newsfirstkannada.com

ತೆಲಂಗಾಣದಲ್ಲಿ ರಾಹುಲ್ ಹವಾ.. ಪ್ರಧಾನಿ ಮೋದಿ ರಿಮೋಟ್​ ಕಂಟ್ರೋಲ್​ನಲ್ಲಿ ಸಿಎಂ KCR; ರಾಹುಲ್ ಗಾಂಧಿ ಆರೋಪ

Share :

03-07-2023

    ತೆಲಂಗಾಣದಲ್ಲಿ ಬಿಜೆಪಿಯ 4 ಟೈರ್ ಪಂಕ್ಚರ್ ಆಗಿವೆ- ರಾಹುಲ್

    ಕರ್ನಾಟಕದ ಎಲೆಕ್ಷನ್​ ರಿಸಲ್ಟ್​ ತೆಲಂಗಾಣದಲ್ಲಿ ಮರುಕಳಿಸಲಿದೆ

    ರಾಹುಲ್​ ಗಾಂಧಿ ತೆಲಂಗಾಣದಲ್ಲಿ ಘೋಷಿಸಿದ ಗ್ಯಾರಂಟಿ ಯಾವುವು?

ಹೈದರಾಬಾದ್: ಪ್ರಧಾನಿ ಮೋದಿಯವರ ರಿಮೋಟ್​ ಕಂಟ್ರೋಲ್​ನಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ ರಾವ್ ಕೆಲಸ ಮಾಡುತ್ತಿದ್ದಾರೆ. ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷವು ಬಿಜೆಪಿಯ ಬಿ-ಟೀಮ್​ ಎಂದು ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು. ಬಳಿಕ ಸಮಾವೇಶದಲ್ಲಿ ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್​ನ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು.

ತೆಲಂಗಾಣದ ಕಮ್ಮಮ್​ ನಗರದಲ್ಲಿ ನಡೆದ ಕಾಂಗ್ರೆಸ್​ನ ಜನ ಘರ್ಜನದ ಬೃಹತ್​ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ತಮ್ಮ ಮಾತಿನುದ್ದಕ್ಕೂ ಸಿಎಂ ಕೆಸಿಆರ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ವಿಧಾನಸಭೆ ಎಲೆಕ್ಷನ್​ ಫಲಿತಾಂಶವು ತೆಲಂಗಾಣದಲ್ಲಿ ಮರುಕಳಿಸಲಿದೆ. ಇಲ್ಲಿ ಬಿಜೆಪಿಯ 4 ಟೈರ್ ಪಂಕ್ಚರ್ ಆಗಿವೆ. ನೆರೆಯ ರಾಜ್ಯದಲ್ಲಿ ಆಗಿರುವುದೇ ಇಲ್ಲಿ ಆಗಲಿದೆ. ಸಿಎಂ ಕೆಸಿಆರ್​ ಭ್ರಷ್ಟಾಚಾರ ಮಾಡುವಂತಹ ಯಾವ ಅವಕಾಶ ಬಿಟ್ಟಿಲ್ಲ. ಸಂಪೂರ್ಣವಾಗಿ ರಾಜ್ಯ ಲೂಟಿ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಜರಿದರು.

ಬಿಆರ್​ಎಸ್ ಪಕ್ಷ ಅಂದರೇ ಬಿಜೆಪಿಯ ‘ರಿಸ್ತೇದಾರ್ ಸಮಿತಿ’. ಮೋದಿಯವರ ರಿಮೋಟ್​ ಕಂಟ್ರೋಲ್​ನಲ್ಲಿ ಸಿಎಂ ಕೆಸಿಆರ್ ಇದ್ದಾರೆ. ಇವರು ಬಿಜೆಪಿಯ ಬಿ.ಟೀಮ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಬಿ- ಟೀಮ್​ ಜೊತೆ ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳಲು ಸಿದ್ಧವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸಿದಂತೆ ತೆಲಂಗಾಣದಲ್ಲೂ ಬಿಜೆಪಿಯ ಬಿ- ಟೀಮ್ ಸೋಲಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ. ಸಿಎಂ ಅವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ರಾಹುಲ್​ ಹೇಳಿದರು.

ಇನ್ನು ಇದೇ ವೇಳೆ ತೆಲಂಗಾಣದ ಕಾಂಗ್ರೆಸ್​ ನಾಯಕರು, ರಾಹುಲ್​ ಗಾಂಧಿ ಸೇರಿ ಹಿರಿಯ ನಾಗರಿಕರು, ವಿಧವಾ ಮಹಿಳೆಯರಿಗೆ ಪ್ರತಿ ತಿಂಗಳು 4 ಸಾವಿರ ರೂಪಾಯಿ, ಪೋಟು ಜಮೀನು ಅನ್ನು ಆದಿವಾಸಿಗಳಿಗೆ‌ ನೀಡುವ ಗ್ಯಾರಂಟಿಗಳನ್ನು ಘೋಷಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲಂಗಾಣದಲ್ಲಿ ರಾಹುಲ್ ಹವಾ.. ಪ್ರಧಾನಿ ಮೋದಿ ರಿಮೋಟ್​ ಕಂಟ್ರೋಲ್​ನಲ್ಲಿ ಸಿಎಂ KCR; ರಾಹುಲ್ ಗಾಂಧಿ ಆರೋಪ

https://newsfirstlive.com/wp-content/uploads/2023/07/RAHUL_GANDHI_TELANGANA_GIFT.jpg

Load More