ವಿಕೆಟ್ ಕೀಪರ್ ಜವಾಬ್ದಾರಿ ವಹಿಸಿಕೊಂಡಿದ್ದೇ ರೋಚಕ
ರಾಹುಲ್ ದ್ರಾವಿಡ್ರನ್ನ ವಿಕೆಟ್ ಕೀಪರ್ ಮಾಡಿದ್ಯಾರು..?
ದ್ರಾವಿಡ್ ವಿಧಿ ಇಲ್ಲದೆ ವಿಕೆಟ್ ಕೀಪರ್ ಆಗಬೇಕಾಯ್ತು
ಟೀಮ್ ಇಂಡಿಯಾದ ಬ್ಯಾಟ್ಸ್ಮನ್ ಆಗಿದ್ದ ರಾಹುಲ್ ದ್ರಾವಿಡ್, ವಿಕೆಟ್ ಕೀಪರ್ ಜವಾಬ್ದಾರಿ ವಹಿಸಿಕೊಂಡಿದ್ದೇ ರೋಚಕ. ದ್ರಾವಿಡ್ರನ್ನ ವಿಕೆಟ್ ಕೀಪರ್ ಮಾಡಿದ್ಯಾರು..? ಆ ಇಂಟ್ರೆಸ್ಟಿಂಗ್ ವಿಚಾರದ ಬಗ್ಗೆ ಮಾಹಿತಿ ಇಲ್ಲಿದೆ.
ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದ ವಾಲ್. ನಾಯಕ, ಉಪ ನಾಯಕನಾಗಿ ಸೇವೆ ಸಲ್ಲಿಸಿದ್ದ ದ್ರಾವಿಡ್, ವಿಕೆಟ್ ಮುಂದೆಯೇ ಅಲ್ಲ. ವಿಕೆಟ್ ಹಿಂದೆಯೂ ಚಾಕಚಕ್ಯತೆ ಮೆರೆದಿದ್ರು. ಆದ್ರೆ, ಕೇವಲ ಬ್ಯಾಟಿಂಗ್ಗೆ ಸಿಮೀತವಾಗಿದ್ದ ದ್ರಾವಿಡ್ಗೆ ವಿಕೆಟ್ ಕೀಪರ್ ಆಗೋ ಬಯಕೆಯೇ ಇರಲಿಲ್ಲ. ಆದ್ರೆ, ಇದು ಸಾಧ್ಯವಾಗಿಸಿದ್ದು ಬೆಂಗಾಲ್ ಟೈಗರ್ ಸೌರವ್ ಗಂಗೂಲಿ.
ಬೆಂಗಾಲ್ ಟೈಗರ್
ಹೌದು! ಸೌರವ್ ಗಂಗೂಲಿ ನಾಯಕತ್ವದ ವೇಳೆ ದ್ರಾವಿಡ್ಗೆ ವಿಕೆಟ್ ಕೀಪರ್ ಆಗುವಂತೆ ಒತ್ತಾಯಿಸಿದ್ರು. ಎರಡ್ಮೂರು ವರ್ಷಗಳ ಕಾಲ ರಾಹುಲ್ ದ್ರಾವಿಡ್ಗೆ ಹೇಳಿಕೊಳ್ಳುತ್ತಲೇ ಬರುತ್ತಿದ್ರು. ಇದಕ್ಕೆ ಒಪ್ಪದ ದ್ರಾವಿಡ್ ಸಾಕಷ್ಟು ಕಾರಣಗಳನ್ನೇ ನೀಡಿದ್ದರು. ನಾನು ವಿಕೆಟ್ ಕೀಪಿಂಗ್ ಹೆಚ್ಚು ಮಾಡಿಲ್ಲ. ಅನುಭವ ಇಲ್ಲ. ಕ್ಯಾಚ್ ಬಿಟ್ರೆ, ಮ್ಯಾಚ್ ಹೋಗುತ್ತೆ. ಟೀಕೆಗೆ ಗುರಿಯಾಗಬೇಕಾಗುತ್ತೆ ಎಂಬಿತ್ಯಾದಿ ಕಾರಣ ನೀಡ್ತಿದ್ರು. ಆದರೆ ಒಂದು ದಿನ ಗಂಗೂಲಿ ಏನ್ ಮಾಡಿದ್ರು ಅಂದ್ರೆ, ಒಂದು ಮ್ಯಾನಿಫ್ಯಾಕ್ಷರ್ ಕಾಲ್ ಮಾಡಿ ನನಗೆ ಮೂರು ಜೊತೆ ವಿಕೆಟ್ ಕೀಪಿಂಗ್ ಗ್ಲೌಸ್ ಹಾಗೂ ಮೂರು ವಿಕೆಟ್ ಕೀಪಿಂಗ್ ಪ್ಯಾಡ್ ಬೇಕೆಂದು ಕೇಳ್ತಾರೆ. ಈ ವೇಳೆ ಮ್ಯಾನಿಫ್ಯಾಕ್ಷರರ್ ಗಾಬರಿಯಿಂದ ಯಾಕೆಂದು ಕೇಳ್ತಾರೆ. ಆಗ ಗಂಗೂಲಿ, ನನಗೆ ಬೇಕಾಗಿರೋರೊಗೆ ಕೊಡಬೇಕು. ಸಾಧ್ಯವಾದಷ್ಟು ಬೇಗ ಕಳುಹಿಸಿಕೊಡುವಂತೆ ರಿಕ್ವೆಸ್ಟ್ ಮಾಡ್ತಾರೆ. ನಂತರ ಗ್ಲೌಸ್, ಪ್ಯಾಡ್ಸ್ ಬಂದಾದ್ಮೇಲೆ, ರಾಹುಲ್ ದ್ರಾವಿಡ್ಗೆ ಕೊಡ್ತಾರೆ. ಈ ಬಳಿಕ ದ್ರಾವಿಡ್ ವಿಧಿ ಇಲ್ಲದೆ ವಿಕೆಟ್ ಕೀಪರ್ ಆಗಬೇಕಾಯ್ತು. ದ್ರಾವಿಡ್ ವಿಕೆಟ್ ಕೀಪರ್ ಅದ್ಮೇಲೆ ಟೀಮ್ ಇಂಡಿಯಾಗೆ ಲಾಭವೇ ಆಯ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ