newsfirstkannada.com

ಜಮೀರ್ ಅಹ್ಮದ್​ ಮಗನಿಗೆ ಜೋಡಿಯಾದ ರಚಿತಾ ರಾಮ್​.. ರಜನಿಕಾಂತ್ ಸಿನಿಮಾದಲ್ಲೂ ಡಿಂಪಲ್​ ಕ್ವೀನ್!

Share :

Published September 3, 2024 at 10:53am

Update September 3, 2024 at 12:23pm

    ದಳಪತಿ ವಿಜಯ್ ಮೂವಿಯಲ್ಲಿ ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ.?

    ಹೊಸ ಲುಕ್​ನಲ್ಲಿ ಬರುತ್ತಿರುವ ಜಮೀರ್ ಅಹ್ಮದ್ ಮಗ ಝೈದ್ ಖಾನ್

    ರಜನಿಕಾಂತ್ ಸಿನಿಮಾದಲ್ಲಿ ರಚಿತಾ ರಾಮ್ ಯಾವ ಪಾತ್ರ ಮಾಡಿದ್ದಾರೆ?

ಬನಾರಸ್ ಮೂವಿ ಮೂಲಕ ಸ್ಯಾಂಡಲ್​​ವುಡ್​ಗೆ ಎಂಟ್ರಿಕೊಟ್ಟಿದ್ದ ಸಚಿವ ಜಮೀರ್ ಅಹ್ಮದ್ ಮಗ ಝೈದ್ ಖಾನ್ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದರು. ಇದೀಗ ಮತ್ತೊಂದು ಸಿನಿಮಾಕ್ಕಾಗಿ ಹೊಸ ಲುಕ್​ನಲ್ಲಿ ಜನರ ಮುಂದೆ ಬರಲು ರೆಡಿಯಾಗಿದ್ದಾರೆ. ಬನಾರಸ್​ನಲ್ಲಿ ಫುಲ್ ಲವ್​ ಮೂಡ್​ನಲ್ಲಿದ್ದ ಝೈದ್ ಖಾನ್ ಈ ಸಲ ವಿಭಿನ್ನ ಕತೆ ಮೂಲಕ ಅಖಾಡಕ್ಕೆ ಇಳಿಯುತ್ತಿದ್ದಾರೆ. ಝೈದ್ ಖಾನ್ ನ್ಯೂ ಮೂವಿಗೆ ನಾಯಕಿ ಯಾರು ಗೊತ್ತಾ?.

ಇದನ್ನೂ ಓದಿ: ಬೆಂಗಳೂರಲ್ಲಿ ಭಯಾನಕ ಅಪಘಾತ.. ಫ್ಲೈಓವರ್​​ನಿಂದ ಕೆಳಗೆ ಬಿದ್ದ ಕಾರು

ನಟ ಝೈದ್ ಖಾನ್ ಅಭಿನಯ ಮಾಡುತ್ತಿರುವ ಕಲ್ಟ್ ಎನ್ನುವ ಹೊಸ​ ಸಿನಿಮಾಗೆ ಹೀರೋಯಿನ್ ಡಿಂಪಲ್​ ಕ್ವೀನ್ ರಚಿತಾ ರಾಮ್​. ಸಂಜು ವೆಡ್ಸ್ ಗೀತಾ- 2 ಶೂಟಿಂಗ್ ಮುಗಿದಿದ್ದು ಕಲ್ಟ್​​ನಲ್ಲಿ ನಾಯಕಿಯಾಗಿ ಮತ್ತೆ ಚೆಲುವಿನ ರಂಗು ಚೆಲ್ಲಲಿದ್ದಾರೆ. ಝೈದ್​ಗೆ ಹೀರೋಯಿನ್​ ಆಗಿ ರಚಿತಾ ರಾಮ್ ಅಭಿನಯ ಮಾಡುತ್ತಿದ್ದು ಇಷ್ಟರಲ್ಲೇ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅದ್ಧೂರಿಯಾಗಿ ಮುಹೂರ್ತ ಕೂಡ ನೆಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ದೇಶಪಾಂಡೆ CM ಆದರೆ ಸ್ವಾಗತ ಎಂದ ಹೆಬ್ಬಾರ್, ನನಗೂ ಖುಷಿ ಎಂದ ವೈದ್ಯ; ಎಲ್ಲರಿಗೂ ಡಿಕೆ ಶಿವಕುಮಾರ್ ಕೌಂಟರ್..!

ಇನ್ನು ಇದರ ಜೊತೆಗೆ ಸ್ಯಾಂಡಲ್​ವುಡ್​ ಡಿಂಪಲ್ ರಾಣಿ ತಲೈವಾ ರಜಿನಿಕಾಂತ್ ನಟನೆಯ ಕೂಲಿ ಸಿನಿಮಾದಲ್ಲೂ ಪ್ರಮುಖವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ಈ ಪಾತ್ರವನ್ನು ಸಿನಿಮಾ ತಂಡ ಮುಚ್ಚಿಟ್ಟಿದೆ. ಅದು ಯಾಕೆ ಎಂದು ಗೊತ್ತಾಗಿಲ್ಲ. ಹೀಗಾಗಿ ಕೂಲಿ ಸಿನಿಮಾದಲ್ಲಿ ಬಹುತೇಕ ಕಲಾವಿದರ ಪರಿಚಯ ಕಂಪ್ಲೀಟ್ ಆಗಿದೆ. ತೆಲುಗು ಸ್ಟಾರ್ ನಾಗಾರ್ಜುನ್, ಉಪೇಂದ್ರ, ಸೌಬಿನ್, ಸತ್ಯರಾಜ್, ಶ್ರುತಿ ಹಾಸನ್ ಇವರೆಲ್ಲರ ಫಸ್ಟ್ ಲುಕ್ ಹಾಗೂ ಪಾತ್ರದ ಹೆಸರುಗಳ ಪರಿಚಯ ಆಗಿದೆ. ಆದ್ರೆ ಇಲ್ಲಿವರೆಗೂ ರಚಿತಾ ರಾಮ್ ಪಾತ್ರದ ಗುಟ್ಟನ್ನು ಚಿತ್ರತಂಡ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ರಚಿತಾ ಅವರದ್ದು ಕೂಲಿಯಲ್ಲಿ ಬಹುಮುಖ್ಯ ಪಾತ್ರವಂತೆ. ಅದು ಸಿನಿಮಾ ರಿಲೀಸ್ ಸಂದರ್ಭದಲ್ಲಿ ರಚಿತಾ ಪಾತ್ರ ರಿವೀಲ್ ಮಾಡೋಕೆ ಪ್ಲಾನ್ ಇದೆ ಎಂದು ಹೇಳಲಾಗುತ್ತಿದೆ.

ತಮಿಳು ಸಿನಿಮಾದಲ್ಲಿ ಎಂ.ಎಸ್ ಧೋನಿ ಆ್ಯಕ್ಟಿಂಗ್

ದಳಪತಿ ವಿಜಯ್ ನಟನೆಯ ಗೋಟ್ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಈಗಾಗಲೇ ಸಿನಿಮಾದ ಸಾಂಗ್, ಟ್ರೈಲರ್ ಬಿಡುಗಡೆ ಆಗಿದ್ದು, ವಿಜಯ್ ಅಭಿಮಾನಿಗಳಿಗೆ ರಸದೌತಣ ಆಗೋದರಲ್ಲಿ ಸಂದೇಹ ಇಲ್ಲ. ಇದೀಗ ಮತ್ತೊಂದು ಸರ್​​ಪ್ರೈಸ್ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಕ್ರಿಕೆಟ್​ ತಲಾ ಎಂ.ಎಸ್. ಧೋನಿ ಕೂಡ ಅಭಿನಯ ಮಾಡಿದ್ದರೆಂದು ಹೇಳಲಾಗುತ್ತಿದೆ. ಹೀಗೊಂದು ವಿಚಾರ ಎಲ್ಲೆಡೆ ಹರಿದಾಡುತ್ತಿದ್ದು, ನಿರ್ದೇಶಕ ವೆಂಕಟ್ ಪ್ರಭು ಸಣ್ಣದೊಂದು ಹಿಂಟ್ ಕೊಟ್ಟಿದ್ದಾರೆ ಅಷ್ಟೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮೀರ್ ಅಹ್ಮದ್​ ಮಗನಿಗೆ ಜೋಡಿಯಾದ ರಚಿತಾ ರಾಮ್​.. ರಜನಿಕಾಂತ್ ಸಿನಿಮಾದಲ್ಲೂ ಡಿಂಪಲ್​ ಕ್ವೀನ್!

https://newsfirstlive.com/wp-content/uploads/2024/09/RACHITHA.jpg

Load More