newsfirstkannada.com

ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ; ವಯನಾಡು ಸಂಸದ ಸ್ಥಾನಕ್ಕೆ ರಾಹುಲ್​ ರಾಜೀನಾಮೆ

Share :

Published June 17, 2024 at 8:04pm

  ಮಹತ್ವದ ರಾಜಕೀಯ ಬೆಳವಣಿಗೆ ಒಂದರಲ್ಲಿ ರಾಹುಲ್ ಗಾಂಧಿ​ ರಾಜೀನಾಮೆ

  ವಯನಾಡು ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ರಾಹುಲ್!

  ತನಗೆ ಪುನರ್ಜನ್ಮ ಕೊಟ್ಟಿದ್ದ ವಯನಾಡು ಕ್ಷೇತ್ರವನ್ನೇ ಬಿಟ್ಟುಕೊಟ್ಟ ಸಂಸದ

ವಯನಾಡು: ಮಹತ್ವದ ರಾಜಕೀಯ ಬೆಳವಣಿಗೆ ಒಂದರಲ್ಲಿ ವಯನಾಡು ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಹುಲ್​​ ಗಾಂಧಿಯವ್ರು ರಾಜೀನಾಮೆ ನೀಡಲಿದ್ದಾರೆ. 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತನಗೆ ಪುನರ್ಜನ್ಮ ಕೊಟ್ಟಿದ್ದ ವಯನಾಡು ಕ್ಷೇತ್ರವನ್ನೇ ರಾಹುಲ್​ ಗಾಂಧಿ ತೊರೆದಿದ್ದಾರೆ.

ಇತ್ತೀಚೆಗೆ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್​ ಗಾಂಧಿ ವಯನಾಡು ಹಾಗೂ ರಾಯ್​ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಈಗ ರಾಯ್​ಬರೇಲಿ ಉಳಿಸಿಕೊಂಡು ವಯನಾಡು ಕ್ಷೇತ್ರವನ್ನು ರಾಹುಲ್ ತ್ಯಜಿಸುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಸದ್ಯ ಬಲ್ಲ ಮೂಲಗಳ ಪ್ರಕಾರ ಪ್ರಿಯಾಂಕಾ ಗಾಂಧಿಯವ್ರು ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿ ಚುನಾವಣಾ ರಾಜಕೀಯಕ್ಕೆ ಪಾದರ್ಪಣೆ ಮಾಡಲಿದ್ದಾರೆ. ನಾಳೆಯೇ ಲೋಕಸಭಾ ಸ್ಪೀಕರ್​ ಅವರನ್ನು ಭೇಟಿ ಮಾಡಿ ರಾಹುಲ್​ ಗಾಂಧಿ ರಾಜೀನಾಮೆ ಪತ್ರ ನೀಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ; ವಯನಾಡು ಸಂಸದ ಸ್ಥಾನಕ್ಕೆ ರಾಹುಲ್​ ರಾಜೀನಾಮೆ

https://newsfirstlive.com/wp-content/uploads/2024/06/RAHUL-GANDHI-5.jpg

Load More