newsfirstkannada.com

ವಿದೇಶಿ ನೆಲದಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ಧಾಳಿ; ರಾಗಾ ಮಾತಿಗೆ ಕೇಸರಿ ಕಲಿಗಳು ಕಿಡಿಮಿಡಿ

Share :

01-06-2023

    ರಾಹುಲ್ ವಾಗ್ಧಾಳಿ ವಿರುದ್ಧ ಬಿಜೆಪಿ ನಾಯಕರ ಮಾತಿನ ಮಿಸೈಲ್

    ಸೆಂಗೋಲ್​ಗೆ ಯಾವುದೇ ಪುರಾವೆ ಇಲ್ಲ -ರಾಹುಲ್​ ಕಿಡಿ

    ರಾಗಾ ಭಾಷಣದ ವೇಳೆ ಮೊಳಗಿದ ಖಲಿಸ್ತಾನ್ ಘೋಷಣೆ

ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರೋ ರಾಹುಲ್ ಗಾಂಧಿ ಈಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ವಿದೇಶಿ ನೆಲದಲ್ಲಿ ಮೋದಿ ವಿರುದ್ಧ ರಾಗಾ ಆಡಿರುವ ಮಾತುಗಳು ಕೇಸರಿ ಕಲಿಗಳನ್ನ ಕೆರಳಿಸಿದೆ. ಇನ್ನೂ ಸೆಂಗೋಲ್​ಗೆ ಯಾವುದೇ ಪುರಾವೆ ಇಲ್ಲ ಅಂತ ರಾಹುಲ್​ ನೀಡಿರುವ ಹೇಳಿಕೆ ಭಾರತಕ್ಕಾದ ಅವಮಾನ ಅಂತ ಹಲವರು ಸಿಡಿಮಿಡಿಗೊಂಡಿದ್ದಾರೆ. ಇನ್ನು ರಾಹುಲ್ ನಡೆಸಿದ ವಾಗ್ಧಾಳಿ ವಿರುದ್ಧ ಬಿಜೆಪಿ ನಾಯಕರು ಮಾತಿನ ಮಿಸೈಲ್​ ಬಿಡುತ್ತಿದ್ದಾರೆ.

ಸದಾ ಒಂದಿಲ್ಲೊಂದು ಕಾಂಟ್ರವರ್ಸಿ ಮೂಲಕ ವಿವಾದಗಳನ್ನ ತಲೆ ಮೇಲೆ ಎಳದುಕೊಳ್ಳೋ ರಾಹುಲ್​ ಗಾಂಧಿ ಕಾಂಟ್ರವರ್ಸಿ ಕಿಂಗ್​ ಅನ್ನೋ ಹಾಗೆ ಆಗ್ಬಿಟ್ಟಿದ್ದಾರೆ. ಯಾಕಂದ್ರೆ ಪ್ರತಿಪಕ್ಷಗಳ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ ರಾಗಾ ಪೇಚಿಗೆ ಸಿಲುಕೋದು ಮಾಮೂಲಿ ಆಗ್ಬಿಟ್ಟಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸದಾ ಕಿಡಿಕಾರುವ ರಾಹುಲ್​, ಮತ್ತದೇ ಚಾಳಿ ಮುಂದುವರೆಸಿದ್ದಾರೆ. ಕ್ಯಾಲಿಪೊರ್ನಿಯಾ ಪ್ರವಾಸದಲ್ಲಿರೋ ರಾಹುಲ್​ ಗಾಂಧಿ ಕಾರ್ಯಕ್ರಮವೊಂದಲ್ಲಿ ನೀಡಿದ ಹೇಳಿಕೆ ಈಗ ಕೇಸರಿ ಕಲಿಗಳನ್ನ ಕೆರಳಿಸಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಅನುರಾಗ್ ಠಾಕೂರ್ ಕಿಡಿ ಕಾರಿದ್ದಾರೆ.

ವಿದೇಶಿ ನೆಲದಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ಧಾಳಿ

ಅಮೆರಿಕಾ ಪ್ರವಾಸದಲ್ಲಿರೋ ರಾಹುಲ್​ ಗಾಂಧಿ ಕ್ಯಾಲಿಪೊರ್ನಿಯಾದಲ್ಲಿ ನಡೆದ ಅನಿವಾಸಿ ಭಾರತೀಯ ಸಭೆಯಲ್ಲಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ದೇವರಿಗಿಂತ ದೊಡ್ಡವರು ಅನ್ನೋ ಮೂಲಕ ವಿದೇಶಿ ನೆಲದಲ್ಲಿ ಮೋದಿಯವರನ್ನ ಅಣಕಿಸಿದ್ದಾರೆ. ಇನ್ನು ಮೋದಿ ಮೇಲೆ ಮಾತಿನ ಪ್ರಹಾರ ನಡೆಸಿದ ರಾಹುಲ್​ ಗಾಂಧಿ ಬಳಿಕ ಇತ್ತೀಚೆಗೆ ನೂತನ ಸಂಸತ್​ನಲ್ಲಿ ಸ್ಥಾಪಿಸಲಾದ ಸೆಂಗೋಲ್ ಬಗ್ಗೆಯೂ ವಾಗ್ದಾಳಿ ನಡೆಸಿದ್ರು.. ಪ್ರಧಾನಿ ಮೋದಿ ಸರ್ಕಾರದಿಂದ ನಿರುದ್ಯೋಗ, ಬೆಲೆ ಏರಿಕೆ, ದ್ವೇಷದ ಹರಡುವಿಕೆಯಂತ ಸಮಸ್ಯೆಗಳನ್ನ ಪರಿಹರಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ರಾಜದಂಡದ ಕೆಲಸ ಮಾಡಬೇಕು. ಹೊಸ ಸಂಸತ್ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಸೆಂಗೋಲ್​ಗೆ ಯಾವುದೇ ಪುರಾವೆ ಇಲ್ಲ ಅಂತ ರಾಹುಲ್​ ಕಿಡಿಕಾರಿದ್ರು.

ನನ್ನ ಯೋಚನೆ ಪ್ರಕಾರ ಮೋದಿ ದೇವರಿಗಿಂತ ದೊಡ್ಡವರು.. ಅವರು ದೇವರ ಜೊತೆಗೆ ಕುಳಿತು ಬ್ರಹ್ಮಾಂಡದಲ್ಲಿ ಏನು ನಡೀತಿದೆ ಅಂತ ವಿವರಿಸುತ್ತಾರೆ.. ಕಂಡಿತವಾಗಿ ನಮ್ಮ ಪ್ರಧಾನ ಮಂತ್ರಿಗಳು ಅದ್ಭುತ ವ್ಯಕ್ತಿ, ನನ್ನ ಪ್ರಕಾರ ದೇವರನ್ನ ಬಿಟ್ರೆ ನೆಕ್ಸ್ಟ್​ ಅವರೇ ದೇವರು.. ಮೋದಿ ಮತ್ತು ದೇವರನ್ನ ಮಾತುಕತೆಗೆ ಕೂರಿಸಿದ್ರೆ ಮೋದಿ ವಿಶ್ವದಲ್ಲಿ ಏನಾಗ್ತಿದೆ ಅಂತ ದೇವರಿಗೆ ವಿವರಣೆ ಕೊಡ್ತಾರೆ.. ಇದರಿಂದ ದೇವರಿಗೆ ನಾನೇ ಇವರನ್ನ ಸೃಷ್ಟಿಮಾಡಿದ್ದಾ ಅಂತ ಅನುಮಾನ ಸಹ ಆಗ್ಬೋದು.. ಇದೆಲ್ಲಾ ತಮಾಷೆಯ ವಿಷಯಗಳು ಆದ್ರೆ ಹೀಗೆ ಯಾಕೆ ನಡೀತಿದೆ ಅಂತ ಯಾರಿಗೂ ಗೊತ್ತಾಗ್ತಿಲ್ಲ.. ಆದ್ರೆ ಕೆಲವು ಜನರ ಗುಂಪು ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ.

ರಾಹುಲ್ ಗಾಂಧಿ, ಕಾಂಗ್ರೆಸ್​ ನಾಯಕ

ರಾಹುಲ್​ ಗಾಂಧಿ ಹೇಳಿಕೆಗೆ ಕಿರಣ್ ರಿಜಿಜು ಸಿಡಿಮಿಡಿ

ರಾಹುಲ್​ ಗಾಂಧಿ ಹೇಳಿಕೆ ಬೆನ್ನಲ್ಲೇ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದಾರೆ..  ದೇಶದೊಳಗೆ ಅಥವಾ ವಿದೇಶದಲ್ಲಿ ಇರಲಿ, ರಾಹುಲ್ ಗಾಂಧಿಯವರಿಗೆ ದೇಶವನ್ನ ದೂಷಿಸಿ..  ಮೋದಿಯನ್ನ ನಿಂದಿಸುವುದೇ ಕೆಲಸವಾಗಿದೆ. ರಾಹುಲ್​ ಗಾಂಧಿ ​ ಪ್ರಧಾನಿ ಮೋದಿಯನ್ನು ಏಕೆ ದ್ವೇಷಿಸುತ್ತಾರೆ, ದೇಶದ ವಿರುದ್ಧ ಮಾತನಾಡುತ್ತಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಕಿರಣ್ ರಿಜಿಜು, ಕೇಂದ್ರ ಸಚಿವ

ಕಾಂಗ್ರೆಸ್​ ನಾಯಕನ ವಿರುದ್ಧ ಅನುರಾಗ್ ಠಾಕೂರ್ ವಾಗ್ದಾಳಿ

ರಾಹುಲ್​ ಗಾಂಧಿಯವರು ವಿದೇಶಕ್ಕೆ  ಹೋಗಿ ದೇಶವನ್ನ ಅವಮಾನಿಸುತ್ತಿದ್ದಾರೆ ಅಂತಾ ಕೇಂದ್ರ ಸಚಿವ ಅನುರಾಗ್​ ಠಾಕೂರ್ ಕೂಡಾ ಕಿಡಿಕಾರಿದ್ದಾರೆ. ಕಾಂಗ್ರೆಸ್​ಗೆ ನಮ್ಮ ಸರ್ಕಾರದ ಸಾಧನೆಯನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು  ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಏನನ್ನು ಸಾಧಿಸಲು ಬಯಸುತ್ತಾರೆ. ದೇಶದ ಮೇಲೆ ಕೆಸರು ಎರಚೋದೆ ಇವರ ಕೆಲಸವೇ? ಎಂದು ಪ್ರಶ್ನಿಸಿದ್ದಾರೆ.

ಅನುರಾಗ್ ಠಾಕೂರ್, ಕೇಂದ್ರ ಸಚಿವ

ರಾಗಾ ಭಾಷಣದ ವೇಳೆ ಮೊಳಗಿದ ಖಲಿಸ್ತಾನ್ ಘೋಷಣೆ

ಕ್ಯಾಲಿಪೊರ್ನಿಯಾದಲ್ಲಿ ನಡೆದ ಅನಿವಾಸಿ ಭಾರತೀಯ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿರುವಾಗ ಖಲಿಸ್ತಾನ್ ಘೋಷಣೆ ಮೊಳಗಿದೆ.. ಕಾರ್ಯಕ್ರಮಕ್ಕೆ ಆಗಮಿಸಿದ್ದ ಖಲಿಸ್ತಾನಿ ಸಂಘಟನೆಯ ಬೆಂಬಲಿಗರು ರಾಹುಲ್ ಭಾಷಣದ ನಡುವೆ ಖಲಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.. ಅಲ್ಲದೆ ಖಲಿಸ್ತಾನದ ಧ್ವಜವನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಮಂದಹಾಸದಲ್ಲೇ ಉತ್ತರ ಕೊಟ್ಟ ರಾಹುಲ್ ದ್ವೇಷದ ನಗರದಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕು ಎಂದಿದ್ದಾರೆ.

ಒಟ್ನಲ್ಲಿ ವಿದೇಶಿ ನೆಲದಲ್ಲಿ ದೇಸಿ ನಾಯಕರನ್ನ ಕೆಣಕಿ ರಾಹುಲ್​ ಗಾಂಧಿ ಮತ್ತೆ ಬಿಜೆಪಿ ನಾಯಕರ ಬಾಯಿಗೆ ತುತ್ತಾಗಿದ್ದಾರೆ. ಪದೇ ಪದೇ ಪರಭಾಷಿಕರ ಮುಂದೆ ಮೋದಿಯನ್ನ​ ತೆಗಳುತ್ತಾ ದೇಶದ ಮರ್ಯಾದೆಯನ್ನ ವಿದೇಶದಲ್ಲಿ ತೆಗೆಯುತ್ತಿದ್ದಾರೆ ಅನ್ನೋದು ಬಿಜೆಪಿಗರ ಸಿಟ್ಟು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದೇಶಿ ನೆಲದಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ಧಾಳಿ; ರಾಗಾ ಮಾತಿಗೆ ಕೇಸರಿ ಕಲಿಗಳು ಕಿಡಿಮಿಡಿ

https://newsfirstlive.com/wp-content/uploads/2023/06/Rahul-Gandi.jpg

Load More