newsfirstkannada.com

ಟೀಮ್​ ಇಂಡಿಯಾಗೆ ಸೆಲೆಕ್ಟ್​ ಮಾಡಿದ್ದೇ ತಪ್ಪಾಯ್ತ? ಸಿಕ್ಕ ಅವಕಾಶ ದುರ್ಬಳಕೆ ಮಾಡಿಕೊಂಡಿದ್ದೇಕೆ ದ್ರಾವಿಡ್​​ ಪುತ್ರ?

Share :

Published September 3, 2024 at 7:42pm

    ಟೀಮ್​ ಇಂಡಿಯಾ ಮಾಜಿ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​​

    ದ್ರಾವಿಡ್​ ಪುತ್ರ ಸಮಿತ್ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದ್ದಾರೆ..!

    ಆಸ್ಟ್ರೇಲಿಯಾ​​ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿ ಸಮಿತ್​​ಗೆ ಸ್ಥಾನ

ಇತ್ತೀಚೆಗೆ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಭಾರೀ ಸದ್ದು ಮಾಡಿದವರು ಟೀಮ್​ ಇಂಡಿಯಾ ಮಾಜಿ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ ಮಗ ಸಮಿತ್​​. ಸಮಿತ್​ ದ್ರಾವಿಡ್ ಟೂರ್ನಿಯ ಆರಂಭದಿಂದಲೇ ಸುದ್ದಿಯಲ್ಲಿದ್ದರು. ಇದರ ಮಧ್ಯೆ ಭಾರತ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದರು. ಈಗ ಬೇರೆಯದ್ದೇ ಕಾರಣಕ್ಕೆ ಸಮಿತ್​​ ಸುದ್ದಿಯಾಗುತ್ತಿದ್ದಾರೆ.

ಸಮಿತ್​ ದ್ರಾವಿಡ್​ ಕಳಪೆ ಪ್ರದರ್ಶನ!

ಯೆಸ್​​, ಈ ಸಲ ಮಹಾರಾಜ ಟೂರ್ನಿಯಲ್ಲಿ ಸಮಿತ್​​ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಮೈಸೂರು ವಾರಿಯರ್ಸ್​​ ತಂಡದ ಪರ 7 ಪಂದ್ಯಗಳನ್ನು ಆಡಿರೋ ಇವರು ಕೇವಲ 82 ರನ್​ ಕಲೆ ಹಾಕಿದ್ದಾರೆ. 82 ರನ್​​ ಕಲೆ ಹಾಕಲು ಸಮಿತ್​​​ ತೆಗೆದುಕೊಂಡಿದ್ದು 72 ಬಾಲ್​​ ಎಂಬುದು ಅಚ್ಚರಿ.

33 ರನ್​ ಹೈಎಸ್ಟ್​ ಸ್ಕೋರ್​​!

ಮೈಸೂರು ವಾರಿಯರ್ಸ್ ಪರ 4ನೇ ಕ್ರಮಾಂಕದಲ್ಲಿ ಸಮಿತ್ ದ್ರಾವಿಡ್ ಕಣಕ್ಕಿಳಿಯುತ್ತಿದ್ದರು. ಇನ್ನು ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ 33 ರನ್ ಬಾರಿಸಿದ್ದು ಸಮಿತ್ ಹೈಎಸ್ಟ್​​ ಸ್ಕೋರ್​​. ನಂತರ ನಡೆದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ 5, ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 12, ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2, ಮಂಗಳೂರು ಡ್ರಾಗನ್ಸ್ ವಿರುದ್ಧ 16, ಶಿವಮೊಗ್ಗ ಲಯನ್ಸ್ ವಿರುದ್ಧ 7 ರನ್​ ಕಲೆ ಹಾಕಿದ್ರು. ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮತ್ತೊಂದು ಪಂದ್ಯದಲ್ಲೂ 7 ರನ್​ ​ಮಾತ್ರ ಗಳಿಸಿದ್ದರು. ಕೇವಲ 84 ರನ್​ ಗಳಿಸಿದ್ದ ಸಮಿತ್​ ಬ್ಯಾಟಿಂಗ್​ ಆವರೇಜ್​​ 11.71 ಮಾತ್ರ ಇದೆ.

ಸಮಿತ್​ ಭಾರತ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯಲಿರೋ ಸ್ಟ್ರೇಲಿಯಾ ಅಂಡರ್ 19 ವಿರುದ್ಧದ ಪಂದ್ಯಗಳಲ್ಲಿ ಭಾರತ ತಂಡದ ಪರ ಸಮಿತ್​​ ಉತ್ತಮ ಪ್ರದರ್ಶನ ನೀಡಬೇಕಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾಗೆ ಆಯ್ಕೆಯಾದ ಬೆನ್ನಲ್ಲೇ ಬಿಸಿಸಿಐಗೆ ಬಿಗ್​​ ಶಾಕ್​ ಕೊಟ್ಟ ದ್ರಾವಿಡ್​ ಪುತ್ರ; ಏನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾಗೆ ಸೆಲೆಕ್ಟ್​ ಮಾಡಿದ್ದೇ ತಪ್ಪಾಯ್ತ? ಸಿಕ್ಕ ಅವಕಾಶ ದುರ್ಬಳಕೆ ಮಾಡಿಕೊಂಡಿದ್ದೇಕೆ ದ್ರಾವಿಡ್​​ ಪುತ್ರ?

https://newsfirstlive.com/wp-content/uploads/2024/08/rahul-Dravid-1.jpg

Load More