newsfirstkannada.com

ಮುಂದಿನ ಎಲೆಕ್ಷನ್​​ನಲ್ಲಿ ಮೋದಿಯನ್ನು ಸೋಲಿಸಬಹುದೇ? ಈ ಪ್ರಶ್ನೆಗೆ ರಾಹುಲ್ ಕೊಟ್ಟ ಉತ್ತರ ಏನು ಗೊತ್ತಾ?

Share :

25-02-2023

    ವಿಪಕ್ಷಗಳು ಒಂದಾದರೆ ಮೋದಿ ಸೋಲಿಸಬಹುದು ಎಂದ ರಾಹುಲ್

    ಇಟಲಿಯ ಕೊರಿಯೆರೆ ಡೆಲ್ಲಾ ಸೆರಾಗೆ ರಾಹುಲ್ ಗಾಂಧಿ ಸಂದರ್ಶನ

    ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಜೈಶಂಕರ್

2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಮೇನ್​​ ಟಾರ್ಗೆಟ್​ ಪ್ರಧಾನಿ ನರೇಂದ್ರ ಮೋದಿ. ಸತತ 3ನೇ ಬಾರಿಗೆ ಕೇಂದ್ರದ ಚುಕ್ಕಾಣಿ ಹಿಡಿಯಲು ಹೊರಟಿರೋ ಕಮಲ ಪಡೆಗೆ ವಿಪಕ್ಷಗಳು ಪ್ರಬಲ ಎದುರಾಳಿಯಾಗಿ ನಿಂತಿವೆ. ಆದ್ರೆ ಕೇವಲ ಒಂದೆರಡು ಪಕ್ಷದಿಂದ ಮಾತ್ರ ನಮೋ ಮೇನಿಯಾ ಎದುರಿಸೋಕೆ ಸಾಧ್ಯವಿಲ್ಲ. ದೇಶದ ಹಳೇ ಪಕ್ಷ ಕಾಂಗ್ರೆಸ್​ ಈಗ, ವಿರೋಧ ಪಕ್ಷದಲ್ಲಿರೋ ಮಿತ್ರಪಕ್ಷಗಳ ಮೊರೆ ಹೋಗಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ‘ನಮೋ’ ಸೋಲಿಸಬಹುದೇ?
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಅಷ್ಟೊಂದು ಸುಲಭವಿಲ್ಲ. 2019ರ ಎಲೆಕ್ಷನ್​​ನಲ್ಲಾದ ಮೋದಿ ಮ್ಯಾಜಿಕ್​ 2024ರ ಚುನಾವಣೆಯಲ್ಲಿ ನಡೆಯುತ್ತಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ, ಕೇಂದ್ರದ ಸರ್ಕಾರ ಕೈಗೊಂಡ ಕೆಲವು ಯೋಜನೆಗಳು ದೇಶಾದ್ಯಂತ ಭಾರೀ ವಿರೋಧಕ್ಕೆ ಗುರಿಯಾಗಿದ್ವು. ಜೊತೆಗೆ ಪ್ರತಿಪಕ್ಷಗಳು ಸಹ ಹಿಂದೆಂದಿಗಿಂತಲೂ ಬಲಿಷ್ಠಗೊಂಡಿವೆ. ದೇಶದ ಹಳೇ ಪಕ್ಷ ಕಾಂಗ್ರೆಸ್ ಕೂಡ ತನ್ನ ಹಳೇ ಖದರ್ ತೋರಿಸೋಕೆ ಮುಂದಾಗಿದೆ. ರಾಹುಲ್ ಗಾಂಧಿ ಇಮೇಜ್​​ ಈಗ ಮತ್ತಷ್ಟು ಸ್ಟ್ರಾಂಗ್ ಆಗಿದ್ದು, ಕೇಸರಿ ಪಡೆಯನ್ನ ಹಣಿಯೋಕೆ ಸಕಲ ತಯಾರಿ ಮಾಡಿಕೊಳ್ತಿದೆ. ಇಷ್ಟೆಲ್ಲದ ಮಧ್ಯೆ, 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಸೋಲಿಸಬಹುದೇ? ಈ ಪ್ರಶ್ನೆಗೆ ರಾಹುಲ್ ಗಾಂಧಿ ಪ್ರತಿಪಕ್ಷಗಳತ್ತ ಬೊಟ್ಟು ಮಾಡಿದ್ದಾರೆ.

ಮೋದಿಯನ್ನ ಸೋಲಿಸಬಹುದು
ಇಟಲಿಯ ಕೊರಿಯೆರೆ ಡೆಲ್ಲಾ ಸೆರಾಗೆ ರಾಹುಲ್ ಗಾಂಧಿ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ ಭಾರತ್​ ಜೋಡೋ ಯಾತ್ರೆ ಬಗ್ಗೆ ರಾಹುಲ್​, ತಮ್ಮ ಅನುಭವ ಹಂಚಿಕೊಂಡಿದ್ರು. ಈ ವೇಳೆ 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನ ಹೇಗೆ ಸೋಲಿಸಬಹುದು ಅಂತ ರಾಹುಲ್ ಗಾಂಧಿ ಪ್ರಶ್ನೆ ಕೇಳಲಾಯ್ತು. ಈ ಪ್ರಶ್ನೆಗೆ ರಾಹುಲ್ ಗಾಂಧಿ ಪಾಸಿಟಿವ್ ಆಗಿ ಉತ್ತರ ನೀಡಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ನನಗೆ ವಿಶ್ವಾಸ ಇದೆ ಅಂದಿದ್ದಾರೆ. ಪ್ರತಿಪಕ್ಷಗಳು ಒಗ್ಗೂಡಿದರೆ ಬಿಜೆಪಿ 100 ಪರ್ಸೆಂಟ್​ ಸೋಲುತ್ತದೆ. ಪ್ರಧಾನಿ ಮೋದಿಯನ್ನು ಸೋಲಿಸಬಹುದು ಎಂಬುದು ಖಚಿತ ಎಂದು ರಾಹುಲ್ ಅಭಿಪ್ರಾಯ ಪಟ್ಟಿದ್ದಾರೆ. ನೀವು ವಿರೋಧದ ದೃಷ್ಟಿಯಲ್ಲಿ ಹೇಳಿದರೆ ಬಲ ಅಥವಾ ಎಡ ಅಲ್ಲ. ಶಾಂತಿ ಮತ್ತು ಒಕ್ಕೂಟ ಪರ್ಯಾಯವನ್ನು ನೀಡುವ ಮೂಲಕ ಫ್ಯಾಸಿಸಂ ಅನ್ನು ಸೋಲಿಸಲಾಗುತ್ತದೆ. ಭಾರತದ 2 ದೃಷ್ಟಿಕೋನಗಳು ಎದುರಾದ್ರೆ ನಾವು ಗೆಲ್ಲುವುದು ಖಚಿತ ಅಂತ ಹೇಳಿದ್ದಾರೆ.

ಕೇವಲ ಇದಿಷ್ಟೇ ಅಲ್ಲ.. ಬಡತನ, ಅನಕ್ಷರತೆ, ಹಣದುಬ್ಬರ, ಕೋವಿಡ್ ನಂತರದ ಬಿಕ್ಕಟ್ಟಿನ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯುವ ಕೆಲಸವಾಗುತ್ತಿದೆ ಅಂತ ದೂರಿದ್ದಾರೆ.. ಜೊತೆಗೆ ಚೀನಾ ಗಡಿ ವಿಚಾರದಲ್ಲೂ ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಕುಟುಕಿದ್ರು. ಇದಕ್ಕೆ ಜೈಶಂಕರ್ ಕೂಡ ತಿರುಗೇಟು ನೀಡಿದ್ದಾರೆ.

ಭಾರತೀಯ ಸೇನೆಯನ್ನು ಎಲ್‌ಎಸಿಗೆ ಕಳುಹಿಸಿದ್ದು ಯಾರು? ರಾಹುಲ್ ಗಾಂಧಿಯಲ್ಲ.. ಸೇನೆಯನ್ನು ನರೇಂದ್ರ ಮೋದಿ ಕಳುಹಿಸಿದ್ದಾರೆ.
ಜೈ.ಶಂಕರ್​, ವಿದೇಶಾಂಗ ಸಚಿವ

ಒಟ್ಟಾರೆ, ಕಾಂಗ್ರೆಸ್​, ಬಿಜೆಪಿ ನಾಯಕರ ವಾಕ್ಸಮರ ಮುಂದುವರೆಯುತ್ತಲೇ ಇದೆ. ನೇರವಾಗಿ ಕೇಂದ್ರದ ವಿರುದ್ಧ ಸಮರ ಸಾರಿರೋ ರಾಹುಲ್ ಗಾಂಧಿಗೆ, ಮೋದಿ ಬಳಗ ತಿರುಗೇಟು ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದಿನ ಎಲೆಕ್ಷನ್​​ನಲ್ಲಿ ಮೋದಿಯನ್ನು ಸೋಲಿಸಬಹುದೇ? ಈ ಪ್ರಶ್ನೆಗೆ ರಾಹುಲ್ ಕೊಟ್ಟ ಉತ್ತರ ಏನು ಗೊತ್ತಾ?

https://newsfirstlive.com/wp-content/uploads/2023/02/RAHUL_GANDHI-1.jpg

Load More