newsfirstkannada.com

ಕೋಚ್ ರಾಹುಲ್ ದ್ರಾವಿಡ್ ಮಾತ್ರವಲ್ಲ; ಟೀಮ್ ಇಂಡಿಯಾ ಯಶಸ್ಸಿಗೆ ಇವರೂ ಕಾರಣ..!

Share :

17-11-2023

    ಸಪೋರ್ಟ್​​​​ ಸ್ಟಾಫ್​​ಗೂ ರಾಹುಲ್​ ದ್ರಾವಿಡ್​ ಅಭಯ

    ಟೀಕೆಗೆ ಗುರಿಯಾಗಿದ್ದ ಬ್ಯಾಟಿಂಗ್, ಬೌಲಿಂಗ್​ ಕೋಚ್​

    ಫೀಲ್ಡಿಂಗ್​ ಕೋಚ್​ ದಿಲೀಪ್​ ಕಾರ್ಯ ವೈಖರಿಗೂ ಟೀಕೆ

ರಾಹುಲ್​ ದ್ರಾವಿಡ್​​ ಟೀಮ್ ಇಂಡಿಯಾದ ಯಶಸ್ಸಿಗೆ ಹಗಲಿರುಳು ದುಡಿದ ದ್ರೋಣಾಚಾರ್ಯ. ಟೀಮ್​ ಇಂಡಿಯಾ ಸಕ್ಸಸ್​ ಕ್ರೆಡಿಟ್​​ ದ್ರಾವಿಡ್​​ ಸಲ್ಲಲೇಬೇಕು ಅನ್ನೋದ್ರಲ್ಲಿ ಡೌಟೇ ಬೇಡ. ಇದರ ಜೊತೆಗೆ ದ್ರೋಣಚಾರ್ಯನಿಗೆ ಬಲವಾಗಿ ನಿಂತವರೂ ಇದ್ದಾರೆ.

ರಾಹುಲ್​ ದ್ರಾವಿಡ್​ ಕೋಚ್​ ಹುದ್ದೆಗೇರಿದ ಮೇಲೆ ಕಾಂಟ್ರವರ್ಸಿಗಳಿಗೆ ಫುಲ್​ ಸ್ಟಾಫ್​ ಇಟ್ರು. ಇಬ್ಭಾಗವಾಗಿದ್ದ ತಂಡವನ್ನ ಒಂದು ಮಾಡಿದ್ರು. ಸಾಲು ಸಾಲು ಪ್ರಯೋಗ ಮಾಡಿ ಟೀಕೆ ಅನುಭವಿಸಿದ್ರು. ಅಂತಿಮವಾಗಿ ಇದೀಗ ವಿಶ್ವಕಪ್​ನಲ್ಲಿ ಯಶಸ್ಸಿನ ರುಚಿ ನೋಡಿದ್ದಾರೆ. ಅಸಂಖ್ಯ ಭಾರತೀಯರ ಮನದಲ್ಲಿ ವಿಶ್ವಕಪ್ ಗೆಲುವಿನ ನನಸು ಮಾಡಲು ಸಜ್ಜಾಗಿದ್ದಾರೆ. ದ್ರಾವಿಡ್​ ಹೀಗೆ ವೈಫಲ್ಯ ಸಕ್ಸಸ್​ ಶಿಖರವೇರಿದ್ರ ಹಿಂದೆ ಈ ತ್ರಿಮೂರ್ತಿಗಳ ಶ್ರಮ ಅಪಾರ. ಇನ್​ಫ್ಯಾಕ್ಟ್​ ದ್ರೋಣಾಚಾರ್ಯನಿಗೆ ಬಲ ತುಂಬಿದ್ದೆ ಈ ತ್ರಿಮೂರ್ತಿಗಳು.

ದ್ರಾವಿಡ್​ ಜೊತೆ ಕಲ್ಲು ಮುಳ್ಳಿನ ಹಾದಿ ತುಳಿದ ವಿಕ್ರಂ ರಾಥೋರ್

ಕಳೆದ 2 ವರ್ಷಗಳ ಹಿಂದೆ ಟೀಮ್​ ಇಂಡಿಯಾದ ಪ್ರಮುಖ ಬ್ಯಾಟರ್​​ಗಳು ಕಳಪೆ ಫಾರ್ಮ್​ ಸುಳಿಗೆ ಸಿಲುಕಿದ್ರು. ವಿರಾಟ್​ ಕೊಹ್ಲಿ ಹೀನಾಯ ಪ್ರದರ್ಶನ ನೀಡ್ತಿದ್ರೆ, ರೋಹಿತ್​ ಶರ್ಮಾರನ್ನ ಇನ್​ಕನ್ಸಿಸ್ಟೆನ್ಸಿ ಫಾರ್ಮ್​ ಕಾಡ್ತಿತ್ತು. ಟೀಮ್​ ಇಂಡಿಯಾ ಬ್ಯಾಟಿಂಗ್​ ಲೈನ್​ ಅಪ್​ ಸಿಕ್ಕಾಪಟ್ಟೆ ದುರ್ಬಲವಾಗಿ ಕಾಣ್ತಿತ್ತು. ಆದ್ರೆ, ಈಗ ಟೀಮ್​ ಇಂಡಿಯಾ ಬ್ಯಾಟಿಂಗ್​ ಆರ್ಡರ್​ ಸ್ಪಷ್ಟವಾಗಿದೆ. ಬಲಿಷ್ಟವೂ ಆಗಿದೆ. ಇದ್ರ ಹಿಂದಿನ ಸೂತ್ರದಾರ ವಿಕ್ರಂ ರಾಥೋರ್​!

ಟೀಮ್​ ಇಂಡಿಯಾ ಬ್ಯಾಟಿಂಗ್​ ಕೋಚ್​ ಆಗಿ ವಿಕ್ರಂ ರಾಥೋರ್​ ಪ್ರತಿಯೊಬ್ಬರ ಬ್ಯಾಟಿಂಗ್ ಟೆಕ್ನಿಕ್​ ಮೇಲೆ ವರ್ಕೌಟ್​ ಮಾಡಿದ್ರು. ನೆಟ್ಸ್​ನಲ್ಲಿ ಗಂಟೆಗಟ್ಟಲೇ ನಿಂತು ಪ್ರತಿಯೊಬ್ಬರ ಆಟವನ್ನ ತಿದ್ದಿ ತೀಡಿದ್ರು. ಇದ್ರ ಪ್ರತಿಫಲವೇ ಇಂದು ಬ್ಯಾಟ್ಸ್​ಮನ್​ಗಳಿಂದ ಭರ್ಜರಿ ಆಟ ಬರ್ತಿರೋದು.

ದ್ರಾವಿಡ್ ನಿರೀಕ್ಷೆ ಹುಸಿಗೊಳಿಸದ ಪರಾಸ್​ ಮಾಂಬ್ರೆ

ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯ ನಿಮಗೆ ನೆನಪಿರುತ್ತೆ. ಆಂಗ್ಲರು ರಣಾರ್ಭಟ ನಡೆಸುತ್ತಿದ್ರೆ ಟೀಮ್​ ಇಂಡಿಯಾ ಬೌಲರ್​ಗಳು ದಿಕ್ಕೇ ತೋಚದೆ ನಿಂತಿದ್ರು. ಒಂದೇ ಒಂದು ವಿಕೆಟ್​ ಕಬಳಿಸೋಕೆ ಭಾರತೀಯ ಬೌಲರ್​ಗಳ ಕೈಯಲ್ಲಿ ಆಗಿರಲಿಲ್ಲ. ಈ ವಿಶ್ವಕಪ್​ ಭಾರತದ ಬೌಲರ್​ಗಳನ್ನ ಮುಟ್ಟೋಕೆ ಸಾಧ್ಯಾನಾ?

ಟೀಮ್​ ಇಂಡಿಯಾ ಬೌಲರ್​ಗಳ ಈ ಬೆಂಕಿ-ಬಿರುಗಾಳಿ ಪ್ರದರ್ಶನದ ಹಿಂದಿರೋದು ಬೌಲಿಂಗ್​ ಕೋಚ್​ ಪರಾಸ್​ ಮಾಂಬ್ರೆ. ಪ್ರತಿಯೊಬ್ಬ ಬೌಲರ್​ಗಳ ವೀಕ್​ನೆಸ್​​ಗಳನ್ನ ಫೈಂಡ್​ಔಟ್​ ಮಾಡಿ, ಅವುಗಳ ಮೇಲೆ ವರ್ಕೌಟ್ ಮಾಡಿದ್ದೆ. ​ ಇದೇ ಪರಾಸ್​ ಮಾಂಬ್ರೆ. ಮಾಂಬ್ರೆಯ ಈ ಪರಿಶ್ರಮ ವಿಶ್ವಕಪ್​ ಅಖಾಡದಲ್ಲಿ ಯಶಸ್ಸಿನ ಗುಟ್ಟಾಗಿದೆ.

ದ್ರಾವಿಡ್​​ ಇಟ್ಟ ಭರವಸೆಯನ್ನ ಉಳಿಸಿಕೊಂಡ ದಿಲೀಪ್​.!​​

2019ರ ಬಳಿಕ ಟೀಮ್​ ಇಂಡಿಯಾ ಫೀಲ್ಡಿಂಗ್​ ಅತ್ಯಂತ ಕಳಪೆಯಾಗಿತ್ತು. ವಿಶ್ವಕಪ್​​​ಗೂ ಮುನ್ನ ನಡೆದ ಏಷ್ಯಾಕಪ್​ನಲ್ಲೂ ಫೀಲ್ಡಿಂಗ್​ ಯಡವಟ್ಟು ಮರುಕಳಿಸಿದ್ವು. ಈ ವಿಶ್ವಕಪ್​ನಲ್ಲಿ ಎಲ್ಲವೂ ಬದಲಾಗಿದೆ. ಟೀಮ್​ ಇಂಡಿಯಾ ನಂಬರ್​ ಫೀಲ್ಡಿಂಗ್​ ಸೈಡ್ ಆಗಿ ಹೊರ ಹೊಮ್ಮಿದೆ. ಇದರ ಹಿಂದಿರೋದು ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್​ ಶ್ರಮ. ಅದ್ರಲ್ಲೂ ದಿಲೀಪ್​ ಹೊಸದಾಗಿ ತಂದಿರೋ ಫೀಲ್ಡಿಂಗ್​ ಮೆಡಲ್​ ಪಡೆಯಲು ಆಟಗಾರರು ಪೈಪೋಟಿಗೆ ಬಿದ್ದವರಂತೆ ಫೀಲ್ಡ್​ ಮಾಡ್ತಿದ್ದಾರೆ.

ಇವರಿಷ್ಟೇ ಅಲ್ಲ.. ಥ್ರೋ ಡೌನ್​ ಸ್ಪೆಷಲಿಸ್ಟ್​ಗಳಾದ ಕನ್ನಡಿಗ ರಾಘವೇಂದ್ರನ ಶ್ರಮವೂ ಟೀಮ್​ ಇಂಡಿಯಾ ಸಕ್ಸಸ್​ಗೆ ಕಾರಣವಾಗಿದೆ. ಫಿಟ್​ನೆಸ್​ ಟ್ರೈನರ್ಸ್​, ವಿಡಿಯೋ ಅನಾಲಿಸ್ಟ್​ಗಳು, ಅಭ್ಯಾಸದಲ್ಲಿ ನೆರವಾದ ನೆಟ್​​ ಬೌಲರ್ಸ್​ ಎಲ್ಲರ ಶ್ರಮ ಟೀಮ್​ ಇಂಡಿಯಾದ ಸಕ್ಸಸ್​ಗೆ ಕಾರಣವಾಗಿದೆ. ಇವರೆಲ್ಲರನ್ನ ಒಗ್ಗೂಡಿಸಿದ ಕೀರ್ತಿ ಒನ್ಸ್​ ಅಗೇನ್​ ದ್ರಾವಿಡ್​ಗೆ ಸಲ್ಲಬೇಕು. ಬ್ಯಾಟಿಂಗ್​, ಫೀಲ್ಡಿಂಗ್​, ಬೌಲಿಂಗ್​ ಕೋಚ್​ಗಳು ವೈಫಲ್ಯ ಕಂಡಾಗ, ಟೀಕೆಗಳನ್ನ ಎದುರಿಸಿದಾಗ ಅವರ ಬೆಂಬಲಕ್ಕೆ ನಿಂತಿದ್ದು ದ್ರಾವಿಡ್​.ದಿ ವಾಲ್​ ಬೆಂಬಲಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಇಂದು ಇಂತಾ ಅದ್ಭುತವಾದ ರಿಸಲ್ಟ್​ ಸಿಕ್ಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೋಚ್ ರಾಹುಲ್ ದ್ರಾವಿಡ್ ಮಾತ್ರವಲ್ಲ; ಟೀಮ್ ಇಂಡಿಯಾ ಯಶಸ್ಸಿಗೆ ಇವರೂ ಕಾರಣ..!

https://newsfirstlive.com/wp-content/uploads/2023/11/DRAVID-2.jpg

Load More