು
ಆರ್ಸಿಬಿ ಪರ ರಚಿನ್ ರವೀಂದ್ರ ಒಲವು.. ಏನಂದ್ರು..?
ಸದ್ಯ ನಡೆಯುತ್ತಿರೋ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಕೊನೇ ಹಂತಕ್ಕೆ ತಲುಪಿದೆ. ವಿಶ್ವಕಪ್ ಬೆನ್ನಲ್ಲೇ 2024ರ ಮಿನಿ ಹರಾಜು ನಡೆಯಲಿದ್ದು, ಇದರ ಮೇಲೆ ಕ್ರೀಡಾ ಲೋಕದ ಕಣ್ಣು ನೆಟ್ಟಿದೆ. ಈ ಮಧ್ಯೆ ಮುಂದಿನ ಐಪಿಎಲ್ನಲ್ಲಿ ಭಾರತ ಮೂಲದ ನ್ಯೂಜಿಲೆಂಡ್ ತಂಡದ ಯಂಗ್ ಕ್ರಿಕೆಟ್ ಪ್ಲೇಯರ್ ರಚಿನ್ ರವೀಂದ್ರ ಕಾಣಿಸಿಕೊಳ್ಳಲಿದ್ದಾರಾ? ಅನ್ನೋ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ರಚಿನ್ ರವೀಂದ್ರ ಮಾಡಿರೋ ಒಂದು ಟ್ವೀಟ್.
ಹೌದು, 2023ರ ಐಸಿಸಿ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ರಚಿನ್ 2ನೇ ಆಟಗಾರ. ರಚಿನ್ ರವೀಂದ್ರ ಇತ್ತೀಚೆಗೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಂಕಾ ವಿರುದ್ಧ ಆಡಿದ್ರು. ಈ ವೇಳೆ ತನ್ನ ಹೃದಯದಲ್ಲಿ ಆರ್ಸಿಬಿ ಮತ್ತು ಚಿನ್ನಸ್ವಾಮಿ ಸ್ಟೇಡಿಯಂಗೆ ವಿಶೇಷ ಸ್ಥಾನ ಇರುವುದಾಗಿ ಹೇಳಿದ್ರು ರಚಿನ್. ಮುಂದೊಂದು ದಿನ ನಾನು ಆರ್ಸಿಬಿ ಪರ ಆಡಲಿದ್ದೇನೆ ಎಂದಿದ್ದರು. ಈ ಹೇಳಿಕೆಯಿಂದಲೇ ರಚಿನ್ ಆರ್ಸಿಬಿ ಪರ ಆಡಲಿದ್ದಾರಾ? ಎಂಬ ಚರ್ಚೆ ಹುಟ್ಟಿಕೊಂಡಿದೆ.
Hello @RCBTweets fans 😜 @IPL https://t.co/MkxzvFlYyv
— Rachin Ravindra (@RachinRavindraa) November 9, 2023
ಕೇವಲ ಇದು ಮಾತ್ರವಲ್ಲ ರಚಿನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ವೊಂದು ಮಾಡಿದ್ದಾರೆ. ಹಲೋ ಆರ್ಸಿಬಿ ಫ್ಯಾನ್ಸ್ ಎಂದು ಸಣ್ಣ ಸ್ಮೈಲಿ ಈಮೋಜಿ ಹಾಕಿದ್ದು ಇಷ್ಟೆಲ್ಲಾ ಚರ್ಚೆಗೆ ಕಾರಣವಾಗಿದೆ.
ವಿಶ್ವಕಪ್‌ನಲ್ಲಿ ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಡಿದ 9 ಪಂದ್ಯಗಳಲ್ಲಿ ಮೂರು ಶತಕಗಳು ಸೇರಿ 565 ರನ್ ಬಾರಿಸಿದ್ದಾರೆ. 2024ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 19ನೇ ತಾರೀಕು ನಡೆಯಲಿದೆ. ಅಂದು ಆರ್ಸಿಬಿ ರಚಿನ್ ಮೇಲೆ ಕಣ್ಣಿಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ