newsfirstkannada.com

ಡಿವೋರ್ಸ್​ ಕೇಳಿ ಕೋರ್ಟ್​ಗೆ ಬಂದಿದ್ದ 15 ದಂಪತಿಗೆ ಮರುವಿವಾಹ; ನಾಚುತ್ತಲೇ ಸಂತಸದಲ್ಲಿ ಮುಳುಗಿದ ಜೋಡಿಗಳು

Share :

09-07-2023

    ಮುರಿದು ಹೋಗಿದ್ದ ಸಂಬಂಧಗಳಿಗೆ ರೆಕ್ಕೆ ಕಟ್ಟಿದ ನ್ಯಾಯಾಲಯ

    ಕೋರ್ಟ್​ನಲ್ಲೇ ಹಾರ ಬದಲಾಯಿಸಿ ಹೊಸ ಜೀವನ ಸೂತ್ರ..! 

    ಕಹಿ ನೆನಪುಗಳು ಮರೆತು ಮತ್ತೆ ಹೊಸ ಬಾಳಿಗೆ ಕಾಲಿಟ್ಟ ದಂಪತಿ ​

ವಿವಾಹ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತಾ ಹೇಳ್ತಾರೆ. ಆದ್ರೆ ಇದೇ ಪವಿತ್ರ ಅನುಬಂಧವನ್ನ ದಂಪತಿಗಳು ಚಿಕ್ಕ ಪುಟ್ಟ ಮನಸ್ಥಾಪಗಳಿಂದ ದೂರ ಮಾಡಿಕೊಳ್ತಿದ್ದಾರೆ. ವಿಚ್ಚೇಧನ ಕೋರಿ ಅದೆಷ್ಟೋ ದಂಪತಿಗಳು ನ್ಯಾಯಾಲಯದ ಮೆಟ್ಟಲೇರುತ್ತಿದ್ದಾರೆ. ಸಣ್ಣಪುಟ್ಟ ಗಲಾಟೆಗೆ ಸಂಸಾರ ಹಾಳು ಮಾಡಿಕೊಂಡಿದ್ದ ಹಲವಾರು ಸತಿ-ಪತಿ ಜೋಡಿಗಳನ್ನು ನ್ಯಾಯಾಲಯ ಒಂದುಗೂಡಿಸುವ ಕೆಲಸ ಮಾಡಿದೆ. ಲೋಕಾ ಅದಾಲತ್ ಮೂಲಕ ದಂಪತಿಗಳ ಬಂಧಕ್ಕೆ ಬೆಸುಗೆ ಹಾಕಲಾಗಿದೆ.

ಜಗತ್ತು ಬದಲಾಗುತ್ತಿದೆ. ಆಧುನಿಕತೆಯತ್ತ ಸಾಗುತ್ತಿದೆ. ಆದ್ರೆ, ಸಂಬಂಧಗಳ ಕೊಂಡಿ ಮಾತ್ರ ಕಳಚಿ ಬೀಳುತ್ತಿದೆ. ಪತಿ-ಪತ್ನಿಯ ಮಧ್ಯೆ ಎಳ್ಳಷ್ಟು ಜಗಳಕ್ಕೆ ಸಂಸಾರವೇ ಮುರಿದು ಬೀಳ್ತಿದೆ. ನಿತ್ಯವೂ ಸಾವಿರಾರು ಜೋಡಿಗಳು ವಿಚ್ಛೇದನ ಪಡೆಯುತ್ತಿವೆ. ಇದರ ಮಧ್ಯೆ ರಾಯಚೂರಿನಲ್ಲಿ ಒಂದು ಮಿರಾಕಲ್ ನಡೆದಿದೆ. ಮುರಿದು ಬಿದ್ದಿದ್ದ ಸಂಸಾರಕ್ಕೆ ಬೆಸುಗೆ ಹಾಕುವ ಕಾರ್ಯ ನಡೆದಿದೆ.

ಲೋಕ್‌ ಅದಾಲತ್‌ನಲ್ಲಿ ಕೋರ್ಟ್‌ನಿಂದ ಮರುವಿವಾಹ

ಇಂತಹದ್ದೊಂದು ವಿಶೇಷ ಘಟನೆಗೆ ಸಾಕ್ಷಿಯಾಗಿರೋದು ರಾಯಚೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜರುಗಿದ ಲೋಕಾ ಅದಾಲತ್ ಕಾರ್ಯಕ್ರಮ. ತಮ್ಮದೇ ಪ್ರತಿಷ್ಟೆ, ಅಹಂಕಾರ ಹೀಗೆ ಕಾರಣಾಂತರಗಳಿಂದ ವಿಚ್ಚೇಧನ ಕೋರಿ ಅರ್ಜಿ ಸಲ್ಲಿಸಿದ್ದ 15 ದಂಪತಿಗಳನ್ನ ನ್ಯಾಯಾಲಯ ಒಂದು ಮಾಡಿದೆ. ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ ಮಾರುತಿ ಬಗಾಡೆ ಹಾಗೂ ಕುಟುಂಬ ನ್ಯಾಯಾಲಯದ‌ ನ್ಯಾಯಾಧೀಶ ಎಂ ಜಗದೀಶ್ವರ್ ಅವರ ನೇತೃತ್ವದಲ್ಲಿ 15 ಜೋಡಿಗಳಿಗೆ ಮರುಮದುವೆ ನಡೆದಿದೆ.

ತಂದೆ-ತಾಯಿ ಮರು ಮದುವೆಗೆ ಸಾಕ್ಷಿಯಾದ ಕುಲಪುತ್ರ

ತಂದೆ-ತಾಯಿ ದೂರವಾದರೆ ಅದರ ನೇರ ಪರಿಣಾಮ ಬೀರೋದು ಮಕ್ಕಳ ಭವಿಷ್ಯದ ಮೇಲೆ. ತಂದೆ ತಾಯಿ ಮಕ್ಕಳ ಎರಡು ಕಣ್ಣುಗಳಿದ್ದಂತೆ ಅದರಲ್ಲಿ ಒಬ್ಬರು ಮಕ್ಕಳ ಜೀವನದಲ್ಲಿ ಇಲ್ಲದೇ ಹೋದ್ರೂ ಮಕ್ಕಳು ಜೀವನ ಪೂರ್ತಿ ನೋವಲ್ಲಿ ಕೊರಗುವಂತಾಗುತ್ತೆ. ಆದ್ರೆ, ಇಲ್ಲೊಬ್ಬ ಪುತ್ರನಿಗೂ ಎದುರಾಗಬೇಕಿದ್ದ ಸಂಕಷ್ಟ ಈಗ ಬಗೆಹರಿದಿದೆ. 15 ದಂಪತಿಗಳಲ್ಲಿ ಒಬ್ಬರಾದ ಅದೇ ಜಿಲ್ಲೆಯ ಶಕ್ತಿನಗರದ ದಂಪತಿಗಳಿಗೆ ಪುತ್ರನೇ ಮರುವಿವಾಹ ಮಾಡಿಸಿದ್ದಾನೆ ತಂದೆ-ತಾಯಿಗೆ ಸಿಹಿ ತಿನ್ನಿಸಿ ಒಂದಾಗಿದ್ದನ್ನ ಕಂಡು ಭಾವುಕನಾಗಿದ್ದಾನೆ.

ಹಲವಾರು ಕಾರಣಾಂತರಗಳಿಂದ 10 ವರ್ಷಗಳಿಂದ ದೂರ ಇದ್ದ ಜೋಡಿಗಳು ಒಂದಾಗಿದ್ದಾರೆ. ಕೋರ್ಟ್ ಮೆಟ್ಟಿಲನ್ನ ಯಾರೂ ಹತ್ತಬೇಡಿ ಎಂಬ ಸಲಹೆಯನ್ನ ಕೂಡ ನೀಡಿದ್ದಾರೆ.

ಸಾಂಸಾರಿಕ ಕಲಹದಲ್ಲಿ ಸಿಲುಕಿ ಡೈವೋರ್ಸ್ ಅಪ್ಲೈ ಮಾಡಿದ್ದ 15 ಜೋಡಿಗಳಿಗೆ ನಿಜಕ್ಕೂ ಈ ದಿನ ವಿಶೇಷ ದಿನ. ಅಬ್ಬಬ್ಬಾ ಏನ್ ಸಡಗರ. ಏನ್ ಸಂಭ್ರಮ. ನಾವು ಈಗ ತಾನೇ ಹೊಸದಾಗಿ ನೂತನ ಜೀವನಕ್ಕೆ ಕಾಲಿಡುತ್ತಿದ್ದೀವೇನೋ ಅನ್ನೋ ಸಂಭ್ರಮದಲ್ಲಿದ್ದಾರೆ ವಿಶೇಷ ಜೋಡಿಗಳು. ಈ ಜೋಡಿಗಳು ದೂರಾಗಲು ಕಾರಣ ನೂರೆಂಟಾದ್ರೂ ಕೂಡ ಒಂದಾಗಲು ಮಾತ್ರ ಒಂದೇ ಕಾರಣ ಲೋಕಾ ಅದಾಲತ್ ಕಾರ್ಯಕ್ರಮ.

ಸಂಸಾರದಲ್ಲಿ ಗೊಂದಲವಾಗಿ ಕೋರ್ಟ್​ ಮೆಟ್ಟಿಲು ಏರಿದ್ದೇವು. ಇಬ್ಬರು ಬೇರೆ ಬೇರೆಯಾಗಿ 10 ವರ್ಷಗಳು ಆದ ಮೇಲೆ ಜೀವನ ಇಷ್ಟೇ ಎಂದು ತಿಳಿದುಕೊಂಡು ಈಗ ಮತ್ತೆ ಒಂದಾಗಿ ಸುಖ ಸಂಸಾರ ಮಾಡುತ್ತೇವೆ. ಮುಂದಿನ ಜನರೇಷನ್ ಅವ್ರು ಯಾರೂ ಕೋರ್ಟ್​ ಮೆಟ್ಟಿಲು ಹತ್ತಬಾರದು. ಚೆನ್ನಾಗಿ ಬಾಳಿ ಒಬ್ಬರಿಗೊಬ್ಬರು ಅಂಡರ್​ಸ್ಟ್ಯಾಂಡ್​ ಮಾಡಿಕೊಂಡರೇ ಸತಿ-ಪತಿ ಒಂದಾಗಿ ಇರಬಹುದು.

10 ವರ್ಷ ದೂರ ಆಗಿದ್ದ ದಂಪತಿ

ಇಂತಹದ್ದೊಂದು ಅದ್ಭುತ ಕಾರ್ಯವನ್ನ ನೆರವೇರಿಸಿರೋ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ ಮಾರುತಿ ಬಗಾಡೆ ಮರುವಿಹಾದ ಬಗ್ಗೆ ಹೇಳಿದ್ದು ಹೀಗೆ.

ಕೌಟಂಬಿಕ ಕೋರ್ಟ್​ನಲ್ಲಿ 15 ಜೋಡಿಗಳ ಮಧ್ಯ ಇದ್ದಂತಹ ವಿವಾಹ ವಿಚ್ಚೇದನ ಪ್ರಕರಣಗಳು, ವಿವಾಹ ಸಂಬಂಧ ಮರು ಸ್ಥಾಪನಾ ಪ್ರಕರಣಗಳು, ಜೀವನಾಂಶದ ಪ್ರಕರಣಗಳು ಇವತ್ತು ಅಂತ್ಯ ಕಂಡಿವೆ. ಅವರೆಲ್ಲ ಪುನರ್ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಜೋಡಿಗಳಲ್ಲಿ ಒಂದು ಜೋಡಿ 60 ವರ್ಷಕ್ಕಿಂತ ಮೇಲ್ಪಟ್ಟವರು ಆಗಿದ್ದಾರೆ. ಇವರ ಬಾಳಿನಲ್ಲಿ ಬಂದಂತಹ ಬಿರುಕನ್ನು ನಾವು ಸರಿಪಡಿಸಿ ಕೋರ್ಟ್​ನಲ್ಲಿ ಪುನರ್​ ವಿವಾಹ ಮಾಡಿಸಲಾಗಿದೆ.

ಮಾರುತಿ ಬಗಾಡೆ, ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ

ವರ್ಷಾಂತರಗಳಿಂದ ದೂರ ದೂರ ಇದ್ದ ಜೋಡಿ ಮರುವಿಹಾದ ಮೂಲಕ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೋರ್ಟ್ ಮೆಟ್ಟಿಲೇರಿದ ಈ ಜೋಡಿಗಳು ದೂರಾಗುವ ಮುನ್ನ ವಿವಾಹದ ಪ್ರಾಮುಖ್ಯತೆ ಅರಿತು ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿರುವುದು ನಿಜಕ್ಕೂ ಸಂತಸದ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಡಿವೋರ್ಸ್​ ಕೇಳಿ ಕೋರ್ಟ್​ಗೆ ಬಂದಿದ್ದ 15 ದಂಪತಿಗೆ ಮರುವಿವಾಹ; ನಾಚುತ್ತಲೇ ಸಂತಸದಲ್ಲಿ ಮುಳುಗಿದ ಜೋಡಿಗಳು

https://newsfirstlive.com/wp-content/uploads/2023/07/RCR_LOKA_ADALATH.jpg

Load More