newsfirstkannada.com

ಗ್ಯಾರೇಜ್​ನಲ್ಲಿ ರಾಹುಲ್ ಗಾಂಧಿ.. ಬೈಕ್ ರಿಪೇರಿನೂ ಮಾಡ್ತಾರೆ ನೋಡಿ..! Photos

Share :

28-06-2023

  ಸಾರ್ವಜನಿಕರ ಭೇಟಿ ಕಂಟಿನ್ಯೂ ಮಾಡಿದ ರಾಹುಲ್ ಗಾಂಧಿ

  ಮೆಕಾನಿಕ್ ಅಂಗಡಿಗೆ ಭೇಟಿ ನೀಡಿ, ಸಮಸ್ಯೆ ಆಲಿಸಿದ ‘ಕೈ’ನಾಯಕ

  ಈ ಹಿಂದೆ ಟ್ರಕ್​​ನಲ್ಲಿ ಪ್ರಯಾಣಿಸಿ ಸುದ್ದಿಯಾಗಿದ್ದ ಮಾಜಿ ಸಂಸದ

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಬಡವರ, ವ್ಯಾಪಾರಸ್ಥರ, ಸಾಮಾನ್ಯ ಜನರ ಭೇಟಿ ಮಾಡೋದನ್ನು ಮುಂದುವರಿಸಿದ್ದಾರೆ. ‘ಭಾರತ್ ಜೋಡೋ’ ಯಾತ್ರೆಯಿಂದ ನಿರಂತರವಾಗಿ ಸಾರ್ವಜನಿಕರನ್ನು ಭೇಟಿ ಆಗುತ್ತಿರುವ ರಾಹುಲ್ ಗಾಂಧಿ, ನಿನ್ನೆ ದೆಹಲಿಯ ಕರೋಲ್ ಬಾಗ್​​ನಲ್ಲಿರುವ ಮೆಕಾನಿಕ್ ಅಂಗಡಿಗಳಿಗೆ ಭೇಟಿ ನೀಡಿದ್ದರು.

ಭೇಟಿ ನೀಡಿದ ರಾಹುಲ್ ಗಾಂಧಿ, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರ ಜೊತೆ ಮಾತುಕತೆ ನಡೆಸಿದರು. ಇದನ್ನು ಕಾಂಗ್ರೆಸ್​ ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕೆಲವು ಫೋಟೋಗಳಲ್ಲಿ ರಾಹುಲ್ ಗಾಂಧಿ, ಸ್ಕ್ರೂಡೈವರ್ ತೆಗೆದುಕೊಂಡು ಏನೋ ರಿಪೇರಿ ಮಾಡುತ್ತಿದ್ದಂತೆ ಕಾಣ್ತಿದೆ.

ತುಂಬಾ ಸಿಂಪಲ್ ಆಗಿ ಅಂಗಡಿಯಲ್ಲಿ ಕೂತಿರುವ ರಾಹುಲ್ ಗಾಂಧಿ, ದ್ವಿಚಕ್ರ ವಾಹನಗಳನ್ನು ರಿಪೇರಿ ಮಾಡುತ್ತ ಅವರ ಕಷ್ಟ-ನೋವುಗಳನ್ನು ತಿಳಿದುಕೊಂಡಿದ್ದಾರೆ. ಮಾತ್ರವಲ್ಲ ಕರೊಲ್ ಬಾಗ್​ನಲ್ಲಿರುವ ಸೈಕಲ್ ಮಾರ್ಕೆಟ್​ಗೂ ಭೇಟಿ ನೀಡಿದ್ದರು, ಈ ವೇಳೆ ರಾಹುಲ್ ಅವರನ್ನು ಭೇಟಿಯಾಗಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಪ್ರತಿಯೊಬ್ಬರಿಗೂ ಹ್ಯಾಂಡ್​ಶೇಕ್ ಮಾಡಿ ರಾಹುಲ್ ಗಾಂಧಿ ಖುಷಿಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ಯಾರೇಜ್​ನಲ್ಲಿ ರಾಹುಲ್ ಗಾಂಧಿ.. ಬೈಕ್ ರಿಪೇರಿನೂ ಮಾಡ್ತಾರೆ ನೋಡಿ..! Photos

https://newsfirstlive.com/wp-content/uploads/2023/06/RAHUL_GANDHI-3.jpg

Load More