newsfirstkannada.com

ಕಳೆದೊಂದು ಗಂಟೆಯಿಂದ ಬೆಂಗಳೂರಲ್ಲಿ ಭರ್ಜರಿ ಮಳೆ; ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ ಇಲ್ವಾ?

Share :

19-08-2023

    ರಾಜ್ಯದಲ್ಲಿ ಮತ್ತೆ ಎಡಬಿಡದೆ ಸುರಿಯುತ್ತಿರೋ ಮಳೆ

    ಜೋರು ಮಳೆಯಿಂದ ಸಾರ್ವಜನಿಕರು ಹೈರಾಣು..!

    ಸಿಲಿಕಾನ್​ ಸಿಟಿಯಲ್ಲಿ ಕರೆಂಟ್​ ಸ್ಥಗಿತ, ಎಲ್ಲೆಲ್ಲಿ ಗೊತ್ತಾ?

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಮತ್ತೆ ಮಳೆ ಬೀಳುತ್ತಿದೆ. ಕಳೆದೊಂದು ಗಂಟೆಯಿಂದ ಸತತವಾಗಿ ಸುರಿಯುತ್ತಿರೋ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಟ್ರಾಫಿಕ್​​ ಜಾಮ್​ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ನಗರದ ಕಾರ್ಪೋರೇಷನ್​ ಸರ್ಕಲ್​​, ಮಲ್ಲೇಶ್ವರಂ, ಬನಶಂಕರಿ, ಕೆ.ಆರ್​ ಮಾರ್ಕೆಟ್​​, ವಿಜಯನಗರ, ಯಶವಂತಪುರ, ಆರ್​.ಆರ್​ ನಗರ, ಜಯನಗರ, ಸಂಜಯ್​ ನಗರ, ಕೆ.ಆರ್​​ ಸರ್ಕಲ್​​ ಎಲ್ಲೆಡೆ ಜೋರು ಮಳೆಯಾಗುತ್ತಿದೆ. ಹೀಗಾಗಿ ಕೆ.ಆರ್​​ ಸರ್ಕಲ್​​ ಸೇರಿದಂತೆ ನಗರ ಪ್ರಮುಖ ಅಂಡರ್​ ಪಾಸ್​ಗಳನ್ನು ಕ್ಲೋಸ್​ ಮಾಡಲಾಗಿದೆ.

ಯಾವುದೇ ಅನಾಹುತ ಸಂಭವಿಸದಂತೆ ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸಿದೆ. ಕೇವಲ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಹಳೇ ಮೈಸೂರು, ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲೂ ಮಳೆ ಸುರಿಯುತ್ತಿದೆ. ಹೀಗಾಗಿ ಹಲವೆಡೆ ಮಳೆ ನಿಲ್ಲುವವರೆಗೂ ಕರೆಂಟ್​ ತೆಗೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳೆದೊಂದು ಗಂಟೆಯಿಂದ ಬೆಂಗಳೂರಲ್ಲಿ ಭರ್ಜರಿ ಮಳೆ; ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ ಇಲ್ವಾ?

https://newsfirstlive.com/wp-content/uploads/2023/08/State-Rain.jpg

Load More