ಜೈಪುರ ಎಕ್ಸ್ಪ್ರೆಸ್ನಲ್ಲಿ ಬೆಚ್ಚಿ ಬೀಳಿಸುವ ಕೃತ್ಯ
ರೈಲ್ವೇ ಅಧಿಕಾರಿಯ ಕೃತ್ಯಕ್ಕೆ 3 ಪ್ರಯಾಣಿಕರೂ ಸಾವು
ಕಾನ್ಸ್ಟೇಬಲ್ ಕುಕೃತ್ಯಕ್ಕೆ ಕಾರಣ ಏನು ಗೊತ್ತಾ..?
ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಮುಂಬೈ-ಜೈಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಕಾನ್ಸ್ಟೇಬಲ್ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಸಾಯಿಸಿದ್ದಾನೆ. ಈ ಕೃತ್ಯವು ಮಹಾರಾಷ್ಟ್ರದ ಪಾಲಗರ್ ಬಳಿ ನಡೆದಿದೆ. ಆರೋಪಿತ, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ನ (ಎಪಿಎಫ್) ಪೇದೆ ಚೇತನ್ ಸಿಂಗ್ನನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.
ಮೃತರದಲ್ಲಿ ಓರ್ವ ಹಿರಿಯ ರೈಲ್ವೇ ಭದ್ರತಾ ಅಧಿಕಾರಿ ಕೂಡ ಸೇರಿದ್ದಾರೆ. ತನಿಖಾ ತಂಡ ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಚೇತನ್ ಸಿಂಗ್ನನ್ನು ಗುಜರಾತ್ನಿಂದ ಮುಂಬೈಗೆ ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು. ಕುಟುಂಬದಿಂದ ದೂರ ಬಂದಿದ್ದಕ್ಕೆ ಆತ ಮಾನಸಿಕವಾಗಿ ನೊಂದಿದ್ದ. ಇದರಿಂದ ಕುಗ್ಗಿ ಹೋಗಿದ್ದ ಚೇತನ್ ಸಿಂಗ್ ‘ರೈಲ್ವೇ ಇಲಾಖೆ ವಿರುದ್ಧ ಸಿಟ್ಟಿಗೆದ್ದಿದ್ದ ಎಂದು ತಿಳಿಸಿದ್ದಾರೆ.
ಇದೇ ಕಾರಣಕ್ಕೆ ಇಂದು ಬೆಳಗ್ಗೆ ತನ್ನ ಡ್ಯೂಟಿ-ಇನ್ಚಾರ್ಜ್ ಎಎಸ್ಐ ಟಿಕಾ ರಾಮ್ ಮೀನಾ ಮೇಲೆ ಫೈರಿಂಗ್ ಮಾಡಿದ್ದಾನೆ. ಆತನನ್ನು ಗುಂಡಿಟ್ಟು ಹತ್ಯೆಗೈಯುತ್ತಿದ್ದಂತೆ ಮತ್ತೊಂದು ಬೋಗಿಗೆ ಹೋಗಿದ್ದಾನೆ. ಅಲ್ಲಿ ಮೂವರು ಪ್ಯಾಸೆಂಜರ್ ಮೇಲೆ ಫೈರಿಂಗ್ ಮಾಡಿ ಕಗ್ಗೊಲೆ ಮಾಡಿದ್ದಾನೆ. ಸದ್ಯ 30 ವರ್ಷದ ಆರ್ಪಿಎಫ್ ಪೇದೆಯನ್ನು ನಾವು ವಶಕ್ಕೆ ಪಡೆದಿದ್ದೇವೆ. ವಶಕ್ಕೆ ಪಡೆಯುವ ವೇಳೆ ಗನ್ ಜೊತೆ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ. ಕೊನೆಗೂ ನಾವು ಮಿರಾ ರೋಡ್ ಮತ್ತು ದಹಿಸರ್ ಬಳಿ ಆತನನ್ನು ವಶಕ್ಕೆ ಪಡೆದುಕೊಂಡೆವು ಎಂದಿದ್ದಾರೆ. ಇನ್ನು ಮೃತ ನಾಲ್ವರನ್ನು ಕಂಡಿವಲಿ ಶತಾಬ್ದಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆರೋಪಿ ಬಳಿಯಿದ್ದ ಬಂದೂಕನ್ನು ಕೂಡ ಸೀಜ್ ಮಾಡಿದ್ದೇವೆ ಅಂತಾ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ