ದರ್ಶನ್ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಧಿಕಾ ಕುಮಾರಸ್ವಾಮಿ
ಮಂಡ್ಯ, ಅನಾಥರು ಚಿತ್ರದಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದ ನಟಿ
ನ್ಯೂಸ್ಫಸ್ಟ್ನೊಂದಿಗೆ ಮನಬಿಚ್ಚಿ ಮಾತಾಡಿದ ರಾಧಿಕಾ ಕುಮಾರಸ್ವಾಮಿ
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ನಟ ಅರೆಸ್ಟ್ ಆಗುತ್ತಿದ್ದಂತೆ ಸ್ಟಾರ್ ನಟ, ನಟಿಯರು ಶಾಕ್ಗೆ ಒಳಗಾಗಿದ್ದರು. ಇದೀಗ ಸ್ಯಾಂಡಲ್ವುಡ್ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ದರ್ಶನ್ ಮತ್ತೊಂದು ಬೇಡಿಕೆ ಈಡೇರಿಸಿದ ಬಳ್ಳಾರಿ ಜೈಲು ಅಧಿಕಾರಿಗಳು; ಏನದು?
ವಿಚಾರ ತಿಳಿದು ರಾಧಿಕಾ ಕುಮಾರಸ್ವಾಮಿ ಕೂಡ ಶಾಕ್ ಆಗಿದ್ದರಂತೆ. ನಿಜವಾಗಲೂ ನಾನು ದರ್ಶನ್ ಅವರನ್ನು ನೋಡಿದ ರೀತಿಯೇ ಬೇರೆ. ಮಂಡ್ಯ, ಅನಾಥರು ಸಿನಿಮಾದಲ್ಲಿ ಮಾಡುವ ಸಂದರ್ಭದಲ್ಲಿ ತುಂಬಾನೇ ಫ್ರೆಂಡ್ಲಿಯಾಗಿ ಇರುತ್ತಿದ್ದರು. ದರ್ಶನ್ ಸರ್ ಜೊತೆಗೆ ಜಾಸ್ತಿ ಕ್ಲೋಸ್ ಇದ್ದಿದ್ದು ನಮ್ಮ ಅಣ್ಣ. ಅವರಿಗೆ ಅಹಂ ಇರಲಿಲ್ಲ. ಜನರ ಜೊತೆ ಒಳ್ಳೆಯ ರೀತಿಯಲ್ಲಿ ಬೆರೆಯುತ್ತಿದ್ದರು ಎಂದಿದ್ದಾರೆ.
ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿ ಕೊಡೋದು ಫಿಕ್ಸ್? ನಾನ್ ರೆಡಿ ಎಂದ ಸೀಕ್ರೆಟ್ ಏನು? VIDEO
ದಿಢೀರ್ ಅಂತ ಈ ನ್ಯೂಸ್ ಕೇಳಿ ಶಾಕ್ ಆಯ್ತು. ಅಯ್ಯೋ ಏನಪ್ಪ ಈ ರೀತಿ ಆಗೋಯ್ತು ಅಂತ ಬೇಸರ ಆಯ್ತು. ನಮ್ಮ ಇಂಡಸ್ಟ್ರಿಯಲ್ಲಿ ಇರೋರು ಕೆಲವೇ ಕೆಲವರು ಮಾತ್ರ. ನಮ್ಮ ಇಂಡಸ್ಟ್ರಿಗೆ ಅವರು ಬೇಕಾಗಿದ್ದಾರೆ. ಅವರ ಬದುಕಲ್ಲಿ ಏನು ನಡೆದಿದೆ ಅನ್ನೋದು ಅವರಿಗೆ ಮಾತ್ರ ಗೊತ್ತು. ನಾನು ನಿರ್ಮಾಪಕಿಯಾಗಿ ಹೇಳೋದಾದರೆ ಒಳ್ಳೆಯ ನಟನನ್ನು ನಾವು ಕಳೆದುಕೊಳ್ಳುತ್ತಿದ್ದೀವಾ? ಯಾಕೆ ಅವರ ಲೈಫ್ನಲ್ಲಿ ಹೀಗೆ ಆಯ್ತು? ಇನ್ನೊಂದು ಅವರ ಜೀವನದಲ್ಲಿ ಏನೆಲ್ಲಾ ನಡೆದಿದೆ ಅಂತ ನಮಗೆ ಗೊತ್ತಿಲ್ಲ. ಅಲ್ಲಿ ಏನ್ ನಡೆದಿದೆ ಅಂತ ಅವರಿಗೆ ಮಾತ್ರ ಗೊತ್ತಿರುತ್ತೆ. ನಮ್ಮ ಇಂಡಸ್ಟ್ರಿಗೆ ಅವರು ಬೇಕೇಬೇಕು. ಕಾನೂನಿನ ಬಗ್ಗೆಯಾಗಲಿ, ಅಧಿಕಾರಿಗಳ ಬಗ್ಗೆಯಾಗಲಿ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಅವರಿಗೆ ಏನೆಲ್ಲಾ ಕಷ್ಟಗಳು ಬಂದಿದೆ, ಆದಷ್ಟು ಬೇಗ ಒಳ್ಳೆಯದಾಗಲಿ ಅಂತ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ