newsfirstkannada.com

ಟೀಂ ಇಂಡಿಯಾ ಸಾಲು ಸಾಲು ಸೋಲಿಗೆ ದ್ರಾವಿಡ್​​​ ಅವರೇ ಕಾರಣನಾ..? ಮೌನ ಮುರಿದ ಸಹನಾಮೂರ್ತಿ ದ್ರಾವಿಡ್

Share :

13-07-2023

  20 ತಿಂಗಳ ಅವಧಿಯಲ್ಲಿ ಸನ್ಮಾನಕ್ಕಿಂತ ಅಪಮಾನವೇ ಹೆಚ್ಚು

  ಶಾಸ್ತ್ರಿ ನಿರ್ಗಮನದ ಬಳಿಕ ರಾಹುಲ್​ ದ್ರಾವಿಡ್ ತಂಡಕ್ಕೆ ಎಂಟ್ರಿ

  ಆಯ್ಕೆ ಮಾಡಿದ 15 ಪ್ಲೇಯರ್ಸ್​ ಪ್ರತಿ ಬಾರಿ ಆಡುವುದಿಲ್ಲ

ಟೀಮ್​ ಇಂಡಿಯಾಗೆ ರಾಹುಲ್ ದ್ರಾವಿಡ್ ಎಂಟ್ರಿ ಕೊಟ್ಟಿದ್ದೇ ತಡ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ವಿಶ್ವ ಕ್ರಿಕೆಟ್​ನಲ್ಲಿ ಹೊಸ ಕಾಂತ್ರಿಗೆ ನಾಂದಿಯಾಡ್ತಾರೆ ಎಂಬ ಎಕ್ಸ್​ಪೆಕ್ಟೇಷನ್​ ಇತ್ತು. ಆದ್ರೆ, ಇದೆಲ್ಲ ಹುಸಿಯಾಯ್ತು. ಆದ್ರೀಗ ಕೋಚಿಂಗ್ ಬಗೆಗಿನ ಟೀಕೆಗಳಿಗೆ ವಾಲ್ ಉತ್ತರ ಕೊಟ್ಟಿದ್ದಾರೆ.

ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಮೋಸ್ಟ್ ಸಕ್ಸಸ್​ಫುಲ್ ಬ್ಯಾಟ್ಸ್​ಮನ್. ಟೀಮ್ ಇಂಡಿಯಾದ ನಾಯಕನಾಗಿ, ಆಟಗಾರನಾಗಿ ತಂಡಕ್ಕೆ ಲೆಕ್ಕವಿಲ್ಲದಷ್ಟು ಗೆಲುವು ತಂದುಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಯುವ ಕ್ರಿಕೆಟಿಗರ ಪಾಲಿನ ಬೆನ್ನಲುಬಾಗಿ ನಿಂತಿದ್ದ ದ್ರಾವಿಡ್​, ಜಂಟಲ್​ಮನ್ ಗೇಮ್​ನ ರಿಯಲ್​ ಜಂಟಲಮನ್​​​​ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ.

ಆದ್ರೆ, ಇಂಥಹ ಜಂಟಲಮನ್​ ಹಿರಿಯರ ತಂಡದ ಕೋಚ್​ ಆಗಿದ್ದೇ ತಡ ಟೀಮ್ ಇಂಡಿಯಾ ಮೇಲಿನ ಎಕ್ಸ್​ಪೆಕ್ಟೇಷನ್ಸ್ ನೆಕ್ಸ್ಟ್​ ಲೆವೆಲ್​​ಗೆ ಕೊಂಡೊಯ್ತು. ಅದು ಯಾವ ಮಟ್ಟಕ್ಕೆಂದ್ರೆ, ​ರಾಹುಲ್ ದ್ರಾವಿಡ್ V/S ವರ್ಲ್ಡ್​ ಕ್ರಿಕೆಟ್​​ ಅಂತಾನೇ ಹೇಳಲಾಯ್ತು. ಆದ್ರೆ, 20 ತಿಂಗಳ ಕೋಚಿಂಗ್ ಅವಧಿಯಲ್ಲಿ ಆಗಿದ್ದೇ ಬೇರೆ.

ತಂಡದ ಸೋಲು.. ಪ್ಲೇಯಿಂಗ್​-XIನಲ್ಲೂ ಅದೇ ಎಡವಟ್ಟು..!

2021ರ ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮೇಜರ್ ಸರ್ಜರಿಯಾಗಿತ್ತು. ಕೋಚ್​ ರವಿ ಶಾಸ್ತ್ರಿ ನಿರ್ಗಮನದ ಬಳಿಕ ದ್ರೋಣಾಚಾರ್ಯರಾಗಿ ಎಂಟ್ರಿ ಕೊಟ್ಟ ರಾಹುಲ್​ ದ್ರಾವಿಡ್, ಹೊಸ ಭರವಸೆಯನ್ನೇ ಹುಟ್ಟಿಹಾಕಿದ್ರು. ಇದು ಕ್ರಿಕೆಟ್ ವಲಯದಲ್ಲಿ ಅಸಾಧ್ಯವಾಗಿದ್ದನೆಲ್ಲ ಸಾಧಿಸ್ತೇವೆ ಎಂಬ ನಿರೀಕ್ಷೆ ಹೆಚ್ಚಿಸಿತ್ತು. ಆದ್ರೆ, ಎಲ್ಲವೂ ಹುಸಿಯಾಗಿದೆ.

ಇದಕ್ಕೆಲ್ಲ ಕಾರಣ ಏಷ್ಯಾಕಪ್​ನಲ್ಲಿ ಸೂಪರ್-4 ಸ್ಟೇಜ್​ನಿಂದ ನಿರ್ಗಮನ. 2022ರ ಟಿ20 ವಿಶ್ವಕಪ್​​ನ ಸೆಮಿಫೈನಲ್​​ನಲ್ಲೇ ಮುಗ್ಗರಿಸಿದ್ದು. ವಿದೇಶಿ ಟೆಸ್ಟ್​ಗಳಲ್ಲಿ ಕಂಡ ಸಾಲು ಸಾಲು ಸೋಲು. ಇದಲ್ಲದೆ ತಿಂಗಳ ಹಿಂದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​​ನ ಹೀನಾಯ ಸೋಲು. ಈ ಎಲ್ಲ ಸೋಲುಗಳು ಅಭಿಮಾನಿಗಳನ್ನಷ್ಟೇ ಅಲ್ಲ. ಮಾಜಿ ಕ್ರಿಕೆಟರ್​​​​​​​ಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಇದಕ್ಕೆಲ್ಲ ಕಾರಣ ರಾಹುಲ್ ದ್ರಾವಿಡ್ ಕೋಚಿಂಗ್ ಸ್ಟೈಲ್ ಹಾಗೂ ತೆಗೆದುಕೊಂಡ ನಿರ್ಣಯಗಳು.

ಇದನ್ನು ಓದಿ: ಕೆರಿಬಿಯನ್​ ವಿರುದ್ಧ ಬೃಹತ್​ ರನ್​ ಕಲೆ ಹಾಕೋ ಲೆಕ್ಕಾಚಾರದಲ್ಲಿ ರೋಹಿತ್​ ಪಡೆ.. ಜೈಸ್ವಾಲ್​ ಡೆಬೂ ಸೂಪರ್

ಕೋಚ್​​ ರಾಹುಲ್ ದ್ರಾವಿಡ್​ ಭಾವನಾತ್ಮಕ ನುಡಿ..!

ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್​ ಸೋಲಿನ ಬೆನ್ನಲ್ಲೇ ಕೋಚ್ ದ್ರಾವಿಡ್ ನಡೆ ಬಗ್ಗೆ ಪ್ರಶ್ನಿಸಲಾಗಿತ್ತು. ಅದರಲ್ಲೂ ಪ್ಲೇಯಿಂಗ್​-XI ಆಯ್ಕೆ ಬಗ್ಗೆ ಟೀಕೆಗಳು ವ್ಯಕ್ತವಾಗಿತ್ತು. ದ್ರಾವಿಡ್ ಕೋಚಿಂಗ್ ಆಫ್ ಸ್ಟ್ರೈಲ್​ ಕೂಡ ಟೀಕಾಕಾರರಿಗೆ ಆಹಾರವಾಗಿತ್ತು. ಕೆಲವರಂತೂ ದ್ರಾವಿಡ್​​ರನ್ನ ನಾಲಾಯಕ್ ಅಂತಾನೇ ಕರೆದಿದ್ದು ಉಂಟು. ಆದ್ರೀಗ ಪ್ಲೇಯಿಂಗ್ ಇಲೆವೆನ್ ಹಾಗೂ ಕೋಚ್ ಹುದ್ದೆಯ ಬದ್ಧತೆಯ ಬಗ್ಗೆ ರಾಹುಲ್ ದ್ರಾವಿಡ್ ಉತ್ತರ ನೀಡಿದ್ದಾರೆ.

“ನಾವು ತರಬೇತುದಾರರಾಗಿ ಪ್ರತಿಯೊಬ್ಬ ಆಟಗಾರನ ಬಗ್ಗೆ ಕಾಳಜಿ ವಹಿಸಲು ಬಯಸುತ್ತೇವೆ. ವೈಯಕ್ತಿಕವಾಗಿ ತರಬೇತಿ ನೀಡಲು ಬಯಸುತ್ತೇವೆ. ಉತ್ತಮ ಸಂಬಂಧ ನಿರ್ಮಿಸಲು ಪ್ರಯತ್ನಿಸುತ್ತೇವೆ. ಅವರೆಲ್ಲರೂ ಸಕ್ಸಸ್​ ಕಾಣಬೇಕೆಂದು ಬಯಸ್ತೀರಿ. ಆದ್ರೆ, ಅವೆಲ್ಲ ಯಶಸ್ಸು ಕಾಣಲ್ಲ ಎಂದು ವಾಸ್ತವವಾಗಿ ಅರ್ಥಮಾಡಿಕೊಳ್ಳಬೇಕು. ನಿಮಗೆ ತಿಳಿದಿರುವ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗುತ್ತೆ. ನಾವು ಪ್ರತಿ ಬಾರಿ 11 ಮಂದಿ ಆಯ್ಕೆ ಮಾಡಿದಾಗ ಜನರನ್ನ ನಿರಾಸೆಗೊಳಿಸುತ್ತೇವೆ. ನಾವು ಆಯ್ಕೆ ಮಾಡಿದ 15 ಮಂದಿಯೂ ಪ್ರತಿ ಬಾರಿ ಆಡುವುದಿಲ್ಲ. ಅಂತಹ ಆಟಗಾರರ ಬಗ್ಗೆ ಸಹಾನುಭೂತಿ ವ್ಯಕ್ತವಾಗುತ್ತೆ. ನಾನು ಕೂಡ ಕನಿಷ್ಠ ಪ್ರಯತ್ನಿಸುತ್ತೇನೆ. ಆದ್ರೆ, ಈ ವಿಷಯದಲ್ಲಿ ನಾನು ಪರಿಪೂರ್ಣ ಎಂದು ಹೇಳುತ್ತಿಲ್ಲ. ಪ್ರತಿ ಬಾರಿ ನಾವು ಸರಿಯಾದ ತಂಡ ಆಯ್ಕೆ ಮಾಡ್ತೇವೆಂದು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ, ಇದು ಕೋಚಿಂಗ್‌ನ ಕಷ್ಟಕರವಾದ ಭಾಗವಾಗಿದೆ.

ರಾಹುಲ್ ದ್ರಾವಿಡ್, ಭಾರತದ ಹೆಡ್ ಕೋಚ್​

ಪಕ್ಷಾತೀತ ಮಾರ್ಗದರ್ಶನವೇ ಮಾರ್ಗದರ್ಶಿಯ ತತ್ವ..!

ಇದು ಬೇಱರು ಹೇಳಿದ ಮಾತಲ್ಲ. ಸ್ವತಃ ರಾಹುಲ್ ದ್ರಾವಿಡ್​​ರ ಮೂಲ ಮಂತ್ರ. ಇದೇ ವೇಳೆ ಮಾತು ಮುಂದುರಿಸಿದ ಹೆಡ್ ಕೋಚ್ ದ್ರಾವಿಡ್, ಕೋಚ್ ಆಗಿ ಕಾರ್ಯ ವೈಖರಿ ಹೇಗಿರಬೇಕು ಅನ್ನೋದನ್ನ ಬಹಿರಂಗ ಪಡಿಸಿದರು. ಪಕ್ಷಪಾತವಿಲ್ಲದ ಕಾರ್ಯ ನಿರ್ವಹಿಸುವುದೇ ಮಾರ್ಗದರ್ಶಕನ ಕೆಲಸ ಅನ್ನೋದನ್ನ ಉಲ್ಲೇಖಿಸಿದ ದ್ರಾವಿಡ್​, ಆಟಗಾರರ ಜೊತೆಗಿನ ವ್ಯವಹಾರ ಉತ್ತಮವಾಗಿರಬೇಕು ಎಂಬುವುದರ ಜೊತೆ ಜೊತೆಗೆ ಆಟಗಾರರ ವಿಚಾರದಲ್ಲಿ ಪೊಲಿಟಿಕಲ್ ಅಜೆಂಡಾ ಇಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ.

ಆಟಗಾರರೊಂದಿಗಿನ ನಿಮ್ಮ ವ್ಯವಹಾರ ಪ್ರಾಮಾಣಿಕತೆಯಿಂದ ಇರಬೇಕು ಎಂದು ಭಾವಿಸುತ್ತೇನೆ. ನೀವು ಅದನ್ನ ಪ್ರಯತ್ನಿಸುತ್ತಿದ್ದರೆ ಖಂಡಿತ ಮಾಡುತ್ತೀರಿ. ಯಾವುದೇ ಪೊಲಿಟಿಕಲ್ ಅಜೆಂಡಾ ಮತ್ತು ಪಕ್ಷಪಾತ ಇರಬಾರದು. ಅದು ನನ್ನ ಪ್ರಕಾರ ಕೋಚ್​ನ ತತ್ವವಾಗಿರಬೇಕು

ರಾಹುಲ್ ದ್ರಾವಿಡ್, ಭಾರತದ ಹೆಡ್​ ಕೋಚ್

ಪ್ರತಿ ಆಟಗಾರನ ಬಗ್ಗೆ ಕಾಳಜಿಯನ್ನೇ ಹೊಂದಿರೋ ದ್ರಾವಿಡ್, ಸ್ಟ್ರಿಕ್ಟ್​ ಕೋಚ್ ಆಗಿ ಪರಿಸ್ಥಿತಿ ಹಾಗೂ ಭವಿಷ್ಯದ ದೃಷ್ಟಿಯಿಂದ ಟಫ್ ಕಾಲ್​ ಅನ್ನೇ ತೆಗೆದುಕೊಂಡಿದ್ದಾರೆ ಅನ್ನೋದು 100ಕ್ಕೆ ನೂರರಷ್ಟು ಸತ್ಯ. ಅದೇನೇ ಆಗಲಿ, ಹಿಂದಿನ ಸೋಲೆಲ್ಲ ಮರೆತು, ಮುಂದಿನ ವಿಶ್ವಕಪ್​​​​​​ನ ಗೆಲ್ಲಿಸುವತ್ತ ದ್ರಾವಿಡ್ ಚಿತ್ತ ನೆಡಲಿ ಅನ್ನೋದೇ ಪ್ರತಿ ಕ್ರಿಕೆಟ್ ಪ್ರೇಮಿಯ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾ ಸಾಲು ಸಾಲು ಸೋಲಿಗೆ ದ್ರಾವಿಡ್​​​ ಅವರೇ ಕಾರಣನಾ..? ಮೌನ ಮುರಿದ ಸಹನಾಮೂರ್ತಿ ದ್ರಾವಿಡ್

https://newsfirstlive.com/wp-content/uploads/2023/07/RAHUL_DRAVID_ROHIT_SHARMA.jpg

Load More