ಹೊಸ ಅವತಾರದಲ್ಲಿ ದ್ರಾವಿಡ್ ಮಿಂಚಿಂಗ್,!
ಭಿನ್ನ - ವಿಭಿನ್ನ ಅವತಾರಗಳಲ್ಲಿ ದ್ರಾವಿಡ್ ಮಿಂಚು
ಶಿಸ್ತಿನ ಸಿಪಾಯಿ ದ್ರಾವಿಡ್ನ ನಾನಾ ಅವತಾರ ಇಲ್ಲಿದೆ
ರಾಹುಲ್ ದ್ರಾವಿಡ್ನ ಜಂಟಲ್ ಮೆನ್ ಗೇಮ್ನ ರಿಯಲ್ ಜಂಟಲ್ ಮೆನ್ ಅಂತಾರೆ. ಶಿಸ್ತು ಅನ್ನೋ ಪದಕ್ಕೆ ಸಮನಾರ್ಥಕ ಪದ ದ್ರಾವಿಡ್. ಆಟಗಾರನಾಗಿದ್ದಾಗ ಮಾತ್ರವಲ್ಲ. ಕೋಚ್ ಆದ ಮೇಲೆ ಕೂಡ ದ್ರಾವಿಡ್ ಸ್ಟ್ರಿಕ್ಟ್ ಮೇಷ್ಟ್ರೇ.! ಇಂತಾ ದ್ರಾವಿಡ್ರ ಡಿಫರೆಂಟ್ ಅವತಾರದ ಒಂದು ಸ್ಪೆಷಲ್ ಸ್ಟೋರಿ ಇಲ್ಲಿದೆ.
ರಾಹುಲ್ ದ್ರಾವಿಡ್. ವಿಶ್ವ ಕ್ರಿಕೆಟ್ ಲೋಕ ಕಂಡ ಶಿಸ್ತಿನ ಸಿಪಾಯಿ. ಆಟದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ದಿ ವಾಲ್ ಶಿಸ್ತಿನ ಸಿಪಾಯಿಯೇ. ಸಹಳ, ಮೃದು ಸ್ವಭಾವದ ದ್ರಾವಿಡ್ ಯಾವಾಗಲೂ ಡಿಸೆಂಟ್ ಆಗೇ ಕಾಣಿಸಿಕೊಳ್ತಾರೆ.
ದಿ ವಾಲ್ ಅಲ್ಲ.. ‘ದಿವಾರ್’ ದ್ರಾವಿಡ್.!
ಸದ್ಯ ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ಬ್ಯುಸಿಯಾಗಿದೆ. ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ಟೀಮ್ ಜೊತೆಗೆ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹೊಸ ಅವತಾರ ಎತ್ತಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಶಾಕ್ ಅಗ್ಬೇಕು ಹಂಗೆ ಕಾಣ್ತಿದ್ದಾರೆ ದಿ ವಾಲ್..!
ಅಮಿತಾಬ್ ಬಚ್ಚನ್ರ ಎವರ್ಗ್ರೀನ್ ಹಿಟ್ ಫಿಲ್ಮ್ ದಿವಾರ್ ಅನ್ನ ನೀವು ನೋಡಿದ್ರೆ, ಇದ್ರ ಬಗ್ಗೆ ಎಕ್ಸ್ಪ್ಲೇನ್ ಮಾಡೋದೆ ಬೇಡ. ಥೇಟ್ ಅಮಿತಾಬ್ರಂತೇ ದ್ರಾವಿಡ್ ಕಾಣ್ತಿದ್ದಾರೆ. ಈ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಈ ವಿಡಿಯೋ ಇದು ಕಮರ್ಷಿಯಲ್ ಆ್ಯಡ್ ಒಂದರ ತುಣುಕಾಗಿದೆ. ಯಾವಾಗಲೂ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಕಾಣಿಸಿಕೊಳ್ಳೋ ದ್ರಾವಿಡ್, ಹೀಗೆ ರಗಢ್ ಆಗಿ ಕಾಣಿಸಿಕೊಂಡಿರೋದು ಇದೇ ಮೊದಲೇನಲ್ಲ ಕ್ರಿಕೆಟ್ ಕರಿಯರ್ನ ಆರಂಭಿಕ ದಿನದಿಂದಲೂ ದ್ರಾವಿಡ್ ಡಿಫರೆಂಟ್ ಡಿಫರೆಂಟ್ ಅವತಾರದಲ್ಲಿ ಮಿಂಚಿದ್ದಾರೆ.
‘ಇಂದಿರಾನಗರದ ಗೂಂಡಾ’ ಆಗಿ ಮರೆದಾಡಿದ್ದ ದ್ರಾವಿಡ್.!
ಹೌದು. ಕೋಚ್ ಹುದ್ದೆಗೆ ಏರೋಕು ಮುನ್ನ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದ ದ್ರಾವಿಡ್, ಅಭಿಮಾನಿಗಳಿಗೆ ಸರ್ಪ್ರೈಸ್ ಶಾಕ್ ಕೊಟ್ಟಿದ್ರು. ಯಾಕಂದ್ರೆ, ರಿಯಲ್ ಜಂಟಲ್ಮೆನ್ ಅನ್ನಿಸಿಕೊಳ್ಳೋ ದ್ರಾವಿಡ್, ಇಂದಿರಾನಗರದ ಗೂಂಡಾ ಆಗಿ ಬದಲಾಗಿದ್ರು.
ಕರಿಯರ್ ಆರಂಭದಲ್ಲಿ ದ್ರಾವಿಡ್ ಸಂಪೂರ್ಣ ಭಿನ್ನ-ವಿಭಿನ್ನ.!
ಹೌದು. ಕ್ರಿಕೆಟ್ ಆಡ್ತಿದ್ದ ಕಾಲದಲ್ಲಿ ದ್ರಾವಿಡ್ ಜಾಹೀರಾತುದಾರರ ಪಾಲಿಗೆ ಡಾರ್ಲಿಂಗ್ ಆಗಿದ್ರು. ಹ್ಯೂಜ್ ಫ್ಯಾನ್ ಬೇಸ್ ಹೊಂದಿದ್ದ ದ್ರಾವಿಡ್, ಭಿನ್ನ – ವಿಭಿನ್ನ ಅವತಾರಗಳಲ್ಲಿ ಮಿಂಚಿದ್ರು. ಜಾಮ್ ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್ ಆಗಿ ಸಂಚಲನ ಮೂಡಿಸಿದ್ರು.
ದ್ರಾವಿಡ್ನ ಟೀಮ್ ಇಂಡಿಯಾದ ಸಹ ಆಟಗಾರರು ಜಾಮ್ ಎಂದೇ ಕರೀತಾ ಇದ್ರು. ಅದೇ ಕಾರಣಕ್ಕೋ ಏನೋ, ಜಾಮ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ದ್ರಾವಿಡ್ ಅಲ್ಲೂ ಛಾಪು ಮೂಡಿಸಿಯೇ ಬಿಟ್ಟಿದ್ರು. ಇದೊಂದೆ ಅಲ್ಲ, ಸಾಫ್ಟ್ ಡ್ರಿಂಕ್ ವೊಂದರ ಆ್ಯಡ್ ಶೂಟ್ನಲ್ಲಿ ಎತ್ತಿದ್ದ ಅವತಾರಕ್ಕಂತೂ ಹೆಣ್ಮಕ್ಕಳು ಕ್ಲೀನ್ಬೋಲ್ಡ್ ಆಗಿದ್ರು.
ದ್ರಾವಿಡ್ ಅನ್ನೋ ಹೆಸರು ಕೇಳಿದಾಕ್ಷಣ ಹಂಬಲ್ ವ್ಯಕ್ತಿತ್ವದ ಸಿಂಪಲ್ ಮ್ಯಾನ್ ಕಣ್ಣೆದುರು ಬರ್ತಾರೆ. ಅಂತಾ ದ್ರಾವಿಡ್ ಭಿನ್ನ-ವಿಭಿನ್ನವಾಗೇ ಕಂಡ್ರೆ, ಎಲ್ಲರೂ ತಿರುಗಿ ನೋಡೇ ನೋಡ್ತಾರೆ. ಈಗ ಮಾರ್ಕೆಂಟಿಂಗ್ ಕಂಪನಿಯವರು ಮಾಡ್ತಿರೋದು ಅದನ್ನೇ. ಇದಕ್ಕೆ ಅಲ್ವಾ ಹೇಳೋದು ಜನ ಮರುಳೋ, ಜಾತ್ರೆ ಮರುಳೋ ಅಂತಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ