newsfirstkannada.com

12 ಹೀರೋಯಿನ್​ಗಳ ಚಿತ್ರಕ್ಕೆ ನಟ ರಾಘವೇಂದ್ರ ರಾಜ್ ಕುಮಾರ್ ಸಾಥ್; ಮಾಸ್ ಲುಕ್‌ನಲ್ಲಿ ನಟ ತೇಜ್ ಎಂಟ್ರಿ

Share :

Published August 12, 2023 at 3:53pm

Update August 12, 2023 at 3:54pm

    ಒಂದಲ್ಲ ಎರಡಲ್ಲ ಬರೋಬ್ಬರಿ 12 ಬ್ಯೂಟಿಫುಲ್ ನಟಿಯರು

    ಡ್ಯೂಡ್ ಮಾಸ್ ಲುಕ್​ನಲ್ಲಿ ಎಂಟ್ರಿ ಕೊಟ್ಟಿರೋ ಬಾಲ ನಟ ತೇಜ್

    ರಂಗಾಯಣ ರಘು, ಸ್ಪರ್ಶ ರೇಖಾ, ಅನುಭವಿ ಕಲಾವಿದರ ಬಳಗ

ಬಾಲ ನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತೇಜ್, ಆ ನಂತರ ಕನ್ನಡ ತಮಿಳು ಚಿತ್ರರಂಗದಲ್ಲಿ ಕೆಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ರಿವೈಂಡ್ ಎನ್ನುವ ಸಿನಿಮಾವನ್ನು ನಿರ್ದೇಶಿಸಿ ತಾವೇ ನಟಿಸಿದ್ದರು. ನಂತರ ರಾಮಾಚಾರಿ 2.0 ಎಂಬ ಸಿನಿಮಾದ ಮುಖಾಂತರ ಖ್ಯಾತಿ ಪಡೆದಿದ್ದರು. ಇದೀಗ ಡ್ಯೂಡ್ ಎನ್ನುವ ಹೊಸ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ವಿಲನ್​ಗಳ ಮಧ್ಯದಿಂದ ತೇಜ್ ಮಾಸ್ ಲುಕ್​ನಲ್ಲಿ ಎಂಟ್ರಿ ಕೊಟ್ಟಿರೋ ಪೋಸ್ಟರ್ ರಿಲೀಸ್ ಆಗಿದೆ. ಕಳೆದ ಭಾನುವಾರ ಈ ಸಿನಿಮಾದ ಮುಹೂರ್ತ ಲಾಂಚ್ ಆಗಿತ್ತು. ಈ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್ ಕುಮಾರ್ ಆಗಮಿಸಿದ್ದು ಇನ್ನಷ್ಟು ವಿಶೇಷ. ತೇಜ್ ನಿರ್ದೇಶಿಸಿ ನಟಿಸುತ್ತಿರುವ ಈ ಸಿನಿಮಾಗೆ, ಶಶಿಧರ್ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ಮೊಹಮದ್ ಅವರ ಸಂಗೀತ ಮಂಜು ದೊಡ್ಮನಿ ಅವರ ಸಾಹಿತ್ಯ ಇರಲಿದೆ. ಇನ್ನು ಈ ಸಿನಿಮಾದ ಹಾಡುಗಳಿಗೆ ರಾಜಶೇಖರ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ.

ಈ ಸಿನಿಮಾದ ಇನ್ನೊಂದು ವಿಶೇಷತೆ ಅಂದ್ರೆ ಬರೋಬ್ಬರಿ 12 ಜನ ಬ್ಯೂಟಿಫುಲ್ ಹೀರೋಯಿನ್​ಗಳು ಸಿನಿಮಾದಲ್ಲಿ ಇರಲಿದ್ದಾರೆ. ಪೂಜಾರಾಜು, ಚಿತ್ರಲ್ ರಂಗಸ್ವಾಮಿ ರೋಹಿಣಿ, ಪ್ರಣವಿ ಗೌಡ, ಸಹನಗೌಡ, ಸಾನಿಯಾ, ಜೀವತಾ, ದೃತಿ, ಸೌಮ್ಯ, ರೊಸ್ಲಿಂಗ್, ಮಿಶೇಲ್ ನೊರೋನ, ಹೀಗೆ 12 ಜನ ನಾಯಕಿಯರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಫುಟ್ಬಾಲ್ ಕ್ರೀಡೆಯ ಸುತ್ತ ತಿರುಗುವ ಈ ಸಿನಿಮಾದಲ್ಲಿ ರಂಗಾಯಣ ರಘು, ಸ್ಪರ್ಶ ರೇಖಾ, ಇನ್ನುಳಿದ ಅನುಭವಿ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

12 ಹೀರೋಯಿನ್​ಗಳ ಚಿತ್ರಕ್ಕೆ ನಟ ರಾಘವೇಂದ್ರ ರಾಜ್ ಕುಮಾರ್ ಸಾಥ್; ಮಾಸ್ ಲುಕ್‌ನಲ್ಲಿ ನಟ ತೇಜ್ ಎಂಟ್ರಿ

https://newsfirstlive.com/wp-content/uploads/2023/08/new-movie-1.jpg

Load More