newsfirstkannada.com

ನಿವೃತ್ತಿ ಬೆನ್ನಲ್ಲೇ ಕೊಹ್ಲಿಗೆ ಹೊಸ ಜವಾಬ್ದಾರಿ ಹೊರಿಸಿದ ರಾಹುಲ್​ ದ್ರಾವಿಡ್​.. ಆ ಕನಸು ನನಸು ಮಾಡ್ತಾರಾ ಕಿಂಗ್​!

Share :

Published July 4, 2024 at 12:56pm

Update July 4, 2024 at 12:57pm

  ಕೊನೆಯ ಯುದ್ಧದಲ್ಲಿ ಕೊಹ್ಲಿಗೆ T20 ವಿಶ್ವಕಪ್​ ಕಿರೀಟ

  ದ್ರಾವಿಡ್​ ಕೊಹ್ಲಿಗೆ ನೀಡಿದ ಕೊನೆಯ ಸಂದೇಶ ಏನು?

  ದ್ರಾವಿಡ್​ ಹೇಳಿದ ಆ ಮಾತನ್ನು ನನಸು ಮಾಡ್ತಾರಾ ಕೊಹ್ಲಿ?

ಕಿಂಗ್​ಕೊಹ್ಲಿಯ ಬಹುಕಾಲದ ಕನಸು ಈ ವರ್ಷ ನನಸಾಗಿದೆ. ಕರಿಯರ್​ ಆರಂಭ ಕನಸನ್ನ ಬೆನ್ನತ್ತಿ, ಅದಕ್ಕಾಗಿ ದಣಿವರಿಯದೇ ದುಡಿದ್ರೂ ಚುಟುಕು ಚಾಂಪಿಯನ್​ ಪಟ್ಟ ಕೊಹ್ಲಿಗೆ ದಕ್ಕಿರಲಿಲ್ಲ. ಕೊನೆಗೂ ಟಿ20 ವಿಶ್ವಕಪ್​ ಗೆದ್ದಾಗಿದೆ. ಇದ್ರ ಬೆನ್ನಲ್ಲೇ ನಿರ್ಗಮಿತ ಕೋಚ್​ ರಾಹುಲ್​ ದ್ರಾವಿಡ್​, ಕಿಂಗ್​ ಕೊಹ್ಲಿ ಹೊಸ ಟಾಸ್ಕ್​ ಕೊಟ್ಟಿದ್ದಾರೆ. ದ್ರಾವಿಡ್​ ನೀಡಿರೋ ಟಾಸ್ಕ್​, ಕೊಹ್ಲಿಯ ಕಿಚ್ಚನ್ನ ಹೆಚ್ಚಿಸಿದೆ. ಆ ಟಾಸ್ಕ್​ ಏನು.? ಇಲ್ಲಿದೆ ಓದಿ.

ಸತತ ಸೋಲು, ವೈಫಲ್ಯ, ಬ್ಯಾಡ್​ ಲಕ್​. ಒಂದಾ..? ಎರಡಾ..? ಕಳೆದ 11 ವರ್ಷಗಳಿಂದ ಟೀಮ್​ ಇಂಡಿಯಾ ಐಸಿಸಿ ಟೂರ್ನಿಯಲ್ಲಿ ಅನುಭವಿಸಿದ್ದು ನಿರಾಸೆಯನ್ನ. ಪರಿಣಾಮ ಸಿಕ್ಕಿದ್ದು ಚೋಕರ್ಸ್​ ಪಟ್ಟ. ಇದೀಗ ತಂಡಕ್ಕಂಟಿದ್ದ ಎಲ್ಲಾ ಕಳಂಕಗಳಿಗೂ ಫುಲ್​ ಸ್ಟಾಫ್​ ಬಿದ್ದಿದೆ. ಬಾರ್ಬಡೋಸ್​ ಭಾರತದ ಝಂಡಾ ಹಾರಿಸಿರೋ ರೋಹಿತ್​ ಶರ್ಮಾ ಪಡೆ, ಟೀಮ್​ ಇಂಡಿಯಾವನ್ನ ಚುಟುಕು ಚಾಂಪಿಯನ್​ ಪಟ್ಟಕ್ಕೇರಿಸಿದೆ.

ಇದನ್ನೂ ಓದಿ: ಇದು ರೋಹಿತ್ ಶರ್ಮಾರ ಹಲವು ಮುಖ! ಫನ್​ಗೂ ಸೈ, ಡ್ಯಾನ್ಸ್​ಗೂ ಜೈ ಹಿಟ್​​ಮ್ಯಾನ್​

ಗೆಲುವಿನ ಬೆನ್ನಲ್ಲೇ ಗುಡ್​ ಬೈ ಹೇಳಿದ ದಿಗ್ಗಜರು.!

ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಟೀಮ್​ ಇಂಡಿಯಾದ ದಿಗ್ಗಜರು ಟಿ20 ಫಾರ್ಮೆಟ್​ಗೆ ಗುಡ್​ ಬೈ ಹೇಳಿದ್ದಾರೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ರವೀಂದ್ರ ಜಡೇಜಾ ಟಿ20 ಇಂಟರ್​ನ್ಯಾಷನಲ್ಸ್​ಗೆ ವಿದಾಯ ಹೇಳಿದ್ರು.​ ರಾಹುಲ್​ ದ್ರಾವಿಡ್​ ಗೆಲುವಿನೊಂದಿಗೆ ಟೀಮ್​ ಇಂಡಿಯಾದ ಕೋಚ್​ ಹುದ್ದೆಯನ್ನ ತೊರೆದಿದ್ದಾರೆ. ಕೋಚ್​ ಹುದ್ದೆಯನ್ನ ತೊರೆದ ರಾಹುಲ್​ ದ್ರಾವಿಡ್​ ಸುಮ್ಮನೇ ಜಾಗ ಖಾಲಿ ಮಾಡಿಲ್ಲ. ಕಿಂಗ್​ ಕೊಹ್ಲಿಗೆ ಹೊಸ ಟಾಸ್ಕ್​ ನೀಡಿ ನಿರ್ಗಮಿಸಿದ್ದಾರೆ. ​

ಕಿಂಗ್​ ಕೊಹ್ಲಿಗೆ ಹೊಸ​ ಟಾಸ್ಕ್​ ಕೊಟ್ಟ ದ್ರಾವಿಡ್​.!​

ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಟಿ20 ಇಂಟರ್​ನ್ಯಾಷನಲ್ಸ್​ಗೆ ಗುಡ್​ ಬೈ ಹೇಳಿದ ಕೊಹ್ಲಿ ಬಳಿಕ ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ರು. ಭಾವುಕರಾಗಿದ್ದ ಟ್ರೋಫಿ ಹಿಡಿದುಕೊಂಡು ಮೈದಾನದ ತುಂಬೆಲ್ಲಾ ಸುತ್ತಾಡಿ ಸಂಭ್ರಮಿಸಿದ್ರು. ಈ ಸಂಭ್ರಮಾಚರಣೆ ಮೈದಾನದ ಉದ್ದಗಲದಿಂದ ಹಿಡಿದು ಡ್ರೆಸ್ಸಿಂಗ್​ರೂಮ್​ನವರೆಗೂ ನಡೀತು. ಡ್ರೆಸ್ಸಿಂಗ್​ ರೂಮ್​ ಸಂಭ್ರಮಿಸ್ತಾ ಇದ್ದ ವೇಳೆಯೇ ನೋಡಿ, ಟೀಮ್​ ಇಂಡಿಯಾದ ನಿರ್ಗಮಿತ ಕೋಚ್​ ರಾಹುಲ್​ ದ್ರಾವಿಡ್​, ವಿರಾಟ್​ ಕೊಹ್ಲಿಗೆ ಒಂದು ಸ್ಪೆಷಲ್​ ಟಾಸ್ಕ್​ ನೀಡಿದ್ದು.

ಇದನ್ನೂ ಓದಿ: ಟೀಂ ಇಂಡಿಯಾದ ಹಿಂದೆ ದೈವ ಶಕ್ತಿಯ ಆಟ! ಗೆಲುವಿನ ಕ್ರೆಡಿಟ್ ದೇವರಿಗೆ ಅರ್ಪಿಸಿದ ಆಟಗಾರರು

ಎಲ್ಲಾ ಮೂರು ವೈಟ್ಸ್​ನ ಟಿಕ್​ ಮಾಡಿದ್ದಾಯ್ತು. ಒಂದು ರೆಡ್​ ಮಾತ್ರ ಬಾಕಿಯಿದೆ. ​ಟಿಕ್​ ಇಟ್​.

2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ವಿರಾಟ್​ ಕೊಹ್ಲಿ, 2011ರಲ್ಲೇ ಏಕದಿನ ವಿಶ್ವಕಪ್​ ಗೆದ್ರು. 2013ರಲ್ಲಿ ಚಾಂಪಿಯನ್ಸ್​ ಟ್ರೋಫಿ ಜಯಿಸಿದ್ರು. ಆದ್ರೆ, ಟಿ20 ವಿಶ್ವಕಪ್​ ಗೆಲ್ಲಲಾಗದ ಕೊರಗು ವಿರಾಟ್​ ಕೊಹ್ಲಿಯನ್ನ ಬಿಡದೇ ಕಾಡಿತ್ತು. ಟಿ20 ವಿಶ್ವಕಪ್​ ಟೂರ್ನಿಯ ಇತಿಹಾಸದ ಸಾಮ್ರಾಟನಾಗಿ ಮೆರೆದ್ರೂ, ರನ್​ಗಳಿಕೆಯಲ್ಲಿ ದಾಖಲೆ ಬರೆದ್ರೂ, ಕಪ್​ ಕನಸಾಗೇ ಉಳಿದಿತ್ತು. ಕೊನೆಗೂ ಆ ನಿರಾಸೆ, ಹತಾಶೆಗೆ ಈ ಬಾರಿ ಬ್ರೇಕ್​ ಬಿದ್ದಿದೆ. ಚುಟುಕು ವಿಶ್ವಕಪ್​ ಗೆದ್ದ ವಿರಾಟ್​, ವೈಟ್​ಬಾಲ್​ ಫಾರ್ಮೆಟ್​ನ ಪ್ರತಿಷ್ಟಿತ ಮೂರು ICC ಟ್ರೋಫಿಗಳನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇದನ್ನ ದ್ರಾವಿಡ್​ ಹೇಳಿದ್ದು ALL THREE WHITES TICKED OFF ಅಂತಾ..!

ಕೊಹ್ಲಿಗೆ ಟೆಸ್ಟ್ ಚಾಂಪಿಯನ್​ ಶಿಪ್​ ಗೆಲ್ಲೋ ಗುರಿ.!

ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಮೂರೂ ಐಸಿಸಿ ಟ್ರೋಫಿಗಳನ್ನ ಗೆದ್ದ ಸಾಧನೆಯನ್ನ ವಿರಾಟ್​ ಕೊಹ್ಲಿ ಇದೀಗ ಮಾಡಿದ್ದಾಗಿದೆ. ಈಗ ಬ್ಯಾಲೆನ್ಸ್​ ಇರೋದು ಒಂದೇ ಅದೇ ಐಸಿಸಿ ಟೆಸ್ಟ್ ಚಾಂಪಿಯನ್​​ಶಿಪ್​ ಮೆಸ್​​.! ONE RED TO GO. TICK IT ಅಂತಾ ದ್ರಾವಿಡ್​ ಹೇಳಿರೋದು ಇದ್ರ ಬಗ್ಗೇನೆ. ಎರಡು ಬಾರಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಟೀಮ್​ ಇಂಡಿಯಾ ಪ್ರವೇಶಿಸಿದೆ. ಆದ್ರೆ, ಫೈನಲ್​ನಲ್ಲಿ ಕಪ್​ ಗೆಲ್ಲುವಲ್ಲಿ ಎಡವಿದೆ. ನಾಯಕನಾಗಿ ಒಮ್ಮೆ, ಬ್ಯಾಟ್ಸ್​ಮನ್​ ಆಗಿ ಮತ್ತೊಮ್ಮೆ ಕೊಹ್ಲಿ ಕೂಡ ಫೇಲ್​ ಆಗಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಗೆಲುವಿನ ಹಿಂದೆ ಕೆಲಸ ಮಾಡಿದ್ದು ಜೋಡೆತ್ತುಗಳ ಬಾಂಡಿಂಗ್.. ಹೃದಯ ಗೆದ್ದ ಸ್ನೇಹಿತರು ಇವರು..!

ವಿಶ್ವ ಕ್ರಿಕೆಟ್​ ಲೋಕದಲ್ಲಿ ಆಟಗಾರನಾಗಿ, ನಾಯಕನಾಗಿ ವಿರಾಟ್​ ಕೊಹ್ಲಿ ಅಸಾಧ್ಯ ಅಂದಿದ್ದನೆಲ್ಲಾ ಸಾಧಿಸಿ ತೋರಿಸಿದ್ದಾರೆ. ದೇಶ-ವಿದೇಶಗಳಲ್ಲಿ ರನ್ ಕೊಳ್ಳೆ ಶತಕಗಳ ಮೇಲೆ ಶತಕ ಸಿಡಿಸಿದ್ದಾರೆ. ಅದ್ರಲ್ಲೂ, ಟೆಸ್ಟ್​ ಫಾರ್ಮೆಟ್ ವಿರಾಟ್​ ಕೊಹ್ಲಿಯ ಫೇವರಿಟ್​ ಫಾರ್ಮೆಟ್​.! ಈ ಫಾರ್ಮೆಟ್​​ನಲ್ಲಿ ಕಪ್​​ ಗೆಲ್ಲಲೇಬೇಕು ಅನ್ನೋ ಹಂಬಲ ಕೊಹ್ಲಿಗೂ ಇದೆ. ಇದೀಗ ದ್ರಾವಿಡ್​ ಟಾಸ್ಕ್​ ಬೇರೆ ನೀಡಿದ್ದಾರೆ. ಇದು ಕೊಹ್ಲಿಯಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​ ಮೆಸ್​ ಗೆಲ್ಲೋ ಕನಸಿಗೆ ಕಿಚ್ಚು ಹಚ್ಚಿರೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿವೃತ್ತಿ ಬೆನ್ನಲ್ಲೇ ಕೊಹ್ಲಿಗೆ ಹೊಸ ಜವಾಬ್ದಾರಿ ಹೊರಿಸಿದ ರಾಹುಲ್​ ದ್ರಾವಿಡ್​.. ಆ ಕನಸು ನನಸು ಮಾಡ್ತಾರಾ ಕಿಂಗ್​!

https://newsfirstlive.com/wp-content/uploads/2024/07/Dravid.jpg

Load More