ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬೈಕ್ ಪ್ರೇಮಿ
ರಾಹುಲ್ ಬಳಿ ಇದೆ ಜನಪ್ರಿಯ ಕಂಪನಿಯ ಅಡ್ವೆಂಚರ್ ಬೈಕ್
ರಾಹುಲ್ ಬಳಿ ಬೈಕ್ ಇದ್ರೂ ಓಡಿಸಲಾಗುತ್ತಿಲ್ಲ, ಕಾರಣ ಏನು?
ಬೈಕ್, ಕಾರು ಇಷ್ಟಪಡದೇ ಇರುವವರು ಯಾರಿದ್ದಾರೆ ಹೇಳಿ. ಬಹುತೇಕರಿಗೆ ದ್ವಿಚಕ್ರ ಮತ್ತು ಕಾರುಗಳೆಂದರೆ ಇಷ್ಟ. ಅದರಲ್ಲೂ ಯುವಕರಂತೂ ದುಬಾರಿ ಬೆಲೆಯ ಬೈಕ್ಗಳನ್ನು ಇಷ್ಟಪಡುತ್ತಾರೆ. ಅದರಂತೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ಬೈಕ್ ಅಂದ್ರೆ ತುಂಬಾನೇ ಇಷ್ಟ. ಅವರ ಬಳಿಯೂ ಜನಪ್ರಿಯ ಕಂಪನಿಯ ಬೈಕ್ವೊಂದಿದೆ.
ಯಾವುದು ಬೈಕ್?
ಹೌದು. ರಾಹುಲ್ ಗಾಂಧಿ ಬೈಕ್ ಪ್ರೇಮಿ ಎಂಬುದು ನಿಜ. ಅವರ ಬಳಿ ಅಡ್ವೆಂಚರ್ ಬೈಕ್ ಇದೆ. ಕೆಟಿಎಂ 390 ಬೈಕ್ ಅನ್ನು ರಾಹುಲ್ ಗಾಂಧಿ ಹೊಂದಿದ್ದಾರೆ. ಆದರೆ ಅವರಿಗೆ ಭದ್ರತಾ ಸಿಬ್ಬಂದಿಗಳು ಅನುಮತಿಸದ ಕಾರಣ ಆ ಬೈಕ್ ಬಳಕೆಯಾಗದೆ ಹಾಗೆ ನಿಂತಿದೆ.
ಅಂದಹಾಗೆಯೇ ರಾಹುಲ್ ಗಾಂಧಿಯೇ ತಮ್ಮ ಜೊತೆಗಿರುವ ಬೈಕ್ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಶನಿವಾರದಂದು ಮೆಕ್ಯಾನಿಕ್ಗಳನ್ನು ಭೇಟಿ ಮಾಡಿ ಮಾತನಾಡಿರುವ ರಾಹುಲ್ ಈ ವೇಳೆ ತಮ್ಮ ಬಳಿ ಇರುವ ಬೈಕ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಯಾವಾಗ ಮದುವೆ?
ಈ ಸಂದರ್ಭದಲ್ಲಿ ಮೆಕ್ಯಾನಿಕ್ ಓರ್ವ ಯಾವಾಗ ಮದುವೆಯಾಗುತ್ತೀರಾ? ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಅವರು ನೋಡೋಣ ಎಂದು ಉತ್ತರಿಸಿದ್ದಾರೆ.