newsfirstkannada.com

ರಾಧಾ ರಮಣ ಖ್ಯಾತಿಯ ಕಾವ್ಯಾ ಗೌಡ ಮಗಳಿಗೆ ದೃಷ್ಟಿ ತೆಗೆಯಿರಿ; ಕ್ಯೂಟಿ ವಿಡಿಯೋಗೆ ಫ್ಯಾನ್ಸ್ ಫಿದಾ!

Share :

Published August 21, 2024 at 11:11pm

    ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ಮಗಳ ವಿಡಿಯೋ ಪೋಸ್ಟ್‌!

    ಕಾವ್ಯಾ ಗೌಡ ಮಗಳ ಮುದ್ದಾದ ಮುಖ ನೋಡಿದ ಅಭಿಮಾನಿಗಳು ಫಿದಾ

    ಕ್ಯೂಟ್ ಸಿಯಾ.. ಅಪ್ಪನೇ ತರಹನೇ ಇದ್ದಾಳೆ ಎಂದು ಶುಭಾಶಯ

ಕಾವ್ಯಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಶುಭ ವಿವಾಹ, ಗಾಂಧಾರಿ, ರಾಧಾ ರಮಣ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ. ಸದ್ಯ ಅಭಿನಯದಿಂದ ಬ್ರೇಕ್ ತಗೊಂಡಿರುವ ಕಾವ್ಯಾ ಗೌಡ ಫ್ಯಾಮಿಲಿ ಜೊತೆ ಸಂತಸದ ಸಮಯ ಕಳೆಯುತ್ತಿದ್ದಾರೆ.

ಕಳೆದ ಜನವರಿ 22 ರಂದು ಮುದ್ದಾದ ಹೆಣ್ಣು ಮಗುವಿಗೆ ಕಾವ್ಯಾ ಗೌಡ ಜನ್ಮ ನೀಡಿದರು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಪ್ರತಿಷ್ಠಾಪನೆ ದಿನವೇ ಮಗುವನ್ನು ವೆಲ್​ಕಮ್​ ಮಾಡಿ, ಮಗಳಿಗೆ ಪ್ರೀತಿಯಿಂದ ಸಿಯಾ ಎಂದು ಕರೆದಿದ್ದರು.

ಇದನ್ನೂ ಓದಿ: PHOTOS: ಸಿಹಿ ಸುದ್ದಿ ಹಂಚಿಕೊಂಡ ನಟಿ ಕಾವ್ಯಾ ಗೌಡ; ಅಭಿಮಾನಿಗಳಿಂದ ಶುಭಾಶಯ 

ಕಿರುತೆರೆ ನಟಿ ಕಾವ್ಯಾಗೌಡ ಅವರು ಇತ್ತೀಚೆಗೆ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ಮಗಳು ಫೋಟೋ, ವಿಡಿಯೋವನ್ನು ಹಂಚಿಕೊಂಡು ಗಮನ ಸೆಳೆದಿದ್ದರು.

ಇದೀಗ ಕಾವ್ಯಾಗೌಡ ಅವರು ಹೊಸ ಫೋಟೋ ಶೂಟ್ ಮಾಡಿದ್ದು, ಮಗಳ ಕ್ಯೂಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾವ್ಯಾಗೌಡ ಮಗಳ ಮುದ್ದಾದ ಮುಖ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿಯಾ ತುಂಬಾ ಚೆನ್ನಾಗಿದ್ದಾಳೆ. ಕ್ಯೂಟ್ ಸಿಯಾ.. ಅಪ್ಪನೇ ತರಹನೇ ಇದ್ದಾಳೆ ಎಂದು ಶುಭಾಶಯ ಕೋರಿದ್ದಾರೆ.

2021 ಡಿಸೆಂಬರ್ 1 ರಂದು ನಟಿ ಕಾವ್ಯಾ ಗೌಡ ಅವರು ಉದ್ಯಮಿ ಸೋಮಶೇಖರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಬಳಿಕ ನಟನೆಯಿಂದ ಕಾವ್ಯಾ ಗೌಡ ದೂರ ಉಳಿದುಕೊಂಡಿದ್ದರು. ಇದೀಗ ನಟಿ ಕಾವ್ಯಾ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಮಗಳ ಫೋಟೋಶೂಟ್​​ ಶೇರ್​ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಧಾ ರಮಣ ಖ್ಯಾತಿಯ ಕಾವ್ಯಾ ಗೌಡ ಮಗಳಿಗೆ ದೃಷ್ಟಿ ತೆಗೆಯಿರಿ; ಕ್ಯೂಟಿ ವಿಡಿಯೋಗೆ ಫ್ಯಾನ್ಸ್ ಫಿದಾ!

https://newsfirstlive.com/wp-content/uploads/2024/08/Kavya-gowda-babay-Photoshoot.jpg

Load More