newsfirstkannada.com

Watch: ವಯನಾಡಿನಲ್ಲಿ ಮಿಂಚಿದ ರಾಹುಲ್ ಗಾಂಧಿ.. ಖುಷಿಯಲ್ಲಿ ಆದಿವಾಸಿ ಸಮುದಾಯದ ಜೊತೆ ಸಖತ್ ಡ್ಯಾನ್ಸ್‌

Share :

12-08-2023

  ಆದಿವಾಸಿ ಸಮುದಾಯದ ವೇಷದಲ್ಲಿ ರಾಹುಲ್ ಗಾಂಧಿ ಡ್ಯಾನ್ಸ್

  ಅನರ್ಹತೆ ವಾಪಸ್ ಪಡೆದ ಬಳಿಕ ವಯನಾಡಿಗೆ ಮೊದಲ ಭೇಟಿ

  ಲೋಕಸಭೆಯಲ್ಲಿ ಫ್ಲೈ ಕಿಸ್ಸಿಂಗ್ ವಿವಾದದಲ್ಲಿ ಸಿಲುಕಿದ್ದ ರಾಗಾ

ವಯನಾಡು: ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜೋಶ್ ಹೆಚ್ಚಾಗಿದೆ. ಇವತ್ತು ತಮ್ಮ ಸಂಸದ ಕ್ಷೇತ್ರ ವಯನಾಡಿಗೆ ಭೇಟಿ ಕೊಟ್ಟ ರಾಹುಲ್ ಗಾಂಧಿ ತಮ್ಮ ರಾಜಕೀಯ ಉತ್ಸಾಹವನ್ನು ಪ್ರದರ್ಶಿಸಿದ್ದಾರೆ. ಮರಳಿ ಸಂಸದ ಸ್ಥಾನ ಸಿಕ್ಕ ಖುಷಿಯಲ್ಲಿ ಮತದಾರರಿಗೆ ಧನ್ಯವಾದ ಹೇಳುವುದರ ಜೊತೆಗೆ ನಾಲ್ಕು ಹೆಜ್ಜೆ ನೃತ್ಯ ಕೂಡ ಮಾಡಿದ್ದಾರೆ. ಆದಿವಾಸಿ ಸಮುದಾಯದ ವೇಷದಲ್ಲಿ ರಾಹುಲ್ ಗಾಂಧಿ ಅವರು ಮಾಡಿರೋ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಸಂಸದ ಸ್ಥಾನದ ಅನರ್ಹತೆ ವಾಪಸ್ ಪಡೆದ ಬಳಿಕ ವಯನಾಡಿಗೆ ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಊಟಿ ಸಮೀಪದ ಮುತ್ತುನಾಡು ಗ್ರಾಮಕ್ಕೆ ಆಗಮಿಸಿ ರಾಹುಲ್ ಗಾಂಧಿ ಅವರನ್ನು ತೋಡಾ ಸಮುದಾಯದ ಜನ ಆತ್ಮೀಯವಾಗಿ ಬರಮಾಡಿಕೊಂಡರು. ತಮ್ಮ ಬುಡಕಟ್ಟು ಸಮುದಾಯದ ವೇಷ ಹಾಕಿ ಗೌರವಿಸಿದ ಸ್ಥಳೀಯರು ಹಾಗೇ ತಮ್ಮ ಸಾಂಪ್ರದಾಯಿಕ ನೃತ್ಯ ಮಾಡುವಂತೆ ಹೇಳಿದರು. ಆದಿವಾಸಿ ಸಮುದಾಯದ ಒತ್ತಾಯಕ್ಕೆ ಕೈ ಜೋಡಿಸಿದ ರಾಹುಲ್ ಗಾಂಧಿ ಅವರು ಡ್ಯಾನ್ಸ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೋದಿ ಉಪನಾಮ ಕುರಿತ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ನಂತರ ಲೋಕಸಭೆಯಲ್ಲಿ ಅವರ ಸಂಸತ್ ಸ್ಥಾನ ವಾಪಸ್ ಆಗಿದೆ. ಲೋಕಸಭಾ ಅಧಿವೇಶನದಲ್ಲಿ ಭಾಗಿಯಾದ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಅಬ್ಬರಿಸಿದ್ದು, ಫ್ಲೈ ಕಿಸ್ಸಿಂಗ್ ವಿವಾದದಲ್ಲಿ ಸಿಲುಕಿದ್ರು. ಹೀಗೆ ಸಂಸತ್‌ನಲ್ಲಿ ಅಬ್ಬರಿಸಿದ ಬಳಿಕ ರಾಹುಲ್ ಗಾಂಧಿ ಅವರು ವಯನಾಡ್‌ಗೆ ಭೇಟಿ ಕೊಟ್ಟಿದ್ದಾರೆ. ತಮ್ಮ ಮತದಾರರ ಜೊತೆ ಸಂವಾದ ನಡೆಸುತ್ತಾ ಮುಂದಿನ ಲೋಕಸಭಾ ಚುನಾವಣೆಯ ತಯಾರಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Watch: ವಯನಾಡಿನಲ್ಲಿ ಮಿಂಚಿದ ರಾಹುಲ್ ಗಾಂಧಿ.. ಖುಷಿಯಲ್ಲಿ ಆದಿವಾಸಿ ಸಮುದಾಯದ ಜೊತೆ ಸಖತ್ ಡ್ಯಾನ್ಸ್‌

https://newsfirstlive.com/wp-content/uploads/2023/08/Rahul-Gandhi-Dance-1.jpg

Load More