newsfirstkannada.com

ಮುಂದಿನ ಐದು ದಿನ ಭಾರೀ ಮಳೆ.. ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು..?

Share :

30-10-2023

    ಕರ್ನಾಟಕದ ಜನತೆಗೆ ಕೈಕೊಟ್ಟ ಮುಂಗಾರು ಮಳೆ

    ತಾಪಮಾನ ಏರಿಕೆಯಿಂದ ಬಳಲಿ ಹೋಗಿದ್ದ ಜನ!

    ಇಂದು ಸಂಜೆ ಸುರಿದ ಮಳೆಯಿಂದ ಸಣ್ಣ ರಿಲೀಫ್​

ಬೆಂಗಳೂರು: ಮುಂಗಾರು ಕೈಕೊಟ್ಟ ಕಾರಣ ಬೆಂಗಳೂರು ಮಂದಿ ತಾಪಮಾನ ಏರಿಕೆಯಿಂದ ಬಳಲಿ ಹೋಗಿದ್ದರು. ಹೀಗೆ ಬಳಲಿ ಹೋಗಿದ್ದ ಜನರಿಗೆ ಇಂದು ಸಂಜೆ ಸುರಿದ ಮಳೆ ರಿಲೀಫ್​ ಕೊಟ್ಟಿದೆ.

ಹೌದು, ಇಂದು ಬೆಂಗಳೂರಿನಲ್ಲಿ ಮಳೆಯಾಗಿದೆ. ಸಂಜೆ ಸುರಿದ ಮಳೆಯಿಂದ ಕೆಲ ಕಾಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಹೀಗಾಗಿ ಸತತ ಒಂದು ಗಂಟೆಗಳ ಕಾಲ ಜನ ಪರದಾಡುವಂತಾಯ್ತು.

ಮುಂದಿನ ಐದು ದಿನಗಳ ಕಾಲ ಮಳೆ

ಸಿಲಿಕಾನ್​ ಸಿಟಿ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಮುಂದಿನ ಐದು ದಿನಗಳ ಕಾಲ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹೇಳಿದೆ.

ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ದಾವಣಗೆರೆ, ಹಾಸನ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ವಿಜಯನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಸೇರಿ ಎಲ್ಲೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದಿನ ಐದು ದಿನ ಭಾರೀ ಮಳೆ.. ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು..?

https://newsfirstlive.com/wp-content/uploads/2023/07/rains-1.jpg

Load More