newsfirstkannada.com

ಬಹಳ ದಿನಗಳ ಬಳಿಕ ಮೋದಿ, ಶಾ ವಿರುದ್ಧ ಗಂಭೀರ ಆರೋಪ ಮಾಡಿದ ರಾಹುಲ್.. ಏನಂದ್ರು..?​​

Share :

14-11-2023

    22 ಕಾಂಗ್ರೆಸ್​ ಶಾಸಕರನ್ನು ಖರೀದಿಸಿದ್ದ ಮೋದಿ, ಅಮಿತ್​ ಶಾ

    ಮೋದಿ, ಶಾ ವಿರುದ್ಧ ಕಾಂಗ್ರೆಸ್​ ವರಿಷ್ಠ ಗಂಭೀರ ಆರೋಪ..!

    ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಮಾಡಿದ ಆರೋಪವೇನು?

ಭೂಪಾಲ್​​: ಮಧ್ಯಪ್ರದೇಶದಲ್ಲಿ 22 ಕಾಂಗ್ರೆಸ್​ ಶಾಸಕರನ್ನು ಖರೀದಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್​ ವರಿಷ್ಠ ಸಂಸದ ರಾಹುಲ್​ ಗಾಂಧಿ ಹೇಳಿದ್ದಾರೆ.

ಈ ಸಂಬಂಧ ಚುನಾವಣಾ ಪ್ರಚಾರದ ವೇಳೆ ಮಾತಾಡಿದ ರಾಹುಲ್ ಗಾಂಧಿ, 2018ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ವೋಟ್​​ ಹಾಕಿ 114 ಶಾಸಕರನ್ನು ಗೆಲ್ಲಿಸಿದ್ರು. ಐದು ವರ್ಷ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ರಿ. ಆದರೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್​ ಶಾ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಕಾಂಗ್ರೆಸ್​ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದರು. ಈ ಮೂಲಕ ಸಿಎಂ ಕಮಲ್​ನಾಥ್​​ ನೇತೃತ್ವದ ಅಂದಿನ ಕಾಂಗ್ರೆಸ್​ ಸರ್ಕಾರವನ್ನು ಕೆಡವಿದರು ಎಂದು ಆರೋಪಿಸಿದ್ರು.

ಶಾಸಕರ ಖರೀದಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿತ್ತು. ನೀವು ಕಾಂಗ್ರೆಸ್ಸಿಗೆ ವೋಟ್​ ಗೆಲ್ಲಿಸಿದ ನಿರ್ಧಾರವನ್ನು ಬಿಜೆಪಿ ಪುಡಿ ಮಾಡಿತ್ತು. ಈ ಮೂಲಕ ನಿಮಗೆ ಮೋಸ ಮಾಡಿದ್ರು ಎಂದರು.

150 ಸೀಟು ಗೆಲ್ಲೋದು ಗ್ಯಾರಂಟಿ ಎಂದ ರಾಹುಲ್​​..!

ಸದ್ಯದಲ್ಲೇ ನಡೆಯಲಿರೋ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 150 ಸ್ಥಾನ ಗೆಲ್ಲಲಿದೆ. ಈ ಮೂಲಕ ಬಲಿಷ್ಠ ಸರ್ಕಾರ ರಚನೆ ಮಾಡಲಿದೆ. ಕರ್ನಾಟಕದಲ್ಲಿ ಬಿಜೆಪಿಗರನ್ನು ಓಡಿಸಿದ್ದೇವೆ. ದೇಶದ ಎಲ್ಲಾ ಕಡೆ ಇದೇ ಕೆಲಸ ಮಾಡುತ್ತೇವೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಹಳ ದಿನಗಳ ಬಳಿಕ ಮೋದಿ, ಶಾ ವಿರುದ್ಧ ಗಂಭೀರ ಆರೋಪ ಮಾಡಿದ ರಾಹುಲ್.. ಏನಂದ್ರು..?​​

https://newsfirstlive.com/wp-content/uploads/2023/11/Rahul-Gandhi-Modi.jpg

Load More