newsfirstkannada.com

ಕೊಡಲಿಯಿಂದ‌ ಕಡಿದು ಕಾಂಗ್ರೆಸ್ ಮುಖಂಡನ ಹತ್ಯೆ ಕೇಸ್​.. ಮೂವರು ಆರೋಪಿಗಳು ಅಂದರ್; ಕೊಲೆಗೆ ಕಾರಣ?

Share :

03-11-2023

    ಆರೋಪಿಗಳನ್ನು ಪತ್ತೆ ಮಾಡಿದ ವೀರಭದ್ರಯ್ಯ ಸ್ವಾಮಿ ನೇತೃತ್ವದ ತಂಡ

    ಹತ್ಯೆಯಾದ ವ್ಯಕ್ತಿ ಕಾಂಗ್ರೆಸ್​ನ ಎನ್.ಎಸ್ ಬೋಸರಾಜುರ ಬೆಂಬಲಿಗ

    ವ್ಯಕ್ತಿಯನ್ನ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಮೂವರು ಹಂತಕರು

ರಾಯಚೂರು: ಹಾಡಹಗಲೇ ಕೊಡಲಿಯಿಂದ‌ ಕಡಿದು ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕೇಶವ, ರಾಮು, ದೇವ ಬಂಧಿತ ಆರೋಪಿಗಳು. ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾರ್ಗದರ್ಶನದಲ್ಲಿ 3 ತಂಡಗಳನ್ನು ರಚನೆ ಮಾಡಲಾಗಿತ್ತು. ಮಾನ್ವಿಯ ಇನ್​ಸ್ಪೆಕ್ಟರ್ ವೀರಭದ್ರಯ್ಯ ಸ್ವಾಮಿ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸುವ ಮೂಲಕ ಮೂವರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತ ಪ್ರಸಾದ್

ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಜಮೀನಿಗೆ ಹೊರಟಿದ್ದ ಪ್ರಸಾದ್ ಎಂಬ ವ್ಯಕ್ತಿಯನ್ನ ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಡಲಿಯಿಂದ‌ ಕಡಿದು ಮೂವರು ಹತ್ಯೆ ಮಾಡಿದ್ದರು. ಬಳಿಕ ಅಲ್ಲಿಂದ ಪರಾರಿಯಾಗಿ ತಲೆ ಮರೆಸಿಕೊಂಡಿದ್ದರು. ಪೊಲೀಸರು ತನಿಖೆ ಮಾಡಿ ಬಂಧಿಸಿದ್ದಾರೆ. ಮೃತ ಪ್ರಸಾದ್ ಕಾಂಗ್ರೆಸ್​ನ ಎನ್.ಎಸ್ ಬೋಸರಾಜು ಅವರ ಬೆಂಬಲಿಗನಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಡಲಿಯಿಂದ‌ ಕಡಿದು ಕಾಂಗ್ರೆಸ್ ಮುಖಂಡನ ಹತ್ಯೆ ಕೇಸ್​.. ಮೂವರು ಆರೋಪಿಗಳು ಅಂದರ್; ಕೊಲೆಗೆ ಕಾರಣ?

https://newsfirstlive.com/wp-content/uploads/2023/11/RCR_MURDER_CASE.jpg

Load More