newsfirstkannada.com

ಅಮೆರಿಕದ ಟ್ರಕ್​ನಲ್ಲಿ ರಾಹುಲ್ ಗಾಂಧಿ ರೈಡ್; ಡ್ರೈವರ್​ ಜೊತೆ ಕಾಂಗ್ರೆಸ್ ಲೀಡರ್ ಏನೇನ್‌ ಮಾಡಿದ್ರು ಗೊತ್ತಾ?

Share :

13-06-2023

    ಅಮೆರಿಕದ ಟ್ರಕ್‌ನಲ್ಲಿ ರಾಹುಲ್ ಗಾಂಧಿ 190 ಕಿಲೋ ಮೀಟರ್ ಪ್ರಯಾಣ ಮಾಡಿದ್ದೇಕೆ?

    ಟ್ರಕ್‌ ಡ್ರೈವರ್​ಗೆ ಒಂದು ದಿನಕ್ಕೆ ಎಷ್ಟು ಹಣ ಸಿಗುತ್ತದೆ ಎಂದು ಕೇಳಿದ ರಾಹುಲ್ ಗಾಂಧಿ

    ಅಮೆರಿಕಾದ ಟ್ರಕ್​ನಲ್ಲಿ ರಾಹುಲ್​ ಗಾಂಧಿ ಕೇಳಿದ 295 ಸಾಂಗ್ ಸ್ಪೆಷಾಲಿಟಿ ಏನು ಗೊತ್ತಾ?

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಜನರ ಜೊತೆ ಬೆರೆಯುವುದು ಸರ್ವೇ ಸಾಮಾನ್ಯ. ಇತ್ತೀಚೆಗೆ ರಾಹುಲ್​ ಗಾಂಧಿಯವರು ಪಂಜಾಬ್‌ನಲ್ಲಿ ಲಾರಿ ಮೇಲೆ ಹತ್ತಿ ಒಂದು ರೌಂಡ್ ಹಾಕಿದ್ರು. ಈ ಮೊದಲು ಭಾರತದಲ್ಲಿ ಲಾರಿಯನ್ನು ಏರಿ ಸವಾರಿ ಮಾಡಿದ್ದ ಕಾಂಗ್ರೆಸ್​ ನಾಯಕ ಈ ಬಾರಿ ಅಮೆರಿಕದಲ್ಲಿ ಟ್ರಕ್​ವೊಂದನ್ನು ಏರಿ ಭರ್ಜರಿ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಭಾರತ ಮತ್ತು ಅಮೆರಿಕದ ರಸ್ತೆ, ಡ್ರೈವರ್​, ಲಾರಿಗಳು, ಸಿಗ್ನಲ್​ಗಳಿಗೆ ಏನು ವ್ಯತ್ಯಾಸ ಇವೆ ಅನ್ನೋ ಮಾಹಿತಿ ಕೂಡ ಪಡೆದುಕೊಂಡಿದ್ದಾರೆ.

ಅಮೆರಿಕದ ವಾಷಿಂಗ್ಟನ್​ ಡಿಸಿಯಿಂದ ನ್ಯೂಯಾರ್ಕ್​ ಸಿಟಿವರೆಗೆ ಬರೋಬ್ಬರಿ 190 ಕಿ.ಮೀವರೆಗೆ ಟ್ರಕ್​ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರು ಪ್ರಯಾಣ ಮಾಡಿದ್ದಾರೆ. ಈ ವೇಳೆ ಭಾರತದ ಮೂಲದ ಟ್ರಕ್​ ಚಾಲಕ ತಲ್ಜಿಂದರ್ ಸಿಂಗ್ ಜೊತೆ ಹಿಂದಿಯಲ್ಲಿ ಚರ್ಚೆ ನಡೆಸಿದ ರಾಹುಲ್​ ಗಾಂಧಿಯವರು ನಿಮಗೆ ಒಂದು ದಿನಕ್ಕೆ ಎಷ್ಟು ಹಣ ಸಿಗುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಚಾಲಕ ಭಾರತಕ್ಕಿಂತ ಇಲ್ಲಿ ನನಗೆ ಜಾಸ್ತಿ ಹಣ ಸಿಗುತ್ತದೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಟ್ರಕ್​ಗಳಿಗೆ ಗಂಟೆಗೆ 65 ಕಿ.ಮೀ ವೇಗ ಮಾತ್ರ

ಅಮೆರಿಕದಲ್ಲಿ ಟ್ರಕ್​ಗಳನ್ನು ಡ್ರೈವರ್​ಗೆ ತಕ್ಕಂತೆ ಹಾಗೂ ಚಾಲನೆ ಇಷ್ಟವಾಗುವಂತೆ ರೆಡಿ ಮಾಡುತ್ತಾರೆ. ಆದ್ರೆ ಈ ರೀತಿ ಭಾರತದಲ್ಲಿ ಟ್ರಕ್​ಗಳನ್ನು ತಯಾರು ಮಾಡುವುದಿಲ್ಲ. ಇಲ್ಲಿನ ರಸ್ತೆಗಳಲ್ಲಿ ಸಿಗ್ನಲ್​ಗಳಿಗೆ ತಕ್ಕಂತೆ ವಾಹನಗಳನ್ನು ಚಲಾಯಿಸಬೇಕು. ಟ್ರಕ್​ಗಳಿಗೆ ಗಂಟೆಗೆ 65 ಕಿ.ಮೀ ವೇಗ ಮಾತ್ರ ನಿರ್ಧರಿಸಿದ್ದಾರೆ. ಭಾರತ ಮತ್ತು ಯುಎಸ್‌ನಲ್ಲಿ ಚಾಲಕರಿಗೆ ಕೆಲಸದ ಪರಿಸ್ಥಿತಿಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಚಾಲನೆಯಲ್ಲೇ ರಾಹುಲ್​ ಗಾಂಧಿ ಮತ್ತು ಡ್ರೈವರ್​ ಚರ್ಚೆ ಮಾಡಿದ್ದಾರೆ.

ಅಲ್ಲದೇ ಇದೇ ವೇಳೆ ಚಾಲಕ ತಲ್ಜಿಂದರ್ ಸಿಂಗ್ ಯಾವುದಾದ್ರೂ ಹಾಡುಗಳನ್ನು ಪ್ಲೇ ಮಾಡಬಹುದೇ ಎಂದು ರಾಹುಲ್​ ಗಾಂಧಿಯವರನ್ನು ಕೇಳಿದ್ದಾರೆ. ಇದಕ್ಕೆ ರಾಹುಲ್​ ಸಿಧು ಮೂಸವಾಲಾ ಅವರ 295 ಲಾಗೋ ಸಾಂಗ್ ಪ್ಲೇ ಮಾಡುವಂತೆ ಹೇಳಿದ್ದಾರೆ. ರಾಹುಲ್​ ಜೊತೆ ಟ್ರಕ್​ನಲ್ಲಿ ಚಾಲಕನ ಜೊತೆ ಇನ್ನು ಮೂರುನಾಲ್ಕು ಜನ ಇದ್ದರು. ಇನ್ನು ಭಾರತದ ಡ್ರೈವರ್​​ಗಳಿಗೆ ಏನು ಹೇಳಲು ಇಷ್ಟ ಪಡುತ್ತೀರಿ ಎಂದು ರಾಹುಲ್​, ಚಾಲಕನನ್ನು ಕೇಳಿದ್ರು. ಇದಕ್ಕೆ ಚಾಲಕ ಹೆಚ್ಚು ಹೆಚ್ಚು ಹಾರ್ಡ್​ ವರ್ಕ್​​ ಮಾಡಿ. ಯಾವುದೇ ಕೆಲಸ ಈಜಿಯಾಗಿರಲ್ಲ ಎಂದರು. ಭಾರತದ ಮೂಲದ ನಿವಾಸಿಗಳ ಹೋಟೆಲ್​ಗೆ ರಾಹುಲ್​ ಭೇಟಿ ನೀಡಿ ಅವರ ಜೊತೆ ಕೆಲ ಸಮಯ ರಾಹುಲ್​ ಗಾಂಧಿ ಚರ್ಚೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕದ ಟ್ರಕ್​ನಲ್ಲಿ ರಾಹುಲ್ ಗಾಂಧಿ ರೈಡ್; ಡ್ರೈವರ್​ ಜೊತೆ ಕಾಂಗ್ರೆಸ್ ಲೀಡರ್ ಏನೇನ್‌ ಮಾಡಿದ್ರು ಗೊತ್ತಾ?

https://newsfirstlive.com/wp-content/uploads/2023/06/RAHUL_GANDHI.jpg

Load More