ದ್ರಾವಿಡ್ಗೆ ಎಷ್ಟು ಕೋಟಿ ಸಂಭಾವನೆ ಗೊತ್ತಾ?
ಸ್ವದೇಶದಲ್ಲಿ ಹುಲಿ.. ವಿದೇಶದಲ್ಲಿ ಇಲಿ..!
ದ್ರಾವಿಡ್ ವೈಫಲ್ಯಕ್ಕೆ ಕಾರಣಗಳೇನು ಗೊತ್ತಾ?
ಹೇಳಿಕೊಳ್ಳೋಕೆ ಇವರು ಕೋಟಿ ಕುಬೇರ ಕೋಚ್. ಆದರೆ ಕಾಸ್ಟ್ಲಿ ಕೋಚ್ ಅಚೀವ್ಮೆಂಟ್ ಮಾತ್ರ ಖರಾಬಾಗಿದೆ. ಅತ್ಯಧಿಕ ಸಂಭಾವನೆ ಪಡೆಯುವ ಕೋಚ್ ದ್ರಾವಿಡ್ ಅಭಿಮಾನಿಗಳ ಪಾಲಿಗೆ ಝೀರೋ. ಆಟಗಾರರನಾಗಿ, ನಾಯಕನಾಗಿ ವಿಜೃಂಭಿಸಿದ ದ್ರಾವಿಡ್ ಕೋಚ್ ಆಗಿ ವಿಫಲರಾಗಿದ್ದಾರೆ.
ರಾಹುಲ್ ದ್ರಾವಿಡ್ ಆಟಗಾರನಾಗಿ ಸೂಪರ್ ಸ್ಟಾರ್. ಅದ್ರಲ್ಲಿ ಎರಡೂ ಮಾತಿಲ್ಲ. ಟೆಸ್ಟ್ ಕ್ರಿಕೆಟ್ಗೆ ಹೆಡ್ಮಾಸ್ಟರ್ ಅಂದ್ರು ತಪ್ಪಲ್ಲ. ಇವರ ಸಾಧನೆಯೂ ಅದ್ವಿತೀಯ. ಆದರೆ ಕೋಚ್ ಆಗಿ ದ್ರಾವಿಡ್ ಫುಲ್ ಉಲ್ಟಾ. 2021 ರಲ್ಲಿ ಕೋಚ್ ಪಟ್ಟಕ್ಕೇರಿದ ದ್ರಾವಿಡ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ವು. ಆದ್ರೆ ಆ ಭರವಸೆಯನ್ನ ದಿ ವಾಲ್ ಉಳಿಸಿಕೊಂಡಿಲ್ಲ. ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಸೋಲು ರಾಹುಲ್ ದ್ರಾವಿಡ್ ರನ್ನ ಮತ್ತಷ್ಟು ಟೀಕೆಗೆ ಗುರಿಯಾಗಿಸಿದೆ.
ಕ್ಲಾಸ್ಟ್ಲಿ ಕೋಚ್ ಆದ್ರು ಫ್ಲಾಫ್ ಕೋಚ್..!
18 ತಿಂಗಳ ಹಿಂದೆ ಟೀಮ್ ಇಂಡಿಯಾ ಕೋಚ್ ಆದ ರಾಹುಲ್ ದ್ರಾವಿಡ್ರ ವಾರ್ಷಿಕ ಸಂಭಾವನೆ ಬರೋಬ್ಬರಿ 10 ಕೋಟಿ. ಈ ಹಿಂದೆ ಯಾವೊಬ್ಬ ಕೋಚ್ ಕೂಡ ಇಷ್ಟೊಂದು ಸಂಭಾವನೆ ಪಡೆದಿಲ್ಲ. ಇನ್ನು ಆಟಗಾರರಿಗೂ ಕೂಡ ಇಷ್ಟೊಂದು ಸ್ಯಾಲರಿ ಇಲ್ಲ ಬಿಡಿ. ಇಂತಹ ಕ್ಲಾಸ್ಟ್ಲಿಯೆಸ್ಟ್ ಕೋಚ್ ತಂಡಕ್ಕಿದ್ರೂ ನಯಾಪೈಸೆ ಲಾಭವಾಗಿಲ್ಲ. ಯಾಕಂದ್ರೆ ದ್ರಾವಿಡ್ ಅವಧಿಯಲ್ಲಿ ಭಾರತ ತಂಡ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಆಡಿದ ಎರಡು ಐಸಿಸಿ ಟ್ರೋಫಿಗಳಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ.
ಸ್ವದೇಶದಲ್ಲಿ ಹುಲಿ.. ವಿದೇಶದಲ್ಲಿ ಇಲಿ..!
ದ್ರಾವಿಡ್ ಕೋಚ್ ಆಗಿ ಹೇಳಿಕೊಳ್ಳುವ ಸಾಧನೆ ಏನು ಮಾಡಿಲ್ಲ. ಇವರು ಸ್ವದೇಶದಲ್ಲಿ ಮಾತ್ರ ಹುಲಿ. ತವರಿನಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ. ಬ್ಯಾಕ್ ಟು ಬ್ಯಾಕ್ ಸಿರೀಸ್ ಗೆದ್ದದ್ದು ಬಿಟ್ಟರೆ, ವಿದೇಶದಲ್ಲಿ ಸಾಧನೆ ಏನೇನಿಲ್ಲ. ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಅನ್ನಿಸಿಕೊಂಡಿದ್ದಾರೆ.
ವಿದೇಶಿ ನೆಲದಲ್ಲಿ ಭಾರತದ ಸಾಧನೆ
ಕ್ಲಾಸ್ಟ್ಲಿ ಕೋಚ್ ರಾಹುಲ್ ದ್ರಾವಿಡ್ ಅವರ ಫಾರಿನ್ ರಿಪೋರ್ಟ್ ಕಾರ್ಡ್ನಾ? ತವರಿನಲ್ಲಿ ಸಾಲು-ಸಾಲು ಸರಣಿ ಗೆದ್ದರೆ, ಫಾರಿನ್ನಲ್ಲಿ ಒಂದೇ ಒಂದು ಸರಣಿ ಅಥವಾ ಟೂರ್ನಾಮೆಂಟ್ ಗೆಲ್ಲಿಸಿಕೊಡುವಲ್ಲಿ ರಾಹುಲ್ ದ್ರಾವಿಡ್ ರಿಂದ ಸಾಧ್ಯವಾಗಿಲ್ಲ.
ದ್ರಾವಿಡ್ ವೈಫಲ್ಯಕ್ಕೆ ಕಾರಣಗಳು
ಒಟ್ಟಿನಲ್ಲಿ ಕಾಸ್ಟ್ಲಿ ಕೋಚ್ ದ್ರಾವಿಡ್ಗೆ ಫ್ಲಾಫ್ ಕೋಚ್ ಅನ್ನೋ ಹಣೆಪಟ್ಟಿ ಸುತ್ತಿಕೊಂಡಿದೆ. ಆದಷ್ಟು ಬೇಗ ದಿ ವಾಲ್ ಇದರಿಂದ ಹೊರಬರಲಿ. ಯಶಸ್ವಿ ಕೋಚ್ಗಳ ಲಿಸ್ಟ್ಗೆ ಕನ್ನಡದ ಕಣ್ಮಣಿ ಸೇರಿಕೊಳ್ಳುವಂತಾಗಲಿ ಎಂಬುದು ನಮ್ಮ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್