newsfirstkannada.com

×

ವೇದಿಕೆ ಮೇಲೆ ಮಲ್ಲಿಕಾರ್ಜುನ ಖರ್ಗೆಗೆ ನೀರು ಕುಡಿಸಿದ ರಾಹುಲ್ ಗಾಂಧಿ.. ವಿಡಿಯೋ

Share :

Published August 30, 2023 at 2:48pm

Update August 30, 2023 at 2:49pm

    ವಾಟರ್ ಬಾಟಲ್ ಕ್ಯಾಪ್ ತೆಗೆಯಲಾಗದೇ ಪರದಾಟ

    ಲೋಟಕ್ಕೆ ನೀರು ಹಾಕಿ ಖರ್ಗೆ ಕೈಗೆ ಕೊಟ್ಟ ರಾಹುಲ್

    ಸರಳತೆ ಅಂದರೆ ಇದು ಎಂದ ರಾಹುಲ್ ಬೆಂಬಲಿಗರು

ವೇದಿಕೆ ಮೇಲೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನೀರು ಕುಡಿಯಲು ರಾಹುಲ್ ಗಾಂಧಿ ಸಹಾಯ ಮಾಡಿದ ಪ್ರಸಂಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಿತು.

ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್​ ನಾಯಕರು ಮೈಸೂರಿಗೆ ದೌಡಾಯಿಸಿದ್ದರು. ಕಾರ್ಯಕ್ರಮದ ವೇದಿಕೆ ಮೇಲೆ ಕೂತಿದ್ದ ಮಲ್ಲಿಕಾರ್ಜುನ ಖರ್ಗೆಗೆ ನೀರಿನ ದಾಹ ಉಂಟಾಗಿದೆ. ಹೀಗಾಗಿ ಅಲ್ಲಿದ್ದ ಬಾಟಲ್ ಕೈಗೆತ್ತಿಕೊಂಡು ಮುಚ್ಚಳ ತೆಗೆಯಲು ಪ್ರಯತ್ನಿಸುತ್ತಾರೆ.

ಆದರೆ ಮುಚ್ಚಳ ತುಂಬಾ ಟೈಟ್ ಆಗಿದ್ದರಿಂದ ಓಪನ್ ಆಗುವುದಿಲ್ಲ. ಇದನ್ನು ಗಮನಿಸಿದ ರಾಹುಲ್ ಗಾಂಧಿ, ಖರ್ಗೆ ಕೈಯಲ್ಲಿದ್ದ ವಾಟರ್ ಬಾಟಲ್ ತೆಗೆದುಕೊಂಡು ಮುಚ್ಚಳ ಓಪನ್ ಮಾಡುತ್ತಾರೆ. ನಂತರ ತಮ್ಮ ಮುಂದಿದ್ದ ಗ್ಲಾಸ್​​ಗೆ ನೀರನ್ನು ಹಾಕಿ ಖರ್ಗೆಗೆ ನೀಡುತ್ತಾರೆ. ಖರ್ಗೆ ಅವರು ನೀರನ್ನು ಕುಡಿಯುತ್ತಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕಾಂಗ್ರೆಸ್​ ಕಾರ್ಯಕರ್ತರು, ಅಭಿಮಾನಿಗಳು ರಾಹುಲ್ ಗಾಂಧಿಯ ಸರಳತೆ ಬಗ್ಗೆ ಕೊಂಡಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇದಿಕೆ ಮೇಲೆ ಮಲ್ಲಿಕಾರ್ಜುನ ಖರ್ಗೆಗೆ ನೀರು ಕುಡಿಸಿದ ರಾಹುಲ್ ಗಾಂಧಿ.. ವಿಡಿಯೋ

https://newsfirstlive.com/wp-content/uploads/2023/08/RAHUL-1.jpg

Load More