newsfirstkannada.com

ಕಣ್ಣೀರು ತರಿಸುತ್ತೆ ದ್ರಾವಿಡ್​ ವಿದಾಯದ ಭಾಷಣ.. ಟೀಮ್​​ ಇಂಡಿಯಾಗೆ ಗುಡ್​ ಬೈ ಹೇಳೋ ಮುನ್ನ ಏನಂದ್ರು?

Share :

Published July 2, 2024 at 4:47pm

  ಟಿ20 ವಿಶ್ವಕಪ್​​ ಫೈನಲ್​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಗೆದ್ದ ಟೀಮ್​​ ಇಂಡಿಯಾ!

  ಟ್ರೋಫಿ ಗೆದ್ದ ಬೆನ್ನಲ್ಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​​ ಹುದ್ದೆಗೆ ರಾಜೀನಾಮೆ

  ವಿಶ್ವಕಪ್​ ಗೆಲುವಿನ ಟೀಮ್​ ಇಂಡಿಯಾ ಮುಖ್ಯ ಹುದ್ದೆ ತೊರೆದ ರಾಹುಲ್​​ ದ್ರಾವಿಡ್​​

ಇತ್ತೀಚೆಗೆ ನಡೆದ 2024ರ ಟಿ20 ವಿಶ್ವಕಪ್​​ ಫೈನಲ್​ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಟೀಮ್​ ಇಂಡಿಯಾ ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿದಿದೆ. ವಿಶ್ವಕಪ್​ ಗೆದ್ದ ಕೂಡಲೇ ಟೀಮ್​ ಇಂಡಿಯಾದ ಸ್ಟಾರ್​ ಪ್ಲೇಯರ್ಸ್​ ಆದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಮತ್ತು ಜಡೇಜಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ ವಿದಾಯ ಹೇಳಿದ್ದಾರೆ. ಇವರ ಜೊತೆಗೆ ಟೀಮ್​ ಇಂಡಿಯಾ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ ಅವರ ಅವಧಿ ಕೂಡ ಮುಗಿದಿದೆ.

ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ ಅವರಿಗೆ ಟೀಮ್​ ಇಂಡಿಯಾ ಆಟಗಾರರು ವಿಶ್ವಕಪ್​ ಗೆದ್ದು ಉತ್ತಮ ಬೀಳ್ಕೊಡುಗೆ ನೀಡಿದ್ದಾರೆ. ತನ್ನ ಅವಧಿ ಮುಗಿದ ಬಳಿಕ ರಾಹುಲ್​ ದ್ರಾವಿಡ್​ ಅವರು ಡ್ರೆಸ್ಸಿಂಗ್​​​ ರೂಮ್​ನಲ್ಲಿ ವಿದಾಯದ ಭಾಷಣ ಮಾಡಿದ್ದಾರೆ. ಇವರ ವಿದಾಯದ ಭಾಷಣ ಎಲ್ಲರ ಕಣ್ಣಲ್ಲೂ ನೀರು ತರಿಸುವಂತಿದೆ.

ನಾನು ಬೆರಗಾಗಿದ್ದೇನೆ. ವಿಶ್ವಕಪ್​ ಗೆದ್ದ ಕ್ಷಣಗಳು ಜೀವಮಾನವಿಡೀ ನೆನಪಿನಲ್ಲೇ ಉಳಿಯುತ್ತವೆ. ನೀವು ಎಷ್ಟು ರನ್​​, ಎಷ್ಟು ವಿಕೆಟ್​ ತೆಗೆದಿದ್ದೀರಿ ಎಂದು ಯಾರಿಗೂ ನೆನಪಿನಲ್ಲಿ ಇರೋದಿಲ್ಲ. ಆದರೆ, ಈ ವಿಜಯದ ಕ್ಷಣಗಳು ನೆನಪಿನಲ್ಲಿ ಇರುತ್ತವೆ ಎಂದರು ದ್ರಾವಿಡ್​.

ಸಾಕಷ್ಟು ಅವಮಾನಗಳ ಬಳಿಕ ಸ್ಟ್ರಾಂಗ್​ ಕಮ್​ಬ್ಯಾಕ್​ ಮಾಡಿದ್ದೇವೆ. ಒಂದು ತಂಡವಾಗಿ ಹೋರಾಟ ಮಾಡಿ ವಿಶ್ವಕಪ್​ ಗೆದ್ದಿದ್ದೀರಿ. ನಿಮ್ಮ ಹೋರಾಟ ಹೀಗೆ ಮುಂದುವರಿಯಲಿ. ನನ್ನನ್ನು 2024ರ ಟಿ20 ವಿಶ್ವಕಪ್ ಟೂರ್ನಿವರೆಗೂ ಕೋಚ್​​ ಆಗಿ ಇರಲು ಮನವೊಲಿಸಿದ ರೋಹಿತ್​ಗೂ ಧನ್ಯವಾದಗಳು ಎಂದರು ರಾಹುಲ್​ ದ್ರಾವಿಡ್​.

ಇದನ್ನೂ ಓದಿ: T20 ವಿಶ್ವಕಪ್​ ಗೆಲುವಿನ ಮಾಸ್ಟರ್ ಮೈಂಡ್​ಗಳು.. ಕೊಹ್ಲಿರನ್ನ ಓಪನಿಂಗ್ ಆಡಿಸಿ ಟ್ರೋಫಿ ಗೆದ್ದೇ ಬಿಟ್ರು!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಣ್ಣೀರು ತರಿಸುತ್ತೆ ದ್ರಾವಿಡ್​ ವಿದಾಯದ ಭಾಷಣ.. ಟೀಮ್​​ ಇಂಡಿಯಾಗೆ ಗುಡ್​ ಬೈ ಹೇಳೋ ಮುನ್ನ ಏನಂದ್ರು?

https://newsfirstlive.com/wp-content/uploads/2024/07/Dravid_Team-India.jpg

Load More