ನಟ, ನಿರ್ಮಾಪಕ, ನಿರ್ದೇಶಕರು ಒಳ್ಳೆಯ ರೀತಿಯಲ್ಲೇ ನನ್ನ ಜೊತೆ ಇದ್ದರು
ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆಯಾಗಲಿ ಅಂತ ಹೇಳಿದ್ದೇಕೆ?
ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ ಫೇಕ್ ಅಕೌಂಟ್ನಿಂದ ಹುಡುಗಿಗೆ ಚಾಟ್!
ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಕರಾಳ ಮುಖಗಳು ದೇಶದಲ್ಲಿ ಹಲ್ಚಲ್ ಸೃಷ್ಟಿಸಿದೆ. ಬೆನ್ನಲ್ಲೇ ‘ಕೇರಳ ಹೇಮಾ ಸಮಿತಿ’ಯಂತೆ ಕರ್ನಾಟಕದಲ್ಲೂ ಕಮೀಟಿ ಮಾಡುವಂತೆ ‘ಫೈರ್ ಟೀಂ’ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದೆ. ಸ್ಯಾಂಡಲ್ವುಡ್ನಲ್ಲೂ ಇಂತಹ ಸಮಿತಿ ರಚನೆಯ ಅಗತ್ಯ ಇದೆಯಾ? ಎಂಬ ಪ್ರಶ್ನೆಗೆ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿ ಕೊಡೋದು ಫಿಕ್ಸ್? ನಾನ್ ರೆಡಿ ಎಂದ ಸೀಕ್ರೆಟ್ ಏನು? VIDEO
ನ್ಯೂಸ್ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು.. ಹೆಣ್ಮಕ್ಕಳಿಗೆ ರಕ್ಷಣೆ ಕೊಡುವುದಕ್ಕೆ ಸಮಿತಿ ಬಂದರೆ, ಇದು ಒಳ್ಳೆಯ ವಿಚಾರ. ಕೆಲವು ಕೆಟ್ಟ ಘಟನೆಗಳು ನಮ್ಮ ಇಂಡಸ್ಟ್ರಿಯಲ್ಲಿ ಮಾತ್ರ ನಡೆಯುತ್ತಿದೆ ಅಂತಲ್ಲ. ಎಲ್ಲಾ ಇಂಡಸ್ಟ್ರಿ, ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.
ನನ್ನ ಜೀವನದಲ್ಲಿ ಅಂತಹ ಶೋಷಣೆ ಏನೂ ಆಗಿಲ್ಲ. ಮೊದಲ ಸಿನಿಮಾಗಳಿಂದಲೂ ಯಾವ ರೀತಿಯಲ್ಲೂ ಆಗಿಲ್ಲ. ನಟ, ನಿರ್ಮಾಪಕ, ನಿರ್ದೇಶಕರು ಆಗಿರಬಹುದು ಒಳ್ಳೆಯ ರೀತಿಯಲ್ಲೇ ಇದ್ದರು. ಅವರೆಲ್ಲಾ ನನ್ನನ್ನ ಮಗಳ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಇತ್ತೀಚೆಗೆ ಒಂದು ಹುಡುಗಿ ಮೂಲಕ ಆ ವಿಚಾರ ಗೊತ್ತಾಯ್ತು. ಇನ್ಸ್ಟಾಗ್ರಾಮ್ನಲ್ಲಿ ನನ್ನ ಹೆಸರು ಯೂಸ್ ಮಾಡಿ ಚಾನ್ಸ್ ಕೊಡುತ್ತೇನೆ ಅಂತ ಹೇಳಿದ್ದಾರಂತೆ. ಅದಕ್ಕಾಗಿ ನಾನು ಹೇಳ್ದೆ, ಇದೆಲ್ಲಾ ಸುಳ್ಳು, ಇದನ್ನೆಲ್ಲ ನಂಬಲು ಹೋಗಬೇಡಿ ಎಂದು. ಚಾನ್ಸ್ ಕೊಡುವುದಾದರೆ ನಾನು ನೇರವಾಗಿ ಹೇಳ್ತೀನಿ. ನನ್ನ ಹೆಸರನ್ನು ಹೇಳಿಕೊಂಡು ಆ ಯುವತಿ ಜೀವನದಲ್ಲಿ ಆಟವಾಡಲು ನೋಡಿದ್ದಾರೆ. ಇದು ಆಗಬಾರದು ಇದಕ್ಕಾದರು ಕಮಿಟಿ ಬಂದ್ರೆ ಒಳ್ಳೆಯದು ಎಂದು ರಾಧಿಕಾ ಕುಮಾರಸ್ವಾಮಿ ಮನಬಿಚ್ಚಿ ಮಾತನಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ