newsfirstkannada.com

ಪೋಷಕರೇ ಹುಷಾರ್​.. ಮಕ್ಕಳಿಗಾಗಿ ಬಂದಿವೆ ಗಾಂಜಾ ಚಾಕೊಲೇಟ್.. ಯುವಕರೇ ಇವರ ಟಾರ್ಗೆಟ್..!

Share :

02-08-2023

  ರಾಯಚೂರಿನಿಂದ ಹೊರ ಬಿದ್ದಿದೆ ಆಘಾತಕಾರಿ ಸುದ್ದಿ

  ಉತ್ತರ ಪ್ರದೇಶದಿಂದ ತರುತ್ತಾರೆ ಗಾಂಜಾ ಚಾಕೊಲೇಟ್

  ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು

ರಾಯಚೂರು: ಮಕ್ಕಳು, ಯುವಕರನ್ನು ಟಾರ್ಗೆಟ್ ಮಾಡಿ ಗಾಂಜಾ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಒಟ್ಟು 2.66 ಕೆ.ಜಿ ತೂಕದ ಗಾಂಜಾ ಮಿಶ್ರಿತ ಚಾಕೊಲೇಟ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಇಬ್ಬರು ಆರೋಪಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರಾಚಯ್ಯಸ್ವಾಮಿ, ಅಮರಯ್ಯ ಸ್ವಾಮಿ ಗಾಂಜಾ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಆರೋಪಿಗಳು. ರಾಯಚೂರು ನಗರದ LBS ನಗರ, ಚಂದ್ರಬಂಡ್​ ರಸ್ತೆ ಸೇರಿದಂತೆ ಇತರೆ ಏರಿಯಾಗಳಲ್ಲಿ ಆರೋಪಿಗಳು ಗಾಂಜಾ ಚಾಕೊಲೇಟ್​ಗಳನ್ನು ಮಕ್ಕಳಿಗೆ ಹಾಗೂ ಯುವಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿ ಡಿ.ಸಿ ಲಕ್ಷ್ಮೀ ಅವರ ನೇತೃತ್ವದಲ್ಲಿ ದಾಳಿ ಮಾಡಲಾಯಿತು.

ದಾಳಿ ವೇಳೆ ಒಟ್ಟು 2.66 ಕೆ.ಜಿ ತೂಕದ 482 ಗಾಂಜಾ ಮಿಶ್ರಿತ ಚಾಕೊಲೇಟ್​ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಚಾಕೊಲೇಟ್​ಗಳು ಉತ್ತರ ಪ್ರದೇಶದಿಂದ ಪೂರೈಕೆ ಆಗುತ್ತಿದ್ದವು ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಹುಷಾರ್​.. ಮಕ್ಕಳಿಗಾಗಿ ಬಂದಿವೆ ಗಾಂಜಾ ಚಾಕೊಲೇಟ್.. ಯುವಕರೇ ಇವರ ಟಾರ್ಗೆಟ್..!

https://newsfirstlive.com/wp-content/uploads/2023/08/RCR_GANJA.jpg

Load More