newsfirstkannada.com

KTM 390 ಬೈಕ್‌ಲ್ಲಿ ರಾಹುಲ್ ಗಾಂಧಿ ರೈಡ್‌.. ಲಡಾಖ್‌ನಿಂದ ಎಲ್ಲೆಲ್ಲಿ ಹೋಗ್ತಾರೆ? ಸ್ಪೆಷಲ್ ಟೂರ್‌ ಪ್ಲಾನ್ ಏನು?

Share :

19-08-2023

    ಲಡಾಖ್‌ನ ಪ್ಯಾಂಗಾಂಗ್ ಸರೋವರ ತಲುಪಿರುವ ರಾಹುಲ್ ಗಾಂಧಿ ತಂಡ

    ಕೆಲ ದಿನಗಳ ಹಿಂದಷ್ಟೇ ಗ್ಯಾರೇಜ್‌ಗೆ ಹೋಗಿ ಬೈಕ್​ ರಿಪೇರಿ ಮಾಡಿದ್ದರು

    ಭಾರತ್ ಜೋಡೋ ಯಾತ್ರೆ ಬಳಿಕ ಮತ್ತೊಂದು ಲಾಂಗ್‌ ರೈಡ್‌ ಇದು

ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮಾಡುವ ಮೂಲಕ ದೇಶದ್ಯಾಂತ ಸಂಚಾರ ಮಾಡಿದ್ರು. ಇದಾದ ಮೇಲೆ ನನ್ನ ಹತ್ರ KTM 390 ಬೈಕ್‌ ಇದೆ. ಆದ್ರೆ ನನ್ನ ಭದ್ರತಾ ಸಿಬ್ಬಂದಿ ಅದನ್ನ ಓಡಿಸಲು ಬಿಡೋದಿಲ್ಲ ಅಂತಾ ಹೇಳಿದ್ರು. ಇದೀಗ ರಾಹುಲ್ ಗಾಂಧಿ ಅವರು ತಮ್ಮ ಬಹುಕಾಲದ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಗ್ಯಾರೇಜ್​ವೊಂದಕ್ಕೆ ಭೇಟಿ ನೀಡಿ ಬೈಕ್​ ರಿಪೇರಿ ಕೂಡ ಮಾಡಿದ್ದರು. ಆದಾದ ಬಳಿಕ ಗದ್ದೆಯಲ್ಲಿ ರೈತ ಮಹಿಳೆಯರ ಜೊತೆ ಭತ್ತದ ಸಸಿಗಳನ್ನ ನಾಟಿ ಮಾಡಿ​ ಸುದ್ದಿ ಆಗಿದ್ದರು. ಇದಾದ ಬೆನ್ನಲ್ಲೆ ಸದ್ಯ ಕಾಶ್ಮೀರದ ಲಡಾಖ್​ನ ಲ್ಹೇನ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರು ಬೈಕ್​ ಜಾಲಿ ರೈಡ್​ ಹೋಗಿ ಪಾಂಗಾಂಗ್ ಸರೋವರದ ಸೌಂದರ್ಯ ಸವಿದಿದ್ದಾರೆ. ಅಲ್ಲದೇ ವಿಶ್ವದಲ್ಲಿಯೇ ಪಾಂಗಾಂಗ್​ ಸರೋವರ ಅತ್ಯಂತ ಸುಂದರವಾದದ್ದು ಅಂತಾ ನಮ್ಮ ತಂದೆ ಹೇಳುತ್ತಿದ್ದರು ಎಂದು ರಾಹುಲ್​ ಗಾಂಧಿಯವರು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ.

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಜನ್ಮ ದಿನ ಆಚರಿಸಲು ರಾಹುಲ್ ಗಾಂಧಿ ಲಡಾಖ್‌ನ ಪ್ಯಾಂಗಾಂಗ್ ಸರೋವರಕ್ಕೆ ಬೈಕ್‌ನಲ್ಲಿ ಜಾಲಿ ರೈಡಿಂಗ್ ಹೋದರು. ಈ ವೇಳೆ ರಾಹುಲ್ ಗಾಂಧಿಯವರು ಹೆಲ್ಮೆಟ್, ಜಾಕೆಟ್​ ಧರಿಸಿದ್ದರು.

ರಸ್ತೆ ಮೂಲಕ ರಾಹುಲ್ ಗಾಂಧಿ ಲಡಾಖ್‌ನ ಪ್ಯಾಂಗಾಂಗ್ ಸರೋವರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಇನ್ನುಳಿದ ಬೈಕ್​ ಅವಾರರು ಅವರ ಹಿಂದೆ ಬರುತ್ತಿದ್ದಾರೆ.

ಕಾಂಗ್ರೆಸ್​ ಪಕ್ಷದ ಮೂಲಗಳ ಪ್ರಕಾರ ರಾಹುಲ್ ಗಾಂಧಿಯವರ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಆಗಸ್ಟ್ 20 ರಂದು ಅಂದರೆ ನಾಳೆ ಪಾಂಗಾಂಗ್ ಸರೋವರದಲ್ಲಿ ಆಚರಿಸಲಿದ್ದಾರೆ ಎನ್ನಲಾಗ್ತಿದೆ.

ರಾಹುಲ್ ಗಾಂಧಿಯವರು ರಸ್ತೆಯಲ್ಲಿ ಬೈಕ್ ಚಾಲನೆ ಮಾಡಿಕೊಂಡು ತೆರಳುತ್ತಿದ್ದು ಸಹ ಬೈಕ್​ ರೈಡರ್ಸ್​ ಅವರನ್ನು ಫಾಲೋ ಮಾಡುತ್ತಿರುವುದು ಫೋಟೋದಲ್ಲಿ ಕಾಣಬಹುದು.

ನಿನ್ನೆ ಲಡಾಖ್‌ಗೆ ಭೇಟಿ ನೀಡಿದ್ದ ರಾಹುಲ್​ ಗಾಂಧಿಯವರು ಲ್ಹೇನಲ್ಲಿ ಸುಮಾರು 500ಕ್ಕೂ ಹೆಚ್ಚು ಯುವಕರೊಂದಿಗೆ ಸಂವಾದ ನಡೆಸಿದ್ದರು. ಇಂದು ಬೈಕ್​ ಮೂಲಕ ಪಾಂಗಾಂಗ್ ಸರೋವರಕ್ಕೆ ತೆರಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KTM 390 ಬೈಕ್‌ಲ್ಲಿ ರಾಹುಲ್ ಗಾಂಧಿ ರೈಡ್‌.. ಲಡಾಖ್‌ನಿಂದ ಎಲ್ಲೆಲ್ಲಿ ಹೋಗ್ತಾರೆ? ಸ್ಪೆಷಲ್ ಟೂರ್‌ ಪ್ಲಾನ್ ಏನು?

https://newsfirstlive.com/wp-content/uploads/2023/08/RAHUL_GANDHI_BIKE.jpg

Load More