newsfirstkannada.com

ತಲೆ ಮೇಲೆ ಕಲ್ಲು ಎತ್ತಿಹಾಕಿ ಅಪ್ಪನ ಕೊಂದ ಮಗ.. ಪೊಲೀಸರಿಗೆ ಕರೆ ಮಾಡಿ ಪಾಪಿ ಏನಂದ ಅಂದರೆ..

Share :

06-11-2023

    ಲಿಂಗಸುಗೂರು ಠಾಣಾ ವ್ಯಾಪ್ತಿಯಲ್ಲಿ ಭಯಾನಕ ಕೃತ್ಯ

    ಕೊಲೆಗೈದು 112ಕ್ಕೆ ಕರೆ ಮಾಡಿ ಪೋಸ್ ಕೊಟ್ಟ ಮಗ

    ಆರೋಪಿ ಪೊಲೀಸ್ ವಶಕ್ಕೆ, ತೀವ್ರ ವಿಚಾರಣೆ

ರಾಯಚೂರು: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ತಂದೆಯ ಕೊಲೆ ಮಾಡಿರುವ ಘಟನೆ ಲಿಂಗಸುಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಡಿ ತಿಮ್ಮಣ್ಣ (55) ಕೊಲೆಯಾದ ತಂದೆ. ಶೀಲವಂತ (32) ಕೊಲೆಗೈದ ಮಗ.

ಶೀಲವಂತ ವಿರುದ್ಧ ಕುಟುಂಬಸ್ಥರ ಎದುರೇ ತಂದೆಯನ್ನು ಬರ್ಬರವಾಗಿ ಕೊಲೆಗೈದಿರುವ ಆರೋಪ ಕೇಳಿಬಂದಿದೆ. ಅಪ್ಪನನ್ನು ಹತ್ಯೆಗೈದ ಬಳಿಕ 112ಕ್ಕೆ ಕರೆ ಮಾಡಿ ಪೊಲೀಸರಿಗೆ ತಾನೇ ಮಾಹಿತಿ ನೀಡಿದ್ದಾನೆ. ಗಾಂಜಾ, ಮದ್ಯ ಸೇವಿಸಿ ತಾಯಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಮೊದಲು ಕೊಲೆಗೈದು ಪ್ರಕರಣ‌ವನ್ನು ಮುಚ್ಚಿ ಹಾಕಲು ಯತ್ನಿಸಿದ್ದ. ಮನೆಯ ಹೊರಗಡೆ ಹೊಡೆದು ಒಳಗೆ ಎಳದೊಯ್ದು ಮೃತದೇಹ ನಾಶಕ್ಕೆ ಯತ್ನಿಸಿದ್ದ. ಆದರೆ ತೀವ್ರ ರಕ್ತಸ್ರಾವ ಆಗಿದ್ದರಿಂದ ತೀರಾ ಅನಿವಾರ್ಯವಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಸಣ್ಣ ಮಗನನ್ನು ಮನೆಯ ಕೋಣೆಯೊಳಗೆ ಕೂಡಿ ಹಾಕಿ, ಹೆಂಡತಿ ಮಗಳ ಎದುರಿಗೆ ಹತ್ಯೆಗೈದಿದ್ದಾನೆ. ಸದ್ಯ ಪೊಲೀಸರ ವಶದಲ್ಲಿ ಆರೋಪಿ ಇದ್ದಾನೆ. ಸ್ಥಳಕ್ಕೆ ಲಿಂಗಸುಗೂರು ಠಾಣೆ‌ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಲೆ ಮೇಲೆ ಕಲ್ಲು ಎತ್ತಿಹಾಕಿ ಅಪ್ಪನ ಕೊಂದ ಮಗ.. ಪೊಲೀಸರಿಗೆ ಕರೆ ಮಾಡಿ ಪಾಪಿ ಏನಂದ ಅಂದರೆ..

https://newsfirstlive.com/wp-content/uploads/2023/11/RCR_SON.jpg

Load More