newsfirstkannada.com

×

ಕನ್ನಡಿಗ ದ್ರಾವಿಡ್​ಗೆ ಈ IPL ಟೀಮ್ ಅಂದ್ರೆ ಯಾಕಿಷ್ಟು ಪ್ರೀತಿ.. RCB ಅಂತೂ ಅಲ್ಲವೇ ಅಲ್ಲ!

Share :

Published September 12, 2024 at 12:17pm

    ರಾಹುಲ್ ದ್ರಾವಿಡ್ ವಿಚಾರದಲ್ಲಿ RCB ಮಾಡಿದ ತಪ್ಪೇನು?

    ಆ ಒಂದು ಟೀಮ್ ಎಂದರೆ ರಾಹುಲ್ ದ್ರಾವಿಡ್​ಗೆ ಪ್ರೀತಿ ಜಾಸ್ತಿ

    ಮಾಜಿ ಹೆಡ್​ಕೋಚ್​ಗೆ ಅಂದು ಅಪಮಾನವಾಗಿದ್ದು ನಿಜನಾ?

ಹಣ ಅಂದ್ರೆ, ಹೆಣ ಕೂಡ ಬಾಯಿ ಬಿಡುತ್ತೆ. ಆದ್ರೆ, ಈ ವಿಷ್ಯವನ್ನು ದ್ರಾವಿಡ್, ಪದೇ ಪದೇ ಸುಳ್ಳಾಗಿಸುತ್ತಿದ್ದಾರೆ. ಹೆಡ್ ಕೋಚ್ ಹುದ್ದೆಗೆ ಆರ್​ಆರ್​ ನೀಡಿದ್ದ ಬ್ಲಾಂಕ್​ ಚೆಕ್​ ಅನ್ನೇ ತಿರಸ್ಕರಿಸಿದ್ದಾರೆ. ಆದ್ರೆ, ಇದರ ಹಿಂದೆ ಒಂದು ನಿಷ್ಠೆಯ ಕಥೆ ಇದೆ. ಅದೇನು?.

ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದ ದಿ ಗ್ರೇಟ್ ವಾಲ್​. ಆಟಗಾರನಾಗಿ, ಕೋಚ್ ಆಗಿ ದ್ರಾವಿಡ್ ಟೀಮ್ ಇಂಡಿಯಾಗೆ ನೀಡಿದ ಕೊಡುಗೆ ನಿಜಕ್ಕೂ ಅಪಾರ. ಆದ್ರೆ, ಇದೇ ರಾಹುಲ್ ದ್ರಾವಿಡ್, ಈಗ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ, ಆರ್​ಆರ್​ ನೀಡಿರುವ ಬ್ಲಾಂಕ್​ ಚೆಕ್ ಅನ್ನೇ ತಿರಸ್ಕರಿಸಿದ್ದಾರೆ. ಇದು ಸಹಜವಾಗೇ ರಾಜಸ್ಥಾನ ರಾಯಲ್ಸ್ ಅಂದ್ರೆ, ದ್ರಾವಿಡ್​​ಗೆ ಯಾಕಿಷ್ಟು ಪ್ರೀತಿ ಎಂಬ ಪ್ರಶ್ನೆ ಉದ್ಬವಿಸುವಂತೆ ಮಾಡಿದೆ. ಆದ್ರೆ, ಇದಕ್ಕೆ ಕಾರಣ ಅಂದು ಆರ್​ಸಿಬಿ ಮಾಡಿದ್ದ ತಪ್ಪು ಹಾಗೂ ಆರ್​ಆರ್​ ಮೇಲಿನ ನಿಷ್ಠೆ.

ಹೌದು! ​​​​​​​​​​​​​​​​2008ರಲ್ಲಿ ದ್ರಾವಿಡ್​ ಆರ್​ಸಿಬಿ ನಾಯಕರಾಗಿದ್ದರು. ಆದ್ರೆ, ಮರು ವರ್ಷವೇ ತಂಡಕ್ಕೆ ಸರ್ಜರಿ ಮಾಡಿದ್ದ ಫ್ರಾಂಚೈಸಿ, ದ್ರಾವಿಡ್​​ರನ್ನ ನಾಯಕತ್ವದಿಂದ ಕೆಳಗಿಳಿಸಿತ್ತು. ಇದರ ಹೊರತಾಗಿಯೂ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿದ್ದ ದ್ರಾವಿಡ್​​ಗೆ ನಂತರ ಗೇಟ್​ಪಾಸ್​ ನೀಡಿ ಅಪಮಾನಿಸಿತ್ತು. ಈ ವೇಳೆ ಗೌರವದೊಂದಿಗೆ ಆಹ್ವಾನ ನೀಡಿದ ರಾಜಸ್ಥಾನ್ ರಾಯಲ್ಸ್ ನಾಯಕತ್ವದ ಪಟ್ಟ ನೀಡಿತು. ನಾಯಕನಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದ ದ್ರಾವಿಡ್​, 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನ ಪ್ಲೇ ಆಫ್​​​​ಗೇರಿಸಿದ್ದರು. ಅದೇ ವರ್ಷ ನಡೆದ ಚಾಂಪಿಯನ್ ಲೀಗ್ ಟಿ20 ಟೂರ್ನಿಯಲ್ಲಿ ಫೈನಲ್ಸ್​ ತಲುಪಿಸಿದ್ರು. 2011ರಿಂದ 2013ರ ತನಕ ಕ್ರಮವಾಗಿ 343, 462, 471 ರನ್ ಗಳಿಸಿದ್ದ ದ್ರಾವಿಡ್​, 2013ರಲ್ಲೇ ನಿವೃತ್ತಿ ಘೋಷಿಸಿ 2014, 2015ರಲ್ಲಿ ಆರ್​ಆರ್​ ತಂಡದ ಮಾರ್ಗದರ್ಶಕರಾಗಿದ್ದರು.

ನಂತರ ನಡೆದಿದ್ದೆಲ್ಲ ಇತಿಹಾಸ. ಆದ್ರೆ, ಇತಿಹಾಸ ಸೃಷ್ಟಿಸಿದ ದ್ರಾವಿಡ್, 9 ವರ್ಷಗಳ ನಂತರ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೆಡ್ ಕೋಚ್ ಆಗಿ ಮರಳಿದ್ದಾರೆ. ಇದಕ್ಕೆ ಕಾರಣ ಅಂದು ಯಾವೊಂದು ಫ್ರಾಂಚೈಸಿ ಕೂಡ ದ್ರಾವಿಡ್ ಮೇಲೆ ವಿಶ್ವಾಸ ಇಟ್ಟಿರಲಿಲ್ಲ. ಈ ವೇಳೆ ನೆರವಾಗಿದ್ದೆ ರಾಜಸ್ಥಾನ್ ರಾಯಲ್ಸ್. ಇದೇ ಕಾರಣಕ್ಕೆ ಆರ್​ಆರ್​ ಮೇಲೆ ನಿಷ್ಠೆ ಹೊಂದಿರುವ ದ್ರಾವಿಡ್, ಬ್ಲಾಂಕ್​ ಚೆಕ್ ಪಡೆಯದಿರಲು ಮುಖ್ಯ ಕಾರಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕನ್ನಡಿಗ ದ್ರಾವಿಡ್​ಗೆ ಈ IPL ಟೀಮ್ ಅಂದ್ರೆ ಯಾಕಿಷ್ಟು ಪ್ರೀತಿ.. RCB ಅಂತೂ ಅಲ್ಲವೇ ಅಲ್ಲ!

https://newsfirstlive.com/wp-content/uploads/2023/11/RAHUL_DRAVID-1.jpg

Load More