ರಾಹುಲ್ ಗಾಂಧಿಗೆ ಮದುವೆ ಆಗಿ ಎಂದು ಲಾಲೂ ಪ್ರಸಾದ್ ಯಾದವ್ ಸಲಹೆ
ಲಾಲ್ ಪ್ರಸಾದ್ ಯಾದವ್ಗೆ ಮದುವೆ ಆಗ್ತೀನಿ ಎಂದು ಉತ್ತರ ಕೊಟ್ಟ ರಾಹುಲ್
ಕೊನೆಗೂ ತನ್ನ ಮದುವೆ ಬಗ್ಗೆ ಮೌನಮುರಿದ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ!
ಪಾಟ್ನಾ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಈಗ ತನ್ನ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ರಾಷ್ಟ್ರೀಯ ಜನತಾ ದಳ ನಾಯಕ, ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ರಾಹುಲ್ ಗಾಂಧಿಗೆ ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ, ನೀವು ಹೇಳಿದ ಮೇಲೆ ಮದುವೆ ಆಗುತ್ತದೆ ಎಂದು ಉತ್ತರ ಕೊಟ್ಟಿದ್ದಾರೆ. ಈ ದೃಶ್ಯವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇಂದು ಪಾಟ್ನಾದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗೆ ಸೋಲಿಸಬೇಕು? ಎಂಬ ಬಗ್ಗೆ ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲಾ ವಿರೋಧ ಪಕ್ಷಗಳು ಸಭೆ ನಡೆಸಿದರು. ಈ ಸಭೆಯಲ್ಲಿ ರಾಹುಲ್ ಗಾಂಧಿಯನ್ನು ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಹಾಡಿಹೊಗಳಿದ್ದಾರೆ.
ನೀವು ಲೋಕಸಭೆಯಲ್ಲಿ ಉತ್ತಮ ಕೆಲಸ ಮಾಡಿದ್ದೀರಿ. ಅದಾನಿ ವಿರುದ್ಧ ಹೋರಾಟ ನಡೆಸಿದ್ದೀರಿ. ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಬಜರಂಗ ಬಲಿ ನಮ್ಮ ಪರ ಇದ್ದಾಳೆ. ಇನ್ನೂ ವಯಸ್ಸಿದೆ, ನೀವು ಬೇಗ ಮದುವೆ ಆಗಿ ಎಂದು ರಾಹುಲ್ ಗಾಂಧಿಗೆ ಲಾಲೂ ಸಲಹೆ ನೀಡಿದ್ದಾರೆ.
ಇನ್ನೂ ತಡವಾಗಿಲ್ಲ, ಈಗಲೂ ಮದುವೆ ಆಗಬಹುದು. ನಮ್ಮ ಸಲಹೆಯನ್ನು ಸ್ವೀಕರಿಸಿ. ನಾವು ನಿಮ್ಮ ಮದುವೆಯಲ್ಲಿ ಭಾಗಿಯಾಗಬೇಕು. ನಿಮ್ಮ ತಾಯಿ ಮಾತು ನೀವು ಕೇಳುತ್ತಿಲ್ಲವಂತೆ. ಈ ಹಿಂದೆ ಕೂಡ ಮದುವೆ ಆಗಿ ಎಂದು ಸಲಹೆ ನೀಡಿದ್ದೆ. ಈಗಲಾದರೂ ಮದುವೆ ಆಗಿ ಎಂದರು. ಇದಕ್ಕೆ ನಾನು ಮದುವೆ ಆಗುತ್ತೀನಿ ಎಂದಿದ್ದಾರೆ ರಾಹುಲ್ ಗಾಂಧಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ