newsfirstkannada.com

ನೀರಿನ ಟ್ಯಾಂಕ್​ನಲ್ಲಿ 2 ಕೋತಿಗಳು ಸಾವು.. ಅದೇ ನೀರನ್ನು ಕುಡಿದ ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು

Share :

04-07-2023

    2 ಕೋತಿ ಬಿದ್ದು 2 ದಿನವಾಗಿತ್ತೋ ಅಥವಾ 1 ವಾರ ಆಗಿತ್ತೋ?

    ಓವರ್ ಹೆಡ್​ಟ್ಯಾಂಕ್​ನಿಂದ ಇಡೀ ಊರಿಗೆ ನೀರಿನ ಸಂಪರ್ಕ

    ಅನಾರೋಗ್ಯಕ್ಕೆ ತುತ್ತಾದ ಗ್ರಾಮಸ್ಥರು, ಇನ್ನು ಕೆಲವರಲ್ಲಿ ಆತಂಕ

ರಾಯಚೂರು: ಕುಡಿಯುವ ನೀರಿನ ಓವರ್ ಹೆಡ್​ಟ್ಯಾಂಕ್​ನಲ್ಲಿ 2 ಕೋತಿಗಳು ಮೃತಪಟ್ಟು ಎರಡು ದಿನ ಕಳೆದರೂ ಗೊತ್ತಿಲ್ಲದೆ ಗ್ರಾಮಸ್ಥರು ಅದೇ ನೀರನ್ನು ಕುಡಿದಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಘಟನೆಯು ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದಲ್ಲಿ ನಡೆದಿದೆ.

ಖಾನಾಪುರ ಗ್ರಾಮದ ಓವರ್ ಹೆಡ್​ಟ್ಯಾಂಕ್​ನಲ್ಲಿ 2 ಕೋತಿಗಳು ಮೃತಪಟ್ಟಿದ್ದು, ಗೊತ್ತಿಲ್ಲದೇ ಅದೇ ನೀರನ್ನು ಕುಡಿದ ಗ್ರಾಮಸ್ಥರ ಆರೋಗ್ಯದಲ್ಲಿ ಎರಡ್ಮೂರು ದಿನದಿಂದ ಏರುಪೇರಾಗಿದೆ. ಅವುಗಳು ನೀರಿನಲ್ಲಿ ಬಿದ್ದು ಮೃತಪಟ್ಟು 1 ವಾರವಾಗಿರಬಹುದು ಎಂದು ಶಂಕಿಸಲಾಗಿದೆ.

ಇಂದು ಮುಂಜಾನೆ ಟ್ಯಾಂಕ್​ನಲ್ಲಿ ಕೋತಿಗಳು ಸಾವನ್ನಪ್ಪಿರುವುದು ಗ್ರಾಮಸ್ಥರು ಗಮನಿಸಿದ್ದಾರೆ. ಬಳಿಕ ಎರಡನ್ನು ಹೊರ ತೆಗೆಯಲಾಗಿದೆ. ಕಳೆದ ತಿಂಗಳು ಕೂಡ ಇಂತಹದ್ದೆ ಘಟನೆ ನಡೆದು ಸಾವು ಸಂಭವಿಸಿತ್ತು. ಸದ್ಯ ಗ್ರಾಮದ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀರಿನ ಟ್ಯಾಂಕ್​ನಲ್ಲಿ 2 ಕೋತಿಗಳು ಸಾವು.. ಅದೇ ನೀರನ್ನು ಕುಡಿದ ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು

https://newsfirstlive.com/wp-content/uploads/2023/07/RCR_MONKEY_DEATH.jpg

Load More