newsfirstkannada.com

ಯಾರೇ ಬಂದರೂ ನಸೀಬು ಬದಲಾಗಿಲ್ಲ.. ರೋಹಿತ್-ದ್ರಾವಿಡ್ ಜೋಡಿಗೆ ಇರೋದು ಒಂದೇ ಒಂದು ಚಾನ್ಸ್..!

Share :

12-06-2023

    WTC ಫೈನಲ್​​ನಲ್ಲಿ ಭಾರತಕ್ಕೆ ತೀವ್ರ ಮುಖಭಂಗ

    2 ಐಸಿಸಿ, 1 ಏಷ್ಯಾಕಪ್​​​​​​ ಟ್ರೋಫಿ ಸೋತ ಜೋಡಿ

    ರೋಹಿತ್​​-ದ್ರಾವಿಡ್​ರ ಐಸಿಸಿ ಟ್ರೋಫಿ ಸಾಧನೆ ಶೂನ್ಯ

ಟೀಮ್ ಇಂಡಿಯಾದ ಐಸಿಸಿ ಟ್ರೋಫಿ ಬರ ಸದ್ಯಕ್ಕೆ ನೀಗಲ್ಲ ಅನ್ಸುತ್ತೆ. ಹೊಸ ಕೋಚ್​​​​​, ಹೊಸ ಕ್ಯಾಪ್ಟನ್​​​​​​​​ ಜೊತೆಗೆ ಹೊಸ ಪ್ಲೇಯರ್ಸ್​ ಕೂಡ ಬಂದಾಯ್ತು. ಇಷ್ಟಾದರೂ ಭಾರತ ತಂಡದ ಅದೃಷ್ಟ ಬದಲಾಗಿಲ್ಲ. ಯಾರೇ ಬಂದ್ರೂ ಅದೇ ರಾಗ ಅದೇ ಹಾಡು ಅನ್ನುವಂತಾಗಿದೆ.

2013 ಟೀಮ್ ಇಂಡಿಯಾ ಕೊನೆ ಬಾರಿ ಐಸಿಸಿ ಟ್ರೋಫಿ ಗೆದ್ದ ವರ್ಷ. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಅದುವೇ ಕೊನೆ. ಕಳೆದ ಹತ್ತು ವರ್ಷಗಳಿಂದ ಮೆನ್​ ಇನ್ ಬ್ಲೂ ಪಡೆಗೆ ಐಸಿಸಿ ಟ್ರೋಫಿ ಅನ್ನೋದು ಮರೀಚಿಕೆಯಾಗಿದೆ. 2013 ರಿಂದ ಇಲ್ಲಿಯತನಕ ಬರೋಬ್ಬರಿ 9 ಐಸಿಸಿ ಟ್ರೋಫಿಗಳಲ್ಲಿ ಭಾರತ ಮುಗ್ಗರಿಸಿದೆ. ಇಲ್ಲಿ ನಿಜಕ್ಕೂ ಭಾರತ ತಂಡದ ಫೇಲ್ಯೂರ್​ ಎದ್ದು ಕಾಣುತ್ತಿದೆ.

ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ ತಂಡ ಉತ್ತಮ ಸಾಧನೆಯನ್ನೇ ಮಾಡಿತು. ಆದರೆ ಐಸಿಸಿ ಟ್ರೋಫಿ ಮಾತ್ರ ದಕ್ಕಲಿಲ್ಲ. ಕೊನೆ ಪಕ್ಷ ರೋಹಿತ್ ಶರ್ಮಾ ಹಾಗೂ ರಾಹುಲ್​ ದ್ರಾವಿಡ್​​​​​​​​ ಜೋಡಿ ಐಸಿಸಿ ಟ್ರೋಫಿ ವನವಾಸಕ್ಕೆ ಬ್ರೇಕ್​​​​ಹಾಕಬಲ್ಲರೆಂಬ ಅಪಾರ ನಿರೀಕ್ಷೆ ಮನೆಮಾಡಿತ್ತು. ಈಗ ಆ ಭರಸೆಗಳು ಹುಸಿಯಾಗಿವೆ. ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್​ಕೋಚ್​ ರಾಹುಲ್​​​ ದ್ರಾವಿಡ್​ ಕಾರ್ಯವೈಖರಿಯನ್ನ ಎಲ್ಲರೂ ಪ್ರಶ್ನಿಸುವಂತಾಗಿದೆ.

ಟೆಸ್ಟ್​ ವಿಶ್ವಕಪ್​​ ಗೆಲ್ಲಿಸಿಕೊಡುವಲ್ಲಿ ರೋಹಿತ್​​-ದ್ರಾವಿಡ್ ಫೇಲ್ಯೂರ್

ಚೊಚ್ಚಲ ವಿಶ್ವಟೆಸ್ಟ್​ ಚಾಂಪಿಯನ್​​​ಶಿಪ್​​​​​​​ ಗೆಲ್ಲುವ ಹುಮ್ಮಸ್ಸಿನೊಂದಿಗೆ ಇಂಗ್ಲೆಂಡ್​​​​ಗೆ ಹಾರಿದ್ದ ರೋಹಿತ್​​ & ರಾಹುಲ್​ ದ್ರಾವಿಡ್​​​​​​​ ಬಳಗ ದೊಡ್ಡ ಮುಖಭಂಗ ಅನುಭವಿಸಿದೆ. ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತು ಸುಣ್ಣವಾಗಿದೆ. ಆ ಮೂಲಕ ಮೊದಲ ಐಸಿಸಿ ಟ್ರೋಫಿ ಗೆಲ್ಲಿಸಿಕೊಡುವ ಕ್ಯಾಪ್ಟನ್ ರೋಹಿತ್​ ಹಾಗೂ ಕೋಚ್​​​​ ದ್ರಾವಿಡ್ ಪ್ಲಾನ್ ತಲೆಕೆಳಗಾಗಿದೆ.

2022ರ ಟಿ20 ವಿಶ್ವಕಪ್​​​ನಲ್ಲಿ ಅದೇ ರಾಗ ಅದೇ ಹಾಡು

ಅಂದಹಾಗೇ ರೋಹಿತ್​​-ದ್ರಾವಿಡ್​​​​ ಜೋಡಿಯ ಫೇಲ್ಯೂವರ್ ಇದೇ ಮೊದಲೇನಲ್ಲ. ಕಳೆದ ವರ್ಷ ಇವರ ಮಾರ್ಗದರ್ಶನದಲ್ಲೇ ಭಾರತ ಟಿ20 ವಿಶ್ವಕಪ್​​ ಅನ್ನ ಸೋತಿತ್ತು. ಟ್ರೋಫಿ ಗೆಲ್ಲುವ ನೆಚ್ಚಿನ ತಂಡವೆನಿಸಿದ್ದ ಮೆನ್​ ಇನ್​ ಬ್ಲೂ ಪಡೆ ಸೆಮಿಫೈನಲ್​​​ನಲ್ಲೇ ಸೋತು ಟೂರ್ನಿಗೆ ಗುಡ್​​ಬೈ ಹೇಳಿತ್ತು.

ಏಷ್ಯಾಕಪ್​​​​​​​​​ ಗೆಲ್ಲುವ ರೋಹಿತ್​​​-ದ್ರಾವಿಡ್​ ಕನಸು ಛಿದ್ರ

ಹೋಗ್ಲಿ ಐಸಿಸಿ ಟೂರ್ನಿಗಳಲ್ಲಿ ವಿಶ್ವದರ್ಜೆಯ ತಂಡಗಳು ಭಾಗವಹಿಸ್ತವೆ. ಹೀಗಾಗಿ ಕಪ್ ಗೆಲ್ಲೋದು ಕಷ್ಟನೇ. ಆದ್ರೆ ಏಷ್ಯಾಕಪ್ ಟ್ರೋಫಿ ಆದ್ರೂ ಗೆಲ್ಲಿಸಿಕೊಡಬಹುದಿತ್ತು. ಯಾಕಂದ್ರೆ ಇಲ್ಲಿ ಆಡೋದು ಏಷಿಯನ್​​ ತಂಡಗಳೇ. ಆದರೆ ರೋಹಿತ್​​​-ದ್ರಾವಿಡ್ ದ್ರಾವಿಡ್​​ಗೆ ಅಲ್ಲೂ ಮುಖಭಂಗ ಆಯ್ತು. ಕಳೆದ ಏಷ್ಯಾಕಪ್​​​ನಲ್ಲಿ ಭಾರತ ತಂಡ ಕ್ವಾಟರ್​​ಫೈನಲ್​​​ನಲ್ಲಿ ಪ್ರಯಾಣ ಮುಗಿಸಿತ್ತು.

ರೋಹಿತ್​​-ದ್ರಾವಿಡ್​ಗೆ ಎಚ್ಚರಿಕೆಯ ಕರೆಗಂಟೆ

ರೋಹಿತ್​​​​​ ಶರ್ಮಾ-ರಾಹುಲ್​ ದ್ರಾವಿಡ್​ಗೆ ಇದು ಎಚ್ಚರಿಕೆಯ ಕರೆಗಂಟೆ. ಯಾಕಂದ್ರೆ ಇವರ ಮಾರ್ಗದರ್ಶನದಲ್ಲಿ ಭಾರತ ಎರಡು ಐಸಿಸಿ ಟ್ರೋಫಿ, ಒಂದು ಏಷ್ಯಾಕಪ್​​​ ಸೋತಿದೆ. ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿದೆ. ಹೀಗಾಗಿ ಇಬ್ಬರು ತಮ್ಮ ಕೆಪಾಸಿಟಿ ಪ್ರೂವ್ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.
ಕೆಪಾಸಿಟಿ ಪ್ರೂವ್ ಮಾಡಲು ಹೆಚ್ಚೇನು ಸಮಯ ಉಳಿದಿಲ್ಲ. ಈ ವರ್ಷಾಂತ್ಯದಲ್ಲಿ ಏಕದಿನ ವಿಶ್ವಕಪ್​​ ನಡೆಯಲಿದೆ. ಅದಕ್ಕುಳಿದಿರೋದು ಇನ್ನು ಬರೀ 4 ತಿಂಗಳು ಮಾತ್ರ. ಈ ಅಲ್ಪಾವಧಿಯಲ್ಲಿ ರೋಹಿತ್​​​-ದ್ರಾವಿಡ್ ಜೋಡಿಯ ಕಾರ್ಯವೈಖರಿ ಬದಲಾಗಬೇಕಿದೆ. ಸ್ವಲ್ಪವೂ ವಿಶ್ರಮಿಸದೇ ಬಲಿಷ್ಠ ತಂಡ ಕಟ್ಟಬೇಕಿದೆ. ಒಂದು ವೇಳೆ ಇಲ್ಲಿ ಎಡವಿಬಿಟ್ರೆ ಇಬ್ಬರ ಪಾಲಿಗೆ ಒನ್ಡೇ ವಿಶ್ವಕಪ್​​​​ ಬಹುತೇಕ ಕೊನೆ ಆಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಯಾರೇ ಬಂದರೂ ನಸೀಬು ಬದಲಾಗಿಲ್ಲ.. ರೋಹಿತ್-ದ್ರಾವಿಡ್ ಜೋಡಿಗೆ ಇರೋದು ಒಂದೇ ಒಂದು ಚಾನ್ಸ್..!

https://newsfirstlive.com/wp-content/uploads/2023/06/RAHUL_DRAVID.jpg

Load More